ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth Movie) ಬಗ್ಗೆ ಇರೋ ಕಥೆಗಳು ಈಗಲೂ ರೋಚಕವಾಗಿಯೇ ಇವೆ. ಅಪಾರ ಅಭಿಮಾನಿಗಳ ಹೊಂದಿದ್ದ ರಜನಿಕಾಂತ್, ಬೆಂಗಳೂರಿಗೆ ಬರುವಾಗ ಮಾರುವೇಷದಲ್ಲಿಯೇ ಬರ್ತಾ ಇದ್ದರು. ಅವರ ಗೆಳೆಯ ರಾಜಬಹದ್ದೂರ್ ಅದನ್ನ ಆಗಾಗ ನೆನಪಿಸಿಕೊಳ್ತಿದ್ದರು. ರಜನಿಕಾಂತ್ (Rajinikanth Cinema) ಹಾಗೆ ಬೆಂಗಳೂರಿಗೆ ಬಂದಾಗ, ರಾಜಬಹದ್ದೂರ್ ಅವರ ಜೊತೆಗೆ ಇರ್ತಾ ಇದ್ದರು. ರಾಜಬಹದ್ದೂರ್ ಮನೆಗೂ (Rajinikanth Movie) ರಜನಿ ಬಂದು ಹೋಗಿದ್ದು ಇದೆ. ಆದರೆ ರಜನಿಕಾಂತ್ ಈಗ ಹಾಗೆ ಬರೋದನ್ನ ಬಿಟ್ಟಿದ್ದಾರೆ. ಬೆಂಗಳೂರಿಗೆ ಬರುವ (Rajinikanth Kannada Film) ಅವಶ್ಯಕತೆ ಇದ್ದರೇ, ಆಗಾಗ ಬಂದು ಹೋಗ್ತಾರೆ. ಅದೇ ರಜನಿಕಾಂತ್ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ಪಾತ್ರಗಳನ್ನ ಬೇಡ ಅಂತ ಬಿಟ್ಟಿದ್ದು ಇದೆ. ಅಂತಹ ಪಾತ್ರಗಳ ಒಂದು ಸ್ಟೋರಿ ಇಲ್ಲಿದೆ ಓದಿ.
ಸೂಪರ್ ಸ್ಟಾರ್ ರಜನಿಕಾಂತ್ ಆ ಪಾತ್ರಗಳನ್ನ ಯಾಕೆ ಬಿಟ್ಟರು!
ರಜನಿಕಾಂತ್ ಸೂಪರ್ ಸ್ಟಾರ್ ಆದ್ಮೇಲೆ ಕನ್ನಡ ಸಿನಿಮಾಗಳನ್ನು ಮಾಡಲೇ ಇಲ್ಲ ಬಿಡಿ. ಆದರೆ ಅದಕ್ಕೂ ಮೊದಲು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕೆಲವು ಪಾತ್ರಗಳನ್ನ ಒಲ್ಲೆ ಎಂದು ಬಿಟ್ಟು ಹೋಗಿದ್ದಾರೆ.
ಪುಟ್ಟಣ್ಣ ಕಣಗಾಲ ಅವರ ನಾಗರಹಾವು ಸಿನಿಮಾದಲ್ಲಿದ್ದ ಜಲೀಲನ ಪಾತ್ರವನ್ನ ರಜನಿಕಾಂತ್ ಮಾಡಬೇಕಿತ್ತು. ಆದರೆ ಅದನ್ನ ಅವರೇ ಬಿಟ್ಟರೋ, ಇಲ್ಲ ಪುಟ್ಟಣ್ಣ ಅವರೇ ಕಳಿಸಿದ್ರೋ ಅನ್ನುವುದು ಎಲ್ಲೂ ದಾಖಲಾಗಿಲ್ಲ ನೋಡಿ.
ಆದರೆ ಇದನ್ನ ಮ್ಯಾನೇಜ್ ಮಾಡೋಕೋ ಏನೋ, ಪುಟ್ಟಣ್ಣನವರ ಕಥಾಸಂಗಮ ಚಿತ್ರದಲ್ಲಿ ರಜನಿಕಾಂತ್ ವಿಲನ್ ಶೇಡ್ ಇರೋ ಒಂದು ಕಥೆಯಲ್ಲಿ ಅಭಿನಯಿಸಿದ್ದರು.
ರಜನಿಕಾಂತ್ ಪಾತ್ರಗಳಿಗೆ ಅಂದು ಗ್ರೇ ಶೇಡ್ ಟಚ್
ಆದರೆ ಡಾಕ್ಟರ್ ರಾಜ್ಕುಮಾರ್ ಮತ್ತು ಜಯಮಾಲಾ ಅಭಿನಯದ ಗಿರಿಕನ್ಯೆ ಚಿತ್ರದಲ್ಲೂ ಒಂದು ಇಂತಹದ್ದೇ ಪಾತ್ರ ಬಿಟ್ಟು ಹೋದ ಕಥೆ ಇದೆ. ನಿಜ, ರಜನಿಕಾಂತ್ ಅವರನ್ನ ಆಗ ವಿಲನ್ ಪಾತ್ರಗಳೇ ಹುಡುಕಿಕೊಡು ಬರ್ತಾ ಇದ್ದವು.
ದೊರೆ-ಭಗವಾನ್ ನಿರ್ದೇಶನದ ಗಿರಿಕನ್ಯೆ ಚಿತ್ರದ ಹಿಂದೇನೆ ಕೂಡ ಇಂತಹದ್ದೇ ಒಂದು ಇಂಟ್ರಸ್ಟಿಂಗ್ ಕಥೆ ಇದೆ. ಇಲ್ಲೂ ರಜನಿಕಾಂತ್ ಅವರೇ ಚಿತ್ರದ ಒಂದು ಪಾತ್ರಕ್ಕೆ ಮೊದಲ ಆಯ್ಕೆ ಆಗಿದ್ದರು.
ಗಿರಿಕನ್ಯೆ ಚಿತ್ರದಲ್ಲಿ ರಜನಿಕಾಂತ್ ಯಾವ ಪಾತ್ರ ಮಾಡಬೇಕಿತ್ತು?
ಎಲ್ಲರಿಗೂ ಗೊತ್ತಿರೋ ಹಾಗೆ ಗಿರಿಕನ್ಯೆ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅಭಿನಯಿಸಿದ್ದಾರೆ. ಹಿರಿಯ ನಟ ಸಂಪಂತ್ ಇದ್ದಾರೆ. ವಜ್ರಮುನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಇವರಲ್ಲಿ ಒಂದು ಪಾತ್ರವನ್ನ ರಜನಿಕಾಂತ್ ನಿರ್ವಹಿಸಬೇಕಿತ್ತು. ರಜನಿಕಾಂತ್ ಅವರೇ ಈ ಚಿತ್ರದಲ್ಲಿ ವಿಲನ್ ರೋಲ್ಗೆ ಮೊದಲು ಆಯ್ಕೆ ಆಗಿದ್ದರು.
ಗಿರಿಕನ್ಯೆ ಚಿತ್ರದ ವಿಲನ್ ಪಾತ್ರಕ್ಕೆ ರಜನಿನೇ ಮೊದಲ ಆಯ್ಕೆ
ಡೈರೆಕ್ಟರ್ ದೊರೆ-ಭಗವಾನ್ ಚಿತ್ರದ ವಿಲನ್ ಪಾತ್ರಕ್ಕೆ ರಜನಿಕಾಂತ್ ಅವರನ್ನ ಆಯ್ಕೆ ಕೂಡ ಮಾಡಿದ್ದರು. ಆದರೆ ಅದೇನೋ ಕಾರಣದಿಂದ ರಜನಿಕಾಂತ್ ಆ ಒಂದು ಪಾತ್ರವನ್ನ ಮಾಡಲು ಆಗಲೇ ಇಲ್ಲ.
ಆ ಪಾತ್ರದಲ್ಲಿ ಆಮೇಲೆ ಮಿಂಚಿದ್ದು ಬೇರೆ ಯಾರೋ ಅಲ್ಲ. ವಜ್ರಮುನಿ ಅವರೇ ಈ ಒಂದು ಪಾತ್ರವನ್ನ ಮಾಡಿದ್ದರು. ವಿಲನ್ ಪಾತ್ರದಲ್ಲಿ ಆಗ ವಜ್ರಮುನಿ ಅವರು ಡಾಕ್ಟರ್ ರಾಜ್ಕುಮಾರ್ ಎದುರಿಗೆ ಅಬ್ಬರಿಸಿದ್ದರು.
ಕನ್ನಡದಲ್ಲಿ ಬಹುತೇಕ ಗ್ರೇ ಶೇಡ್ನಲ್ಲಿ ರಜನಿಕಾಂತ್ ನಟನೆ
ರಜನಿಕಾಂತ್ ಒಂದು ವೇಳೆ ಗಿರಿಕನ್ಯೆ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದರೇ, ಮುಂದೆ ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದರೋ ಇಲ್ಲವೋ, ಸಾಮಾನ್ಯವಾಗಿ ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳನ್ನ ನೀವು ಒಮ್ಮೆ ಗಮನಿಸಿದ್ರೆ, ರಜನಿಕಾಂತ್ ಎಲ್ಲ ಪಾತ್ರಗಳಲ್ಲೂ ಗ್ರೇ ಶೇಡ್ ಇದ್ದದ್ದು ಕಂಡು ಬರುತ್ತದೆ.
ಇದನ್ನೂ ಓದಿ: Kannada Cinema: ಒಳ್ಳೆ ಸಿನಿಮಾಗಳು ಮಲ್ಟಿಪ್ಲೆಕ್ಸ್ಗೆ ಸೀಮಿತಾನಾ? ಸಿಂಗಲ್ ಥಿಯೇಟರ್ನಲ್ಲಿ ಬರೋದಿಲ್ವಾ?
ಹಾಗೆ ಗಿರಿಕನ್ಯೆ ಚಿತ್ರದಲ್ಲಿ ರಜನಿಕಾಂತ್ ಅಭಿನಯಸಿದ್ದರೇ ರಾಜ್ ಕುಮಾರ್ ಎದುರು ಅಬ್ಬರಿಸಬೇಕಿತ್ತು. ಅದನ್ನ ಅರ್ಥ ಮಾಡಿಕೊಂಡು ರಜನಿಕಾಂತ್ ತಮ್ಮ ರೋಲ್ ಒಪ್ಪಲಿಲ್ಲ ಅಂತಲೂ ಹೇಳಬಹುದೇನೋ. ಇತಿಹಾಸ ಪುಟದಲ್ಲಿ ಇಂತಹ ಕಥೆಗಳು ಸಾಕಷ್ಟು ಇವೆ. ಅದೇ ರೀತಿ ರಜನಿಕಾಂತ್ ಲೈಫ್ಲ್ಲೂ ಇಂತಹ ಇನ್ನೂ ಅನೇಕ ರೋಚಕತೆಗಳು ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ