• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajinikanth; ರಾಕೆಟ್ರಿ ಸಿನಿಮಾ ಇಷ್ಟಪಟ್ಟ ರಜನಿ; ಹೀರೋ ಮಾಧವನ್, ರಿಯಲ್ ಹೀರೋ ನಂಬಿ ನಾರಾಯಣನ್​ಗೆ ತಲೈವಾ ಸನ್ಮಾನ

Rajinikanth; ರಾಕೆಟ್ರಿ ಸಿನಿಮಾ ಇಷ್ಟಪಟ್ಟ ರಜನಿ; ಹೀರೋ ಮಾಧವನ್, ರಿಯಲ್ ಹೀರೋ ನಂಬಿ ನಾರಾಯಣನ್​ಗೆ ತಲೈವಾ ಸನ್ಮಾನ

ರಜನಿಕಾಂತ್

ರಜನಿಕಾಂತ್

Rocketry: The Nambi Effect: ಇದೀಗ ಈ ಸಿನಿಮಾವನ್ನು ನೋಡಿರುವ ಸೂಪರ್ ಸ್ಟಾರ್ ರಜನಿ ಕಾಂತ್ ಸಹ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆರ್​.ಮಾಧವನ್ ಮತ್ತು ನಂಬಿ ನಾರಾಯಣನ್​​ ಇಬ್ಬರನ್ನು ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.

  • Share this:

ರಾಕೆಟ್ರಿ: ದಿ ನಂಬಿ ಎಫೆಕ್ಟ್‌,  (Rocketry: The Nambi Effect) ನಟ ಆರ್​ ಮಾಧವನ್ (R. Madhavan) ಮೊದಲ ಬಾರಿ ನಿರ್ದೇಶನ ಮಾಡಿರುವ ಸಿನಿಮಾ. ವಿಜ್ಞಾನಿ ನಂಬಿ ನಾರಾಯಣನ್​ (Nambi Narayanan) ಅವರ ಜೀವನ ಆಧರಿತ ಸಿನಿಮಾ ಇದಾಗಿದ್ದು, ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಜುಲೈ 1 ರಂದು ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಚಿತ್ರರಂಗದ (Film Industry) ಅನೇಕ ಗಣ್ಯರು ಇಷ್ಟಪಟ್ಟಿದ್ದು, ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಆರ್. ಮಾಧವನ್  ನಾಯಕನಾಗಿ ನಟಿಸಿರುವ ಜೊತೆಗೆ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.ಈ ಸಿನಿಮಾದಲ್ಲಿ ನಟರಾದ ಸಿಮ್ರಾನ್, ರಂಜಿತ್ ಕಪೂರ್ ಮತ್ತು ಸೂರ್ಯ ಅವರ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 


ಮನೆಗೆ ಕರೆದು ಸನ್ಮಾನ ಮಾಡಿದ ರಜನಿ


ಇದೀಗ ಈ ಸಿನಿಮಾವನ್ನು ನೋಡಿರುವ ಸೂಪರ್ ಸ್ಟಾರ್ ರಜನಿ ಕಾಂತ್ ಸಹ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆರ್​.ಮಾಧವನ್ ಮತ್ತು ನಂಬಿ ನಾರಾಯಣನ್​​ ಇಬ್ಬರನ್ನು ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ. ಈ ಸಮಯದಲ್ಲಿ ರಜನಿ ಕಾಲಿಗೆ ಬಿದ್ದು ಮಾಧವನ್ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟ ಮಾಧವನ್ ಸಂತಸ ವ್ಯಕ್ತಪಡಿಸಿದ್ದು, ಕೆಲ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.


ರಜನಿ ಕಾಂತ್ ಅವರೇ ಒಂದು ಚಿತ್ರರಂಗದಂತೆ, ನಂಬಿ ನಾರಾಯಣನ್​​ ರೀತಿಯ ಲೆಜೆಂಟ್​ ಎದುರಿಗೆ ಮತ್ತೊಬ್ಬ ಲೆಜೆಂಡ್​ ರಜನಿ ಕಾಂತ್ ಸಾರ್ ಅವರ ಆಶೀರ್ವಾದ ಪಡೆದಿರುವ ನಾನೇ ಧನ್ಯ. ನಿಮ್ಮ ಪ್ರೀತಿ ನಮಗೆ ಇನ್ನೂ ಹೆಚ್ಚಿನ ಪ್ರೇರಣೆ ನೀಡುತ್ತದೆ. ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಇನ್ನು ರಜನಿ ಕಾಂತ್ ಸಿನಿಮಾವನ್ನು ಇಷ್ಟಪಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಸಿನಿಮಾಗಳನ್ನು ಹೊಗಳಿ ಚಿತ್ರತಂಡವನ್ನು ಕರೆಸಿ ಸನ್ಮಾನಿಸಿದ್ದರು. ಇತ್ತೀಚೆಗೆ ಕನ್ನಡದ ರಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ 777 ಚಾರ್ಲಿಯನ್ನು ಸಹ ರಜನಿ ಮೆಚ್ಚಿಕೊಂಡಿದ್ದರು.


ಇದನ್ನೂ ಓದಿ: ವಿಕ್ರಾಂತ್ ರೋಣ ನಟಿ ನೀತಾ ಆಯ್ಕೆಯಾಗಿದ್ದು ಹೀಗಂತೆ, ಈ ಸುಂದರಿ ಬಗ್ಗೆ ನಿಮಗೆಷ್ಟು ಗೊತ್ತು?
 
 

 

 


View this post on Instagram


 

 

 

 

A post shared by R. Madhavan (@actormaddy)

ಬಹಳ ಮೆಚ್ಚುಗೆಗೆ ಪಾತ್ರವಾಗಿದ್ದ ಸಿನಿಮಾ


ರಾಕೆಟ್ರಿ: ದಿ ನಂಬಿ ಎಫೆಕ್ಟ್' ಗೂಢಚಾರಿಕೆ ಹಗರಣದ ಸುಳಿಯಲ್ಲಿ ಸಿಕ್ಕಿಬಿದ್ದ ಮತ್ತು ಬೇಹುಗಾರಿಕೆಯ ಸುಳ್ಳು ಆರೋಪಕ್ಕೆ ಗುರಿಯಾದ ಮಾಜಿ ಇಸ್ರೋ ವಿಜ್ಞಾನಿ ಮತ್ತು ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. ಚಿತ್ರವು ಜುಲೈ 1, 2022 ರಂದು ಚಿತ್ರಮಂದಿರಗಳಿಗೆ ಬರಲಿದೆ. ನೈಜ್ಯ ಕಥೆಯಾಧಾರಿತ 'ರಾಕೆಟ್ರಿ: ದಿ ನಂಬಿ ಎಫೆಕ್ಟ್'ನಲ್ಲಿ ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ, ರಾನ್ ಡೊನೈಚೆ, ಸಿಮ್ರಾನ್, ರಜತ್ ಕಪೂರ್, ರವಿ ರಾಘವೇಂದ್ರ, ಮಿಶಾ ಘೋಷಾಲ್, ಗುಲ್ಶನ್ ಗ್ರೋವರ್, ಕಾರ್ತಿಕ್ ಕುಮಾರ್ ಮತ್ತು ದಿನೇಶ್ ಪ್ರಭಾಕರ್ ಸಹ ಅಭಿನಯಿಸಿದ್ದಾರೆ.


ಇದನ್ನೂ ಓದಿ: ನೂರು ಕೋಟಿ ಕ್ಲಬ್ ಸೇರಿದ ವಿಕ್ರಾಂತ್ ರೋಣ, ಕಿಚ್ಚನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!


ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಮತ್ತು ಬರೆದಿರುವ ಮಾಧವನ್ ಅವರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಅನ್ನು ಹಿಂದಿ, ತಮಿಳು ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.

Published by:Sandhya M
First published: