ಮಲಯಾಳಂ (Malayalam) ಸೂಪರ್ ಸ್ಟಾರ್ ಮೋಹನ್ ಲಾಲ್ (Mohan Lal) ಅವರಿಗೆ ಸಂಕಷ್ಟ ಎದುರಾಗಿದೆ. ಎರಡು ಜೋಡಿ ಆನೆ ದಂತಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಕಾರಣ ಅವರ ವಿರುದ್ಧ ದಾಖಲಿಸಲಾದ ವನ್ಯಜೀವಿ ಅಪರಾಧ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಬೇಕಾಗಿ ಬಂದಿದೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯವು ಗುರುವಾರ ಮೋಹನ್ ಲಾಲ್ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕ್ರಿಯೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರದ ಮನವಿಯನ್ನು ವಜಾಗೊಳಿಸಿದ್ದು, ತನಿಖೆ ಎದುರಿಸಲು ಮೋಹನ್ ಲಾಲ್ ಸಿದ್ದವಾಗಬೇಕಿದೆ.
ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿಯನ್ನು ಯಾವ ಆಧಾರದ ಮೇಲೆ ತಿರಸ್ಕರಿಸಿದೆ ಎಂಬ ಕಾರಣ ತಿಳಿದುಬಂದಿಲ್ಲ. ಆದರೆ ನ್ಯಾಯಾಲಯವು ಆದೇಶದ ಪ್ರತಿಯನ್ನು ಅಪ್‌ಲೋಡ್ ಮಾಡಿದಾಗ ಮಾತ್ರ ತಿಳಿಯುತ್ತದೆ ಎನ್ನಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಲಾಲ್ ಅವರಿಗೆ ಅರಣ್ಯ ಇಲಾಖೆಯು ಮಾಲೀಕತ್ವ ದಾಖಲೆ ನೀಡಿತ್ತು, ಹಾಗಾಗಿ ಈ ಪ್ರಕರಣ ಕೈ ಬಿಡಬೇಕು ಎಂದು ಕೇರಳ ಸರ್ಕಾರವು ಅವರ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಸರ್ಕಾರದ ಮನವಿ ತಿರಸ್ಕರಿಸಿದ ಕೋರ್ಟ್
ಇಲಾಖೆ ಮೋಹನ್ ಲಾಲ್ ಅವರ ಮನೆಯಲ್ಲಿದ್ದ ಆನೆ ದಂತಗಳಿಗೆ ನೀಡಿರುವ ಮಾಲೀಕತ್ವ ಪ್ರಮಾಣ ಪತ್ರಕ್ಕೆ ಮಾನ್ಯತೆ ಇಲ್ಲ ಎಂದು ಸರ್ಕಾರ ಸಲ್ಲಿಸಿದ ಅರ್ಜಿಯ ವಿರುದ್ದವಾಗಿ ವಕೀಲರು ವಾದಿಸುವಲ್ಲಿ ಯಶಸ್ವಿಯಾಗಿದ್ದು, ಎರಡು ಆನೆದಂತ ಮತ್ತು ಆನೆದಂತದಿಂದ ಮಾಡಿದ 13 ಕಲಾಕೃತಿಗಳ ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ. ಇಷ್ಟು ವರ್ಷಗಳಾದರು ಸಹ ಈ ಪ್ರಕರಣದ ಕುರಿತು ಯಾವುದೇ ರೀತಿ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದೆ. ಈ ಕಾರಣದಿಂದ ವಾದ ಹಾಗೂ ಪ್ರತಿವಾದ ಆಲಿಸಿದ ನ್ಯಾಯಾಲಯ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದೆ. ಮೋಹನ್ ಲಾಲ್ ವಿರುದ್ಧದ ಪ್ರಕರಣವನ್ನು ಮುಂದುವರೆಸಿ, ತನಿಖೆ ನಡೆಸುವಂತೆ ಆದೇಶಿಸಿದೆ.
ಜೇಮ್ಸ್ ಮ್ಯಾಥ್ಯೂ ಮತ್ತು ಎ. ಎ. ಪೌಲೋಸ್ ಎಂಬುವವರು ಸರ್ಕಾರದ ಅರ್ಜಿಯನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಿದ್ದರು. ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ವಿಚಾರಣಾ ನ್ಯಾಯಾಲಯವು ವಜಾಗೊಳಿಸಿದ್ದರೂ, ಕೇರಳ ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿತ್ತು ಮತ್ತು ಅವರ ವಾದವನ್ನು ಮಂಡಿಸಲು ಅವರಿಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: ಈ ಸಲ ಬಟ್ಟೆ ಬೇಡ, ಜೇಡರ ಬಲೆಯೇ ಸಾಕು ಎಂದು ಅದನ್ನೇ ತೊಟ್ಟ ಉರ್ಫಿ, ನೀವೂ ನೋಡ್ಬಿಡಿ
2012ರಲ್ಲಿ ಆದಾಯ ತೆರಿಗೆ ಇಲಾಖೆ ಥೇವಾರದಲ್ಲಿನ ಮೋಹನ್ಲಾಲ್ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಮೋಹನ್ಲಾಲ್ ಮನೆಯಲ್ಲಿದ್ದ ಆನೆ ದಂತವು ಅಧಿಕಾರಿಗಳ ಕೈಗೆ ಸಿಕ್ಕಿತ್ತು. ಆನೆ ದಂತವನ್ನು ವಶಪಡಿಸಿಕೊಂಡ ಅಧಿಕಾರಿಗಳು ಅರಣ್ಯ ಇಲಾಖೆಯ ಸಂರಕ್ಷಣೆ ಕಾಯ್ದೆಯಡಿ ಮೋಹನ್ಲಾಲ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2019ರಲ್ಲಿ ಇಷ್ಟು ವರ್ಷಗಳ ಹಿಂದೆ ಈ ಪ್ರಕರಣ ದಾಖಲಾಗಿದ್ದರೂ ಪ್ರಕರಣದ ವಿರುದ್ಧ ಯಾವುದೇ ಕ್ರಮ ಕೈಗೊಂಡಿರದ ಬಗ್ಗೆ ಕೇರಳ ಹೈ ಕೋರ್ಟ್ ಪ್ರಶ್ನಿಸಿತ್ತು.
ಜೈಲು ಪಾಲಾಗ್ತಾರಾ ಲಾಲೆಟ್ಟ
ಅಲ್ಲದೇ ಒಂದು ವೇಳೆ ಆರೋಪ ಸಾಬೀತಾದಲ್ಲಿ ಮೋಹನ್ ಲಾಲ್ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅರಣ್ಯ ಕಾಯ್ದೆಯಡಿ ಏಳು ವರ್ಷಗಳ ಒಳಗೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು. ಇನ್ನು ಈಗಾಗಲೇ ನ್ಯಾಯಾಲಯ ಆದೇಶ ನೀಡಿರುವುದರಿಂದ ಈ ಪ್ರಕರಣವನ್ನು ಎದುರಿಸಲೇಬೇಕಾಗಿದೆ. ಸದ್ಯದ ಪ್ರಕಾರ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮೋಹನ್ ಲಾಲ್ಗೆ ಯಾವುದೇ ಅವಕಾಶವಿಲ್ಲ, ತನಿಖೆಗೆ ಸಹಕರಿಸಲೇಬೇಕಿದೆ.
ಇದನ್ನೂ ಓದಿ: ಗುಡ್ ಬೈ ಎಂದ ಶ್ರದ್ಧಾ ಶ್ರೀನಾಥ್, ಹೀಗ್ಯಾಕಂದ್ರು ಅನ್ನೋ ಗೊಂದಲದಲ್ಲಿ ಫ್ಯಾನ್ಸ್
ಸಿನಿಮಾ, ಜಾಹೀರಾತು, ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಮೋಹನ್ ಲಾಲ್ ಈ ಸಂಕಷ್ಟದಿಂದ ಹೇಗೆ ಪಾರಾಗುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ