• Home
  • »
  • News
  • »
  • entertainment
  • »
  • Return to Dust: ಚಿತ್ರಮಂದಿರಗಳಿಂದ ಕಣ್ಮರೆಯಾದ ಸೂಪರ್ ಹಿಟ್ ಚೈನೀಸ್ ಚಲನಚಿತ್ರ ರಿಟರ್ನ್ ಟು ಡಸ್ಟ್! ಕಾರಣ ಏನು?

Return to Dust: ಚಿತ್ರಮಂದಿರಗಳಿಂದ ಕಣ್ಮರೆಯಾದ ಸೂಪರ್ ಹಿಟ್ ಚೈನೀಸ್ ಚಲನಚಿತ್ರ ರಿಟರ್ನ್ ಟು ಡಸ್ಟ್! ಕಾರಣ ಏನು?

ರಿಟರ್ನ್ ಟು ಡಸ್ಟ್

ರಿಟರ್ನ್ ಟು ಡಸ್ಟ್

ರಿಟರ್ನ್ ಟು ಡಸ್ಟ್, ಜುಲೈ 8 ರಂದು ಬಿಡುಗಡೆಯಾದ ಗ್ರಾಮೀಣ ಜೀವನದ ಕಷ್ಟಗಳ ಚಿತ್ರಣದ ಕಥೆ ಆಧಾರಿತ ಹಾಗೂ ಪ್ರೇಮಕಥೆಯ ಹಂದರವನ್ನೊಳಗೊಂಡ ಚಲನಚಿತ್ರವಾಗಿದೆ. ಕೇವಲ ಎರಡು ತಿಂಗಳೊಳಗೆ, ಇದು 100 ಮಿಲಿಯನ್ ಯುವಾನ್ ($14 ಮಿಲಿಯನ್) ಸಂಗ್ರಹಿಸಿತು. ಇದು ಫೆಬ್ರವರಿಯಲ್ಲಿ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಕೂಡ ಚಿತ್ರದ ಕುರಿತಾದ ಚರ್ಚೆಗಳನ್ನು ನಿರ್ಬಂಧಿಸಲಾಗಿದೆ.

ಮುಂದೆ ಓದಿ ...
  • Share this:

ಬಾಕ್ಸ್ ಆಫೀಸ್‌ನಲ್ಲಿ (Box Office) ಉತ್ತಮ ಪ್ರದರ್ಶನ ನೀಡಿದ ಅಂತೆಯೇ ಮೆಚ್ಚುಗೆ ಪಡೆದ ಚೈನೀಸ್ ಚಲನಚಿತ್ರವನ್ನು ಚಿತ್ರಮಂದಿರ ಹಾಗೂ ಸ್ಟ್ರೀಮಿಂಗ್ ಸೇವೆಗಳಿಂದ ಹಿಂತೆಗೆದುಕೊಳ್ಳಲಾಗಿದ್ದು ಇದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.  ರಿಟರ್ನ್ ಟು ಡಸ್ಟ್ (Return to dust), ಜುಲೈ 8 ರಂದು ಬಿಡುಗಡೆಯಾದ ಗ್ರಾಮೀಣ ಜೀವನದ ಕಷ್ಟಗಳ ಚಿತ್ರಣದ ಕಥೆ ಆಧಾರಿತ ಹಾಗೂ ಪ್ರೇಮಕಥೆಯ ಹಂದರವನ್ನೊಳಗೊಂಡ ಚಲನಚಿತ್ರವಾಗಿದೆ (Movie). ಕೇವಲ ಎರಡು ತಿಂಗಳೊಳಗೆ, ಇದು 100 ಮಿಲಿಯನ್ ಯುವಾನ್ ($14 ಮಿಲಿಯನ್) ಸಂಗ್ರಹಿಸಿತು. ಇದು ಫೆಬ್ರವರಿಯಲ್ಲಿ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಇನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಕೂಡ ಚಿತ್ರದ ಕುರಿತಾದ ಚರ್ಚೆಗಳನ್ನು ನಿರ್ಬಂಧಿಸಲಾಗಿದೆ.

ಗ್ರಾಮೀಣ ಜೀವನ ಹಾಗೂ ದಂಪತಿಗಳ ಕಥೆ
ಗ್ರಾಮೀಣ ಜೀವನವನ್ನು ಅರ್ಥಪೂರ್ಣವಾಗಿ ಬಿಚ್ಚಿಟ್ಟದ್ದಕ್ಕಾಗಿ ಪ್ರಶಂಸೆಯನ್ನು ಗಳಿಸಿದರೆ ರಾಷ್ಟ್ರೀಯವಾದಿ ಅಭಿಪ್ರಾಯಗಳು ಈ ಪ್ರಶಂಸೆಗೆ ವಿರುದ್ಧವಾಗಿದ್ದವು ಏಕೆಂದರೆ ಚೀನಾವನ್ನು ಇದು ಕೆಟ್ಟದಾಗಿ ಬಿಂಬಿಸಿದೆ ಎಂಬುದು ಚಿತ್ರದ ಕುರಿತಾಗಿರುವ ವಿರೋಧಾಭಿಪ್ರಾಯಗಳಾಗಿವೆ.


ಇದನ್ನೂ ಓದಿ: Kanatara Movie: ಹೆಕ್ಕ ತಿಂಬಾಳೆ, ಕುಪ್ಪಳ ಮಂಜಿ! ರಿಷಬ್​ಗೆ ಹೊಸ ಹೆಸರಿಟ್ರು ಅಚ್ಯುತ್ ಕುಮಾರ್


ಚಿತ್ರದಲ್ಲಿ ಮುಖ್ಯವಾಗಿ ದಂಪತಿಗಳು ಪ್ರಮುಖ ಕಥಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಹೈಕ್ವಿನ್ ಹಾಗೂ ಸ್ಥಳೀಯ ರೈತ ಹಾಗೂ ನುರಿತನಲ್ಲದ ನಟ ವು ರೆನ್ಲಿನ್ ವಿವಾಹದ ನಂತರ ಪರಸ್ಪರ ಅನುರಕ್ತರಾಗುತ್ತಾರೆ. ಆರೋಗ್ಯ, ಮನೆ, ಬಡತನ, ಹೀಗೆ ಸಂಬಂಧಗಳಲ್ಲಿ ಕಂಡುಬರುವ ಕಷ್ಟಗಳನ್ನು ಹಳ್ಳಿಯಲ್ಲಿದ್ದುಕೊಂಡೇ ಸ್ವೀಕರಿಸುತ್ತಾರೆ ಹಾಗೂ ಜೀವನದಲ್ಲಿ ಉನ್ನತಿ ಕಾಣಲು ಪರಿಶ್ರಮಿಸುತ್ತಾರೆ.


ಚಿತ್ರ ಕಣ್ಮರೆಯಾಗಲು ರಾಜಕೀಯ ಪಕ್ಷಗಳ ಕೈವಾಡ
ಅಕ್ಟೋಬರ್ ಮಧ್ಯದಲ್ಲಿ ನಡೆಯಲಿರುವ ಪ್ರಮುಖ ಕಮ್ಯುನಿಸ್ಟ್ ಪಕ್ಷದ ಕಾಂಗ್ರೆಸ್‌ಗೆ ಮುಂಚಿತವಾಗಿ ಚಿತ್ರವು ಕಣ್ಮರೆಯಾಗಿರುವುದು ಚೀನಾ ಅಧಿಕಾರಿಗಳ ಕೈವಾಡವನ್ನು ಪ್ರದರ್ಶಿಸಿದೆ ಹಾಗೂ ಎಚ್ಚರಿಕೆಯ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿರಬಹುದು ಎಂಬುದಾಗಿ ಸುದ್ದಿಮೂಲಗಳು ವರದಿ ಮಾಡಿವೆ. ಚಿತ್ರವು ಥಿಯೇಟರ್‌ಗಳಿಗೆ ಶೀಘ್ರದಲ್ಲೇ ಮರಳಲಿದೆ ಎಂಬುದು ಚಿತ್ರ ನಿರ್ಮಾಪಕರ ಆಶಯವಾಗಿದೆ.


ಚಿತ್ರಗಳ ಅಂತ್ಯವನ್ನು ತನಗೆ ಬೇಕಾದಂತೆ ಬದಲಾಯಿಸುವ ಸರಕಾರ
ಚಲನಚಿತ್ರವನ್ನು ನಿರ್ಬಂಧಿಸಲು ನಾವು ಅಧಿಕೃತ ದಾಖಲೆಯನ್ನು ಸ್ವೀಕರಿಸಿಲ್ಲ ಎಂದು ಚಿತ್ರದ ನಿರ್ಮಾಪಕರು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಆದಾಗ್ಯೂ, ಚಿತ್ರವು ವಿದೇಶಿ ಚಲನಚಿತ್ರೋತ್ಸವಗಳೊಂದಿಗೆ ಸಂಬಂಧ ಹೊಂದಿರಬಾರದು ಎಂಬ ಸೂಚನೆಯನ್ನು ತಯಾರಕರು ಪಡೆದುಕೊಂಡಿದ್ದಾರೆ ಎಂಬ ವದಂತಿ ಮಾಧ್ಯಮಗಳಿಗೆ ದೊರಕಿದೆ. ವಿಷಯವನ್ನು ಸೆನ್ಸಾರ್ ಮಾಡುವ ಇತಿಹಾಸವನ್ನು ಚೀನಾ ಹೊಂದಿದೆ. ಕೆಲವು ನಿದರ್ಶನಗಳಲ್ಲಿ, ವಿದೇಶಿ ಚಲನಚಿತ್ರಗಳ ಅಂತ್ಯವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.


ರಾಷ್ಟ್ರೀಯ ಚಲನಚಿತ್ರ ಮಂದಿರಗಳಲ್ಲಿ ಚಿತ್ರವು ತಡವಾಗಿ ಬಿಡುಗಡೆಯಾದ ನಂತರ ಕಲಾತ್ಮಕ ಚಿತ್ರವು ಯಶಸ್ವಿಯಾಗಿದೆ. ಒಂಬತ್ತನೇ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಸೆಪ್ಟೆಂಬರ್ ಮಧ್ಯದಲ್ಲಿ ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ಇತರ ಚಲನಚಿತ್ರಗಳ ಎಡಿಟಿಂಗ್‌ಗೆ ಚಿತ್ರವು ಒಳಪಟ್ಟಿದೆ, ಚಲನಚಿತ್ರ ಪಟ್ಟಿಗಳಿಂದ ಸಂಪೂರ್ಣವಾಗಿ ಕೈಬಿಡುವ ಮೊದಲು, ಬದಲಾದ ಅಂತ್ಯದೊಂದಿಗೆ ಪ್ರದರ್ಶನವನ್ನು ಚಿತ್ರವು ಪ್ರಾರಂಭಿಸಿತ್ತು.


ಇದನ್ನೂ ಓದಿ: Chhello Show: ಆಸ್ಕರ್ ಎಂಟ್ರಿ ಪಡೆದ ಛೆಲ್ಲೋ ಶೋ ಬಾಲನಟ ಕ್ಯಾನ್ಸರ್​ಗೆ ಬಲಿ


ಆಗಸ್ಟ್‌ನಲ್ಲಿ, ಮಿನಿಯನ್ಸ್: ದ ರೈಸ್ ಆಫ್ ಗ್ರು, ಡೆಸ್ಪೆಕಬಲ್ ಮಿ ಸರಣಿಯ ಐದನೇ ಭಾಗ, ಚೀನಾದಲ್ಲಿ ಬದಲಾವಣೆಗೊಂಡ ಅಂತ್ಯವನ್ನು ಪಡೆಯಿತು. ಅದಕ್ಕೂ ಮೊದಲು, ಕಲ್ಟ್ ಕ್ಲಾಸಿಕ್ ಫೈಟ್ ಕ್ಲಬ್ ಇದೇ ರೀತಿಯ ಬದಲಾವಣೆಯ ಅಂತ್ಯಕ್ಕೆ ಸಾಕ್ಷಿಯಾಯಿತು. ಆದರೆ ಪ್ರತಿರೋಧದಿಂದಾಗಿ ಚಿತ್ರದ ಅಂತ್ಯವನ್ನು ಬದಲಿಸಲಾಯಿತು. ಸ್ಟ್ರೀಮಿಂಗ್ ಸೇವೆಗಳಿಂದ ಚಿತ್ರವನ್ನು ಕೈಬಿಡುವುದಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್‌ಗಳು ಸುಮಾರು 300,000 ಬಾರಿ ವೀಕ್ಷಿಸಲಾಗಿದ್ದರೂ ಕೆಲವೇ ಕೆಲವು ಕಾಮೆಂಟ್‌ಗಳು ಮಾತ್ರ ಗೋಚರಿಸುತ್ತವೆ. ಹ್ಯಾಶ್‌ಟ್ಯಾಗ್ ಅನ್ನು ನಂತರ ಸೆನ್ಸಾರ್ ಮಾಡಲಾಯಿತು ಹಾಗೂ ಸಂಬಂಧಿತ ಕಾನೂನುಗಳು, ನಿಬಂಧನೆಗಳು ಮತ್ತು ನೀತಿಗಳ ಕಾರಣದಿಂದ ಅದನ್ನು ಅನ್ವೇಷಿಸಲಾಗುವುದಿಲ್ಲ ಎಂಬ ಸೂಚನೆಯನ್ನು ಅನ್ವಯಿಸಲಾಯಿತು.

Published by:Ashwini Prabhu
First published: