ನೀಲಿ ಸಿನಿಮಾಗೆ ಒಪ್ಪಿದ ಸನ್ನಿ ಲಿಯೋನ್​: ಮಗಳ ನಿರ್ಧಾರದಿಂದ ಬೇಸತ್ತ ತಾಯಿ ಮಾಡಿದ್ದೇನು ಗೊತ್ತಾ?

news18
Updated:August 28, 2018, 1:55 PM IST
ನೀಲಿ ಸಿನಿಮಾಗೆ ಒಪ್ಪಿದ ಸನ್ನಿ ಲಿಯೋನ್​: ಮಗಳ ನಿರ್ಧಾರದಿಂದ ಬೇಸತ್ತ ತಾಯಿ ಮಾಡಿದ್ದೇನು ಗೊತ್ತಾ?
news18
Updated: August 28, 2018, 1:55 PM IST
ನ್ಯೂಸ್​ 18 ಕನ್ನಡ 

ಮಾಜಿ ನೀಲಿ ಸಿನಿಮಾಗಳ ತಾರೆ ಸನ್ನಿ ಬಿಗ್​-ಬಾಸ್​ ಮೂಲಕ ಭಾರತೀಯ ಕಿರುತೆರೆಗೆ ಎಂಟ್ರಿ ಕೊಟ್ಟವರು. ತದನಂತರ ಬಾಲಿವುಡ್​ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್ಗೂ ಎಂಟ್ರಿ ಕೊಟ್ಟು, ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಬಾಲಿವುಡ್​ಗೆ ಎಂಟ್ರಿ ಕೊಟ್ಟ ನಂತರ ನೀಲಿ ಸಿನಿಮಾಗಳಿಗೆ ಗುಡ್​ ಬೈ ಹೇಳಿದ್ದರು. ಆದರೆ ಈಗ ಮತ್ತೆ ಸನ್ನಿ ನೀಲಿ ಸಿನಿಮಾಗಳಿಗೆ ಒಪ್ಪಿದ್ದಾರಂತೆ.

ಹೌದು ಹೀಗೆಂದು ಹೇಳುತ್ತಿರುವುದು ನಾವಲ್ಲ ಅವರ ಜೀವನಾಧಾರಿತ ವೆಬ್​ ಸರಣಿ 'ಕರಣ್​ಜಿತ್​: ಅನ್​ಟೋಲ್ಡ್​ ಸ್ಟೋರಿ ಆಫ್​ ಸನ್ನಿ ಲಿಯೋನ್​' ಸೀಸನ್​ 2ರ ಟ್ರೇಲರ್​. ಹೌದು 'ಝೀ 5 ಒರಿಜಿನಲ್​'ನಲ್ಲಿ ಪ್ರಸಾರವಾಗಲಿರುವ ಸೀಸನ್​ 2ನಲ್ಲಿ ಸನ್ನಿ ಹಿಂದೆ ನೀಲಿ ಚಿತ್ರಗಳಲ್ಲಿ ಅಭಿನಯಿಸಲು ಒಪ್ಪಿದ್ದು, ಅದಕ್ಕೆ ತಾಯಿಯಿಂದ ಎದುರಾದ ವಿರೋಧ, ಮಗಳ ನಿರ್ಧಾರದಿಂದ ಬೇಸತ್ತ ತಾಯಿ ಮಾಡಿದ ತಪ್ಪು, ಸನ್ನಿ ಡ್ಯಾನಿಯಲ್​ ಅವರನ್ನು ವಿವಾಹವಾದ ಕುರಿತ ಬಗ್ಗೆ ತೋರಿಸಲಾಗುವುದು.ಈಗಷ್ಟೆ ಈ ಸೀಸನ್​ 2ರ ಟ್ರೇಲರ್​ ಬಿಡುಗಡೆಯಾಗಿದೆ. ಮೊದಲ ಸೀಸನ್​ನಲ್ಲಿ ಸನ್ನಿಯ ಬಾಲ್ಯ, ನೀಲಿ ಚಿತ್ರಕ್ಕೆ ಎಂಟ್ರಿ ಕುರಿತಂತೆ ತೋರಿಸಲಾಗಿದ್ದು, ಅದು ದೊಡ್ಡ ಹಿಟ್​ ಸಹ ಆಗಿತ್ತು. ಇನ್ನೂ ಆದಿತ್ಯ ದತ್ತಾ ನಿರ್ದೇಶನದ ಎರಡನೇ ಸೀಸನ್​ಗಾಗಿ ಕಾಯುತ್ತಿರುವ ಅಭಿಮಾನಿಗಳಿಗಾಗಿ ಸೆಪ್ಟೆಂಬರ್​ 18ರಿಂದ ಇದು ಪ್ರಸಾರವಾಗಲಿದೆ.

 
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ