ಪ್ರ್ಯಾಂಕ್ ಮಾಡಲು ಹೋಗಿ ಬಕ್ರಾ ಆದ ಸನ್ನಿ ಲಿಯೋನ್; ವಿಡಿಯೋ ವೈರಲ್​

ಸನ್ನಿಗೆ ಪ್ರ್ಯಾಂಕ್​ ಮಾಡುವ ಆಲೋಚನೆ ಬಂದಿದೆ. ಅವರ ಪಕ್ಕದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವ್ಯಕ್ತಿಯನ್ನು ನೀರಿಗೆ ತಳ್ಳಿದ್ದಾರೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಮೇಕಪ್​ ಆರ್ಟಿಸ್​ ಒಬ್ಬಳು  ಸನ್ನಿಯನ್ನು ನೀರಿಗೆ ತಳ್ಳಿದ್ದಾಳೆ. ಇದನ್ನು ಊಹಿಸಿದೇ ಇದ್ದ ಸನ್ನಿ ಒಮ್ಮೆ ಅವಕ್ಕಾದರು. ಅಷ್ಟೇ ಅಲ್ಲ, ನೀರಿಗೆ ತಳ್ಳಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿಯೂ ಸನ್ನಿ ಹೇಳಿಕೊಂಡಿದ್ದಾರೆ.

Rajesh Duggumane | news18
Updated:February 11, 2019, 3:49 PM IST
ಪ್ರ್ಯಾಂಕ್  ಮಾಡಲು ಹೋಗಿ ಬಕ್ರಾ ಆದ ಸನ್ನಿ ಲಿಯೋನ್; ವಿಡಿಯೋ ವೈರಲ್​
ಸನ್ನಿ ಲಿಯೋನ್​
Rajesh Duggumane | news18
Updated: February 11, 2019, 3:49 PM IST
ನಟಿ ಸನ್ನಿ ಲಿಯೋನ್​ ಬಾಲಿವುಡ್​ ಮಾತ್ರವಲ್ಲ ಈಗ ದಕ್ಷಿಣ ಭಾರತದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅವರಿಗೆ ಅಪಾರವಾದ ಹಿಂಬಾಲಕರಿದ್ದಾರೆ. ಸನ್ನಿ ಸಿನಿಮಾ ಮೂಲಕ ಮಾತ್ರವಲ್ಲ ಬೇರೆ ಬೇರೆ ವಿಚಾರಕ್ಕೂ ಸುದ್ದಿ ಮಾಡುತ್ತಾರೆ. ಈಗ ಪ್ರ್ಯಾಂಕ್ ಮಾಡಲು ಹೋಗಿ ಅವರೇ ತಾವೇ ಬಕ್ರಾ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಷ್ಟಕ್ಕೂ ಆಗಿದ್ದೇನು? ಸನ್ನಿ ಮಲಯಾಳಂನ ‘ರಂಗೀಲಾ’ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ನಲ್ಲಿ ಅವರು ಪಾಲ್ಗೊಂಡಿದ್ದರು. ಬಿಡುವಿನ ವೇಳೆ ಒಂದಷ್ಟು ಮೋಜು ಮಸ್ತಿಯಲ್ಲಿ ತೊಡಗಿತ್ತು ಚಿತ್ರತಂಡ. ಈಜುಕೊಳದ ಪಕ್ಕದಲ್ಲಿ ನಿಂತು ಚಿತ್ರತಂಡದವರು ಹಾಡೊಂದಕ್ಕೆ ಡ್ಯಾನ್ಸ್​ ಮಾಡುತ್ತಿದ್ದರು.

ಈ ವೇಳೆ ಸನ್ನಿಗೆ ಪ್ರ್ಯಾಂಕ್​ ಮಾಡುವ ಆಲೋಚನೆ ಬಂದಿದೆ. ಅವರ ಪಕ್ಕದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ವ್ಯಕ್ತಿಯನ್ನು ನೀರಿಗೆ ತಳ್ಳಿದ್ದಾರೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಮೇಕಪ್​ ಆರ್ಟಿಸ್​ ಒಬ್ಬಳು  ಸನ್ನಿಯನ್ನು ನೀರಿಗೆ ತಳ್ಳಿದ್ದಾಳೆ. ಇದನ್ನು ಊಹಿಸಿದೇ ಇದ್ದ ಸನ್ನಿ ಒಮ್ಮೆ ಅವಕ್ಕಾದರು. ಅಷ್ಟೇ ಅಲ್ಲ, ನೀರಿಗೆ ತಳ್ಳಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿಯೂ ಸನ್ನಿ ಹೇಳಿಕೊಂಡಿದ್ದಾರೆ.
 

Loading...
View this post on Instagram
 

Well this prank didn’t exactly go the way I wanted but still funny! Sorry @hitendrakapopara and @jeetihairtstylist I will be coming for you! War is on!! @tomasmoucka @sonakshivip @rangeela_movie


A post shared by Sunny Leone (@sunnyleone) on


ಇದನ್ನೂ ಓದಿ: ರಜನಿಗೆ ವಯಸ್ಸಾಯ್ತು ಎಂದವರಾರು?; ಮಗಳ ಮದುವೆಯಲ್ಲಿ ಸ್ಟೆಪ್ ಹಾಕಿದ ಸೂಪರ್​ಸ್ಟಾರ್​

ಈ ಬಗ್ಗೆ ತಮ್ಮ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಸನ್ನಿ. “ಇಲ್ಲಿ ನಾನಂದುಕೊಂಡಂತೆ ನಡೆದಿಲ್ಲ. ಆದರೆ, ತುಂಬಾನೇ ಫನ್ನಿಯಾಗಿತ್ತು. ನನ್ನನ್ನು ನೀರಿಗೆತಳ್ಳಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಯುದ್ಧ ಈಗ ಆರಂಭವಾಗಿದೆ,” ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ಸನ್ನಿ ಸೆಟ್​ನಲ್ಲಿರುವಾಗ ಅವರ ಮೈಮೇಲೆ ಹಾವನ್ನು ಬಿಟ್ಟು ಬಕ್ರಾ ಮಾಡಲಾಗಿತ್ತು. ಇದಕ್ಕೆ ಸನ್ನಿ ಸೇಡು ತೀರಿಸಿಕೊಂಡಿದ್ದರು. ಕೇಕ್​ ಬಿಟ್ಟವರ ಮುಖಕ್ಕೆ ಕೇಕ್​ ಮೆತ್ತುವ ಮೂಲಕ ಅವರು ಮುಯ್ಯಿ ತೀರಿಸಿಕೊಂಡಿದ್ದರು.ಇದನ್ನೂ ಓದಿ: ಬೀದಿಗೆ ಬಂತು ಆಲಿಯಾ-ಕಂಗನಾ ಜಗಳ; ‘ರಾಝಿ’ ನಾಯಕಿಯ ಯಶಸ್ಸಿಗೆ ಕರಣ್ ಜೋಹರ್ ಸೂತ್ರಧಾರ

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ