Sunny Leone: ವೈರಲ್​ ಆಗುತ್ತಿದೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಹಳೇ ವಿಡಿಯೋ..!

Sunny Leone Viral Video: ಸಿನಿಮಾ ಸೆಲೆಬ್ರಿಟಿಗಳ ಹಳೇ ವಿಡಿಯೋಗಳು ಆಗಾಗ ವೈರಲ್​ ಆಗೋದು ಸಾಮಾನ್ಯ. ಈಗ ಸನ್ನಿ ಲಿಯೋನ್​ ಅವರ ಇಂತಹದ್ದೇ ಹಳೇ ವಿಡಿಯೋ ಒಂದು ವೈರಲ್​ ಆಗುತ್ತಿದೆ.

Sunny Leone

Sunny Leone

  • Share this:
ನಟಿ ಸನ್ನಿ ಲಿಯೋನ್​​ ಕೊರೋನಾ ಲಾಕ್​ಡೌನ್​ ಆರಂಭವಾಗುತ್ತಿದ್ದಂತೆಯೇ ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ವಿದೇಶ ಹಾರಿದ್ದರು. ಈಗಲೂ ಅಲ್ಲೇ ಬೀಚ್​ ವಾಕ್​ ಹಾಗೂ ಡ್ಯಾನ್ಸ್​ ಪ್ರಾಕ್ಟೀಸ್​ ಅಂತ ಕಾಲ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋ ಶೂಟ್​ಗಳಿಂದ ಸದ್ದು ಮಾಡುತ್ತಿದ್ದ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​, ಈಗ ಹಳೇ ವಿಡಿಯೋವೊಂದರಿಂದ ಸುದ್ದಿಯಲ್ಲಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳ ಹಳೇ ವಿಡಿಯೋಗಳು ಆಗಾಗ ವೈರಲ್​ ಆಗೋದು ಸಾಮಾನ್ಯ. ಈಗ ಸನ್ನಿ ಲಿಯೋನ್​ ಅವರ ಇಂತಹದ್ದೇ ಹಳೇ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿ, ಸನ್ನಿ ಹಾವಿಗೆ ಎಷ್ಟು ಭಯ ಪಡುತ್ತಾರೆಂದು.
View this post on Instagram

Sunny Leone snake 🐍 prank 😆


A post shared by F I L M Y G Y A N (@filmygyan) on


ಸನ್ನಿ ಲಿಯೋನ್​, ಯಾವುದೋ ಚಿತ್ರೀಕರಣದ ಸೆಟ್​ನಲ್ಲಿ ಆರಾಮಾಗಿ ಸ್ಕ್ರಿಪ್ಟ್​ ಓದುತ್ತಾ ಕುಳಿತಿರುತ್ತಾರೆ. ಆಗ ಅಲ್ಲೇ ಇರುವ ಒಬ್ಬರು ಅವರ ಮುಖದ ಮುಂದೆ ಒಂದು ಪ್ಲಾಸ್ಟಿಕ್​ ಹಾವನ್ನು ತಂದು ತೋರಿಸುತ್ತಾರೆ. ಅದನ್ನು ಕಂಡು ಹೆದರುವ ಸನ್ನಿ ಅವರ ರಿಯಾಕ್ಷನ್​ ನೋಡಿ ಹೇಗಿದೆ ಎಂದು. ಇನ್ನು ಈ ನಕಲಿ ಹಾವಿನ ಫನ್ನಿ ವಿಡಿಯೋವನ್ನು ಮೊದಲೇ ಪ್ಲಾನ್​ ಮಾಡಿಕೊಂಡು ಮಾಡಲಾಗಿತ್ತು. ಈಗ ಈ ವಿಡಿಯೋ ವೈರಲ್​ ಆಗುತ್ತಿದೆ.

ಮೊದಲ ರಾಖಿ ಹಬ್ಬ ಆಚರಿಸಿದ ಯಶ್​-ರಾಧಿಕಾರ ಮಗಳು ಆಯ್ರಾ: ಇಲ್ಲಿವೆ ಮುದ್ದಾದ ಫೋಟೋಗಳು..!ಇನ್ನು ಸನ್ನಿ ಲಿಯೋನ್​ ವಿದೇಶಕ್ಕೆ ಹಾರಿದ ನಂತರ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಅವರು ಬೀಚ್​ಗೆ ಹೋಗಿ ರಿಲ್ಯಾಕ್ಸ್​ ಮಾಡುತ್ತಿದ್ದ ಫೋಟೋಗಳು ವೈರಲ್​ ಆಗಿದ್ದವು.
Published by:Anitha E
First published: