ಮಾದಕ ನಟಿ ಸನ್ನಿ ಲಿಯೋನ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಕೆಲವೊಮ್ಮೆ ಸಿನಿಮಾ ವಿಚಾರಕ್ಕೆ ಸುದ್ದಿಯಾದರೆ, ಮತ್ತೆ ಕೆಲವೊಮ್ಮೆ ಆಲ್ಬಂ ಹಾಡಿ ಕುಣಿದು ಸುದ್ದಿಯಾಗುತ್ತಾರೆ. ಅಷ್ಟು ಮಾತ್ರವಲ್ಲದೆ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಾರೆ ಈ ಬೇಬಿ ಡಾಲ್. ಆದರೀಗ ಬಟ್ಟೆ ತೊಡಿಸಲು ಕಷ್ಟ ಪಡುತ್ತಿರುವ ತಂಡವೊಂದರ ವಿಚಾರಕ್ಕೆ ಡಿಕೆ ಸಿನಿಮಾದ ನಟಿ ಈ ಸೇಸಮ್ಮ ಸುದ್ದಿಯಾಗಿದ್ದಾರೆ.
ಸನ್ನಿ ಲಿಯೋನ್ ರಿಯಾಲಿಟಿ ಶೋದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ನ ಜನಪ್ರಿಯ Splitsvilla ಶೋಗೆ ನಿರೂಪಕಿಯಾಗುವ ಮೂಲಕ ಶೋ ಮುನ್ನಡೆಸುತ್ತಿದ್ದಾರೆ. ಇದೀಗ ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವ ಹಿನ್ನಲೆಯಲ್ಲಿ ತನಗೆ ಕಾಸ್ಟ್ಯೂಮ್ ತೊಡಿಸಲು ಕಷ್ಟ ಪಟ್ಟ ತಂಡವೊಂದರ ಚಿತ್ರವನ್ನು ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೆಲೆಬ್ರಿಟಿಗಳು ಯಾವುದಾದರು ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದಾಗ ಅಥವಾ ಭೇಟಿ ನೀಡಿದಾಗ ಅವರ ಚಂದವನ್ನು ಇಮ್ಮಡಿಗೊಳಿಸಲು ತಂಡವೊಂದಿರುತ್ತದೆ. ಅವರೇ ನಟಿ-ನಟರ ಮೇಕಪ್, ಹೇರ್ ಸ್ಟೈಲ್, ಕಾಸ್ಟ್ಯೂಮ್ ನೀಡಿ ಅವರಮ್ನು ಸಿದ್ಧಪಡಿಸಿ ಕ್ಯಾಮೆರಾಗೆ ಚಂದಕಾಣುವಂತೆ ಮಾಡುತ್ತಾರೆ. ಅದರಂತೆ ತಂಡವೊಂದು ಸನ್ನಿ ಲಿಯೋನ್ ಅವರು Splitsvilla ಕಾರ್ಯಕ್ರಮಕ್ಕೆ ಗೌನ್ ಧರಿಸಿ ಸಿದ್ಧಗೊಳಿಸುತ್ತಿದ್ದರು. ಆ ಸಮಯದಲ್ಲಿ ಬೆನ್ನಿನ ಭಾಗದಲ್ಲಿದ್ದ ಜಿಪ್ ಮೇಲೇರಿಸಲು ಆಗದೆ ಅವರ ಕಾಸ್ಟ್ಯೂಮ್ ತಂಡವೊಂದು ಹರಸಾಹಸಪಟ್ಟಿದೆ.
ಅಂದಹಾಗೆಯೇ ತೆರೆ ಹಿಂದೆ ಸನ್ನಿ ರೆಡಿಯಾಗುತ್ತಿರುವ ದೃಶ್ಯ ಇದಾಗಿದ್ದು, ಈ ತಂಡವನ್ನು ಮಾದಕ ನಟಿ ‘ಆರ್ಮಿ’ ಎಂದು ಕರೆದಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವಿಡಿಯೋಗೆ ‘ಗೌನ್ ಸರಿಯಾಗಿ ಕಾಣಿವಂತೆ ಮಾಡಲು ಆರ್ಮಿಯೇ ಬೇಕಾಗುತ್ತದೆ’ ಎಂದು ಅಡಿಬರಹ ನೀಡಿದ್ದಾರೆ. ಇನ್ನು ಈ ವಿಡಿಯೋ ವೀಕ್ಷಿಸಿದ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಕೆಲವರು ಕೊನೆಗೆ ಏನಾಯಿತು ಹೇಳಿ? ಎಂದು ಕಾಮೆಂಟ್ ಬರೆಯುವ ಮೂಲಕ ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ