ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ (Reality Show) ಒಂದು ವಿಶಿಷ್ಟ ಕಾರ್ಯಕ್ರಮ. ಸೆಲೆಬ್ರಿಟಿಗಳ ನಿಜವಾದ ಬಣ್ಣ ಬಯಲು ಮಾಡುವ ಈ ಕಾರ್ಯಕ್ರಮದ ಪ್ರತಿ ಸೀಸನ್ ವಿಶಿಷ್ಟವಾಗಿರುತ್ತದೆ. ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳ (Celebrity) ನಡವಳಿಕೆ, ಮಾತು, ಗುಣ, ಶಕ್ತಿ, ಸಾಮರ್ಥ್ಯಗಳನ್ನು ಕೋಟ್ಯಂತರ ಜನರು ಕಿರುತೆರೆಯಲ್ಲಿ (Small screen) ನೋಡುತ್ತಾರೆ. ಈ ಮಧ್ಯೆ ಅನೇಕರಿಗೆ ಈ ವೇದಿಕೆ ಬದುಕು ನೀಡಿದ್ದಲ್ಲದೆ ಅವರು ಇನ್ನಷ್ಟು ಎತ್ತರಕ್ಕೇರುವಂತೆ ಮಾಡಿದೆ. ಸಾಕಷ್ಟು ಅವಕಾಶಗಳನ್ನೂ ನೀಡಿದೆ. ಈ ಶೋದಲ್ಲಿ ಬಂದ ಅನೇಕರು ಚಿತ್ರೋದ್ಯಮದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ. ಇಲ್ಲಿ ಸನ್ನಿ ಲಿಯೋನ್ ರಿಂದ ಹಿಡಿದು ಶೆಹನಾಜ್ ಗಿಲ್ ವರೆಗೆ ಸಾಕಷ್ಟು ಜನರು ಖ್ಯಾತಿ ಪಡೆದುಕೊಂಡಿದ್ದಾರೆ. ಅವರಲ್ಲಿ ಮುಖ್ಯವಾದವರ ಬಗ್ಗೆ ವಿವರ ಇಲ್ಲಿದೆ.
ಸನ್ನಿ ಲಿಯೋನ್: ನಟಿ ಹಾಗೂ ಮಾಡೆಲ್ ಸನ್ನಿ ಲಿಯೋನ್ ಭಾಗವಹಿಸಿದ್ದು ಬಿಗ್ ಬಾಸ್ ಸೀಸನ್ 5 ದಲ್ಲಿ. ಈ ಸೀಸನ್ ನ 49ನೇ ದಿನದಂದು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಸನ್ನಿ ಇಲ್ಲಿಂದ ಭಾರತೀಯರಿಗೆ ಹೆಚ್ಚು ಚಿರಪರಿಚಿತರಾದರು.
ಆ ಮೂಲಕ ಮಾಜಿ ಪೋರ್ನ್ ಸ್ಟಾರ್ ಭಾರತೀಯ ಕಿರುತೆರೆಯಲ್ಲಿ ಸ್ಥಾನ ಪಡೆದರು. ಮುಂದೆ ಹಿಂದಿಯ ಸಾಕಷ್ಟು ಚಿತ್ರಗಳಲ್ಲಿ ಕೂಡ ಅಭಿನಯಿಸಿದರು.
ಜಿಸ್ಮ್ 2, ಜಾಕ್ ಪಾಟ್, ರಾಗಿಣಿ ಎಂ ಎಂ ಎಸ್, ಏಕ್ ಪಹೇಲಿ ಲೀಲಾ, ಇಂತಜಾರ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಸನ್ನಿ ಕಾಣಿಸಿಕೊಂಡರು.
ಶೆಹನಾಜ್ ಗಿಲ್: ಬಿಗ್ ಬಾಸ್ ಸೀಸನ್ 14 ರಲ್ಲಿ ಕಾಣಿಸಿಕೊಂಡಿದ್ದ ಶೆಹನಾಜ್ ಗಿಲ್‌ಗೆ ಈ ಸೀಸನ್ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಜೊತೆಗಿನ ಆಕೆಯ ಸಂಬಂಧದಿಂದ ಸಾಕಷ್ಟು ಸುದ್ದಿಯಾಗಿದ್ದರು.
ಶೆಹನಾಜ್, ಬಿಗ್ ಬಾಸ್ ಸೀಸನ್ ವಿನ್ ಆಗದೇ ಹೋದರೂ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಂತೂ ನಿಜ. ಅಂದಹಾಗೆ ಈ ನಟಿ, ಕಿಸಿ ಕಾ ಭಾಯಿ ಕಿಸಿ ಕಿ ಜಾನ್, ಹೊನ್ಸ್ಲಾ ರಖ್ (2021) ಮತ್ತು ಸಿಲ್ಸಿಲಾ ಸಿದ್ನಾಜ್ ಕಾ (2021) ಗಳಲ್ಲಿ ಅಭಿನಯಿಸಿದ್ದಾರೆ.
ತೇಜಸ್ವಿ ಪ್ರಕಾಶ್: ಬಿಗ್ ಬಾಸ್ ಸೀಸನ್ 15 ರಲ್ಲಿ ಪಾಲ್ಗೊಂಡು ಸೀಸನ್ ವಿನ್ನರ್ ಆಗಿರುವ ತೇಜಸ್ವಿ ಪ್ರಕಾಸ್ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಡೆಲ್ ಹಾಗೂ ನಟಿಯಾಗಿರುವ ತೇಜಸ್ವಿ ಅಭಿನಯಿಸಿದ್ದ ಸ್ವರಾಗಿಣಿ ಮಹಿಳೆಯರ ಅಚ್ಚುಮೆಚ್ಚಿನ ಸೀರಿಯಲ್ ಆಗಿತ್ತು. ಅದರಲ್ಲಿ ರಾಗಿಣಿ ಪಾತ್ರ ಹಾಗೂ ರಿಶ್ತಾ ಲಿಖೇಂಗೆ ಹಮ್ ನಯಾ ದಲ್ಲಿ ದಿಯಾ ಸಿಂಗ್ ಪಾತ್ರ ಜನರ ಹೃದಯ ಗೆದ್ದಿತ್ತು.
ಇದನ್ನೂ ಓದಿ: Pathan Controversy: ಬೇಷರಂ ಹಾಡಿನ ಕೇಸರಿ ವಿವಾದ! ಶಾರುಖ್ ಮೊದಲ ಪ್ರತಿಕ್ರಿಯೆ
ಅಲ್ಲದೇ ಕಲರ್ಸ್ ನಲ್ಲಿ ಪ್ರಸಾರವಾಗುವ ಖತರೋ ಕೆ ಖಿಲಾಡಿ ಕಾರ್ಯಕ್ರಮದಲ್ಲೂ ಇವರು ಭಾಗವಹಿಸಿದ್ದರು.
ಪ್ರಿನ್ಸ್ ನರುಲಾ : ಮಾಡೆಲ್ ಹಾಗೂ ನಟ ಪ್ರಿನ್ಸ್ ನರುಲಾ ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದಿದ್ದಾರೆ. ಅಲ್ಲದೇ ನರುಲಾ ಅವರು MTV ರೋಡೀಸ್ 12, MTV ಸ್ಪ್ಲಿಟ್ಸ್ವಿಲ್ಲಾ 8, ನಚ್ ಬಲಿಯೆ 9 ರಿಯಾಲಿಟಿ ಟಿವಿ ಶೋ ಗಳನ್ನು ಗೆದ್ದಿದ್ದಾರೆ. ಅಲ್ಲದೇ ಸಾಕಷ್ಟು ಮ್ಯೂಸಿಕ್ ವಿಡಿಯೋಗಳಲ್ಲಿ ಧಾರಾವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಅಬ್ದು ರೋಝಿಕ್ : ಬಿಗ್ ಬಾಸ್ ಸೀಸನ್ 16 ರಲ್ಲಿ ಕಾಣಿಸಿಕೊಂಡಿರುವ ಅಬ್ದು ರೋಝಿಕ್ ಜನರ ಮನಸ್ಸನ್ನು ಗೆಲ್ಲೋದ್ರಲ್ಲಿ ಯಶಸ್ವಿಯಾಗಿದ್ದಾರೆ. ತಜಕಿಸ್ತಾನ್‌ನ ಸಂಗೀತಗಾರ, ಗಾಯಕ ಮತ್ತು ಬ್ಲಾಗರ್ ಆಗಿರುವ ಅಬ್ದು, ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಗಾಯಕ ಅಂತಲೇ ಪ್ರಸಿದ್ಧರಾಗಿದ್ದಾರೆ.
19 ವರ್ಷ ವಯಸ್ಸಿನ ಅಬ್ದು ರೋಝಿಕ್ ಯೂಟ್ಯೂಬ್‌ನಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ