ಮಕ್ಕಳಿಗಾಗಿ ಫನ್ ಶಾಲೆ ಆರಂಭಿಸಲಿರುವ ಮಾದಕ ಬೆಡಗಿ ಸನ್ನಿ ಲಿಯೋನ್..!

ಶಾಲೆ ಎಂಬುದು ಮಕ್ಕಳ ಬೌದ್ಧಿಕ, ಶಾರೀರಿಕ ವಿಕಾಸಕ್ಕೆ ವೇದಿಕೆ ಕಲ್ಪಿಸುವಂತಿರಬೇಕು. ಮಕ್ಕಳ ಕಲಿಕೆಯು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ವಿಶ್ವದಲ್ಲಿನ ಅನೇಕ ಹೊಸ ವಿಷಯಗಳನ್ನು ಅವರು ವಿಭಿನ್ನವಾಗಿ ಬಾಲ್ಯದಿಂದಲೇ ಅರಿತುಕೊಳ್ಳಬೇಕು.

zahir | news18
Updated:June 27, 2019, 9:09 PM IST
ಮಕ್ಕಳಿಗಾಗಿ ಫನ್ ಶಾಲೆ ಆರಂಭಿಸಲಿರುವ ಮಾದಕ ಬೆಡಗಿ ಸನ್ನಿ ಲಿಯೋನ್..!
ಸನ್ನಿ ಲಿಯೋನ್
  • News18
  • Last Updated: June 27, 2019, 9:09 PM IST
  • Share this:
ಬಾಲಿವುಡ್​ನ ಮಾದಕ ಬೆಡಗಿ ಸನ್ನಿ ಲಿಯೋನ್  ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ. ನಟನೆಯೊಂದಿಗೆ ಸೌಂದರ್ಯವರ್ಧಕ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದ ಮಾಜಿ ನೀಲಿ ತಾರೆ, ಈ ಬಾರಿ ಶಿಕ್ಷಣ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

7 ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರೀಯರಾಗಿರುವ 'ಜಿಸ್ಮ್' ನಟಿ, ತಮ್ಮ ಮಕ್ಕಳಿಗಾಗಿ ಶಾಲೆಯೊಂದನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಮುಂಬೈನ ಜುಹೂನಲ್ಲಿ ಹೊಸ ಶಾಲೆಯೊಂದನ್ನು ತೆರೆಯಲಿದ್ದಾರೆ.

ಸನ್ನಿ ಲಿಯೋನ್ ಪುತ್ರಿ ನಿಶಾ D’Art Fusion ಎಂಬ ಶಾಲೆಗೆ ತೆರಳುತ್ತಿದ್ದು, ಈ ಶಾಲೆಯ ವಿನ್ಯಾಸ ಮತ್ತು ಅಲ್ಲಿನ ಕಲಿಕಾ ವಿಧಾನ ಮಗಳಿಗೆ ತುಂಬಾ ಹಿಡಿಸಿದೆ. ಇದೀಗ ಇದೇ ಶಾಲಾ ಸಂಸ್ಥೆಯೊಂದಿಗೆ ಕೈ ಜೋಡಿಸಲು ತೀರ್ಮಾನಿಸಿರುವ ಸನ್ನಿ ದಂಪತಿ ಡಿ ಆರ್ಟ್​ ಫ್ಯೂಸನ್​ನ ಹೊಸ ಬ್ರಾಂಚ್ ಪ್ರಾರಂಭಿಸಲು ನಿರ್ಧರಿಸಿದ್ದಾರೆ.

''ಶಾಲೆ ಎಂಬುದು ಮಕ್ಕಳ ಬೌದ್ಧಿಕ, ಶಾರೀರಿಕ ವಿಕಾಸಕ್ಕೆ ವೇದಿಕೆ ಕಲ್ಪಿಸುವಂತಿರಬೇಕು. ಮಕ್ಕಳ ಕಲಿಕೆಯು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ವಿಶ್ವದಲ್ಲಿನ ಅನೇಕ ಹೊಸ ವಿಷಯಗಳನ್ನು ಅವರು ವಿಭಿನ್ನವಾಗಿ ಬಾಲ್ಯದಿಂದಲೇ ಅರಿತುಕೊಳ್ಳಬೇಕು. ಹಾಗೆಯೇ ಕಲಿಕೆಯೊಂದಿಗೆ ಹೆಚ್ಚಿನ ಖಷಿಯಲ್ಲಿ ಕಳೆಯುವಂತಾಗಬೇಕು. ಅಲ್ಲದೆ ನನಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಹೀಗಾಗಿ ಫನ್ ಕಾನ್ಸೆಪ್ಟ್​ನಲ್ಲಿ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸುವುದು ನಮ್ಮ ಆಸೆಯಾಗಿದೆ'' ಎಂದು ಸನ್ನಿ ಲಿಯೋನ್ ತಿಳಿಸಿದ್ದಾರೆ.

ಮೂರು ಮಕ್ಕಳ ಪೋಷಕರಾಗಿರುವ ಸನ್ನಿ-ಡೇನಿಯಲ್ ದಂಪತಿ ಸದ್ಯ ಶಾಲಾ ಕಟ್ಟಡದ ವಿನ್ಯಾಸ, ಒಳಾಂಗಣ ಹಾಗೂ ಇತರೆ ಸೌಲಭ್ಯಗಳ ಕುರಿತು ರೂಪುರೇಷೆ ತಯಾರಿಸಿದ್ದಾರಂತೆ. ಅದರಂತೆ ಶೀಘ್ರದಲ್ಲೇ ಮಕ್ಕಳಿಗೆ ಹೊಸ ಅನುಭವವನ್ನು ನೀಡುವಂತಹ ವಿಭಿನ್ನ ಮಾದರಿಯ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಮಿಳು ಬಿಗ್​ ಬಾಸ್​ನಲ್ಲಿ ಕನ್ನಡ ನಟಿಯರು..!
First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading