ಬಾಲಿವುಡ್ (Bollywood) ನಟಿ ಸನ್ನಿ ಲಿಯೋನ್ (Sunny leone) ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕೊರೋನಾ ಟೈಂನಲ್ಲಿ ಭಾರತಕ್ಕೆ ಬಂದು ಮುಂಬೈನಲ್ಲಿಯೇ (Mumbai) ಮನೆಯನ್ನೂ ಖರೀದಿಸಿ ಪತಿ ಹಾಗೂ ಮಕ್ಕಳೊಂದಿಗೆ ಸೆಟ್ಲ್ ಆಗಿರುವ ಸನ್ನಿ ಲಿಯೋನ್ ಬಾಲಿವುಡ್ನಲ್ಲಿ ಪ್ರಾಜೆಕ್ಟ್ಗಳನ್ನು ಮಾಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಹಿಟ್ ಸಿನಿಮಾಗಳನ್ನು ಮಾಡದಿದ್ದರೂ ಆಲ್ಬಂ ಸಾಂಗ್ (Album Song), ಕೆಲವು ಪ್ರಾದೇಶಿಕ ಸಿನಿಮಾಗಳಲ್ಲಿಯೂ ನಟಿಸಿಕೊಂಡು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ನಟಿಯ ತುಟಿಗೆ ಗಾಯ
ಸನ್ನಿ ಲಿಯೋನ್ ತುಟಿಗೆ ಗಾಯವಾಗಿದ್ದು ಅವರು ಇತ್ತೀಚೆಗೆ ವಿಡಿಯೋವನ್ನು ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ತಮ್ಮ ತುಟಿಗೆ ಗಾಯವಾಗಿರುವುದನ್ನು ಅವರು ತೋರಿಸಿದ್ದಾರೆ. ಹಾಗೆಯೇ ಪತಿ ಯಾಕೋ ಕೇರ್ ಮಾಡ್ತಿಲ್ಲ ಎಂದು ಗಂಡನ ಬಗ್ಗೆಯೂ ಆರೋಪಿಸಿದ್ದಾರೆ.
ವೈರಲ್ ಆಯ್ತು ಸನ್ನಿ ಲಿಯೋನ್ ಗಾಯದ ವಿಡಿಯೋ
ಸನ್ನಿ ಲಿಯೋನ್ ತುಟಿಗೆ ಗಾಯವಾಗಿರುವ ಸೆಲ್ಫಿ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದೇ ತಡ ಅದು ವೈರಲ್ ಆಗಿದೆ. ಅಭಿಮಾನಿಗಳು ಇದೇನಾಯ್ತು ಎಂದು ಕಮೆಂಟ್ ಮಾಡಿ ಕೇಳುತ್ತಿದ್ದಾರೆ.
ವಿಡಿಯೋಗೆ 487 ಸಾವಿರ ಲೈಕ್ಸ್ ಬಂದಿದೆ. ಐದೂವರೆ ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಮೆಂಟ್ ಮಾಡುತ್ತಲೇ ಇದ್ದಾರೆ.
ಅಸಲಿಗೆ ಆಗಿದ್ದೇನು?
ನಟಿ ಮೊಬೈಲ್ ನೋಡುತ್ತಿದ್ದಾಗ ಫೋನ್ ಕೈಜಾರಿ ಮುಖದ ಮೇಲೆ ಬಿದ್ದಿದೆ. ಮೊಬೈಲ್ ತುಟಿಗೆ ಬಿದ್ದ ಕಾರಣ ಗಾಯವಾಗಿ ರಕ್ತಬಂದಿದೆ. ಇದನ್ನು ಸ್ವತಃ ನಟಿ ವಿಡಿಯೋದಲ್ಲಿ ವಿವರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೊಬೈಲ್ ಬಿದ್ದು ತುಟಿ ಒಡೆದರೂ ಬುದ್ಧಿ ಬರಲಿಲ್ಲ ಅಲ್ವೇ? ಹೀಗೇ ಹಿಡಿದುಕೊಂಡಿದ್ದರೆ ಮತ್ತೊಮ್ಮೆ ನಿಮ್ಮ ಮುಖಕ್ಕೆ ಬೀಳಬಹುದು ಎಂದು ಕಮೆಂಟ್ ಮಾಡಿದ್ದಾರೆ.
View this post on Instagram
ಕನ್ನಡ ಸಿನಿಮಾದಲ್ಲಿ ಸನ್ನಿ ಲಿಯೋನ್
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೂರು ದಶಕಗಳನ್ನು ಪೂರೈಸಿರುವ ನಟ-ನಿರ್ದೇಶಕ ಉಪ್ಪಿಗೆ ಅಪಾರ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಅಭಿಮಾನಿಗಳ ಕೋರಿಕೆಯಂತೆ ನಿರ್ದೇಶಕನಾಗಿ ತನ್ನ 11ನೇ ಫಿಲ್ಮ್ ಆಗಿ ಯುಐ ಸಿನಿಮಾವನ್ನು ಉಪ್ಪಿ ಘೋಷಿಸಿದ್ದಾರೆ.
ಏಳು ವರ್ಷಗಳ ನಂತರ ನಿರ್ದೇಶಕರಾಗಿ ಮತ್ತೆ ಮರಳಿದ್ದಾರೆ. ಈ ಸಿನಿಮಾದ ಮೂಲಕ ಮತ್ತೆ ಸನ್ನಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಕೆಲ ಸಿನಿಮಾದ ಹಾಡಿನಲ್ಲಿ ಕುಣಿದು ಹೋಗಿದ್ದ ಸನ್ನಿ ಲಿಯೋನ್ ಈ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಯುಐನಲ್ಲಿ ಸನ್ನಿಲಿಯೋನ್ ಪಾತ್ರವೇನು?
‘ಯುಐ’ ಸಿನಿಮಾಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ ಹಾಟ್ ತಾರೆ ಸನ್ನಿ ಲಿಯೋನ್. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಿದ್ದು, ಅವರ ಭಾಗದ ಶೂಟಿಂಗ್ ಕೂಡ ಮುಗಿದಿದೆ ಎನ್ನಲಾಗುತ್ತಿದೆ. ಸನ್ನಿ ಲಿಯೋನ್ ಭಾಗದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದ್ದು, ಯುಐನಲ್ಲಿ ಪ್ರಮುಖ ಪಾತ್ರವನ್ನೇ ಅವರು ನಿರ್ವಹಿಸಿದ್ದಾರಂತೆ. ಈವರೆಗೂ ಕನ್ನಡ ಸಿನಿಮಾ ರಂಗದಲ್ಲಿ ಸನ್ನಿ ಕೇವಲ ಹಾಡಿನಲ್ಲಿ ಮಾತ್ರ ಬಂದು ಹೋಗಿದ್ದು, ಈ ಸಿನಿಮಾದಲ್ಲಿ ತುಂಬಾ ಹೊತ್ತು ಸ್ಕ್ರೀನ್ ಮೇಲೆ ಇರುತ್ತಾರೆ ಎಂದು ಹೇಳಲಾಗುತ್ತಿದೆ.
ಸನ್ನಿ ಕನ್ನಡದಲ್ಲಿ ಹಲವಾರು ಹಾಡುಗಳಲ್ಲಿ ಕಾಣಿಸಿಕೊಂಡರೂ, ಜೋಗಿ ಪ್ರೇಮ್ ಸಿನಿಮಾದ ಶೇಷಮ್ಮ ಹಾಡಿನ ಮೂಲಕ ಫೇಮಸ್ ಆಗಿದ್ದರು. ಯುಐ ಬಂದ ನಂತರ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ