Sunny Leone: ಸನ್ನಿ ಲಿಯೋನ್​ಗೆ ಬಟ್ಟೆ ತೊಡಿಸಲು ಹೋದವರ ಪರದಾಟ: ವಿಡಿಯೋ ವೈರಲ್​..!

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸದ್ದು ಮಾಡುವ ಸನ್ನಿ ಲಿಯೋನ್​ ಕನ್ನಡದ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಸನ್ನಿ ಲಿಯೋನ್​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಿಂದಾಗಿ ಚರ್ಚೆಯಲ್ಲಿದ್ದಾರೆ.

ನಟಿ ಸನ್ನಿ ಲಿಯೋನ್​

ನಟಿ ಸನ್ನಿ ಲಿಯೋನ್​

  • Share this:
ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಹೆಚ್ಚಾಗಿ ತಮ್ಮ ಬೋಲ್ಡ್​ ಹಾಗೂ ಹಾಟ್​ ಫೋಟೋಶೂಟ್​ಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಇನ್ನು ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯವಾಗಿರುವ ನಟಿ ತಮ್ಮ ವೃತ್ತಿ ಹಾಗೂ ವೈಯಕ್ತಿಯ ವಿಷಯಗಳ ಬಗ್ಗೆ ಆಗಾಗ ನೆಟ್ಟಿಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಒಂದು ಕಾಲದಲ್ಲಿ ನೀಲಿ ಚಿತ್ರಗಳ ತಾರೆಯಾಗಿದ್ದ ಸನ್ನಿ ಲಿಯೋನ್​ ನಂತರ ಬಾಲಿವುಡ್​ಗೆ ಕಾಲಿಟ್ಟರು.  ಹಿಂದಿ ಬಿಗ್​ ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟ ಸನ್ನಿ ನಂತರ ಬಾಲಿವುಡ್​ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದರು. ಜೊತೆಗೆ  ಸಿನಿಮಾಗಳಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದರು. ಕಾಮಿಡಿ ಹಾಗೂ ಹಾರರ್​ ಸಿನಿಮಾಗಳಲ್ಲಿ ಕೊಂಚ ಹೆಚ್ಚಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲೂ ಅವರು ಕಾಣಿಸಿಕೊಂಡರು. ಇತ್ತೀಚೆಗಷ್ಟೆ ಸನ್ನಿ ಲಿಯೋನ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸದ್ದು ಮಾಡುವ ಸನ್ನಿ ಲಿಯೋನ್​ ಕನ್ನಡದ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಸನ್ನಿ ಲಿಯೋನ್​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಿಂದಾಗಿ ಚರ್ಚೆಯಲ್ಲಿದ್ದಾರೆ.
View this post on Instagram


A post shared by Sunny Leone (@sunnyleone)


ಸನ್ನಿ ಲಿಯೋನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂತೀರಾ..? ಅದನ್ನ ತಿಳಿಯೋಕೆ ಈ ವಿಡಿಯೋ ನೋಡಿ.


View this post on Instagram


A post shared by Sunny Leone (@sunnyleone)


ಸನ್ನಿ ಲಿಯೋನ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಈ ನಟಿಯನ್ನು ಆರಾಧಿಸುವ ಸಿನಿ ರಸಿಕರಿದ್ದಾತರೆ. ಸದ್ಯ ಸನ್ನಿ ಲಿಯೋನ್​​ ಎಂಟಿವಿಯ ಜನಪ್ರಿಯ Splits villa ಶೋಗೆ  ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಗಾಗಿ ಸಿದ್ಧರಾಗುತ್ತಿದ್ದಾಗ ಅವರಿಗೆ ಡ್ರೆಸ್​ ತೊಡಲು ತುಂಬಾ ಕಷ್ಟಪಟ್ಟಿದ್ದಾರೆ.

ಇದನ್ನೂಓದಿ: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳು ಸುಹಾನಾರ ಬಾಲ್ಯದ ಚಿತ್ರಗಳು..!

ಹೌದು, ಆ ಕಾರ್ಯಕ್ರಮಕ್ಕೆಂದು ವಿನ್ಯಾಸ ಮಾಡಲಾಗಿದ್ದ ಡ್ರೆಸ್​ ತೊಡಲು ಸನ್ನಿ ಅವರಿಗೆ ತುಂಬಾ ಕಷ್ಟವಾಗಿದೆ. ಅದಕ್ಕೆ ಸಹಾಯಕ್ಕಾಗಿ ಅವರ ತಂಡವೂ ಬಂದಿದೆ. ಸರಿಯಾಗಿ ಆ ಡ್ರೆಸ್​ ಫಿಟ್​ ಆಗಿ ಎಂದು ಸನ್ನಿ ಲಿಯೋನ್​ ಅವರ ಡ್ರೆಸ್ಸಿಂಗ್​ ಟೀಮ್​ ಪಡುವ ಪಾಡು  ಈ ವಿಡಿಯೋದಲ್ಲಿ ತಿಳಿಯುತ್ತದೆ.

ಮೇ. 13ರಂದು ಸನ್ನಿ ಲಿಯೋನ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಮಂಡ್ಯದ ಈ ಹಳ್ಳಿಯೊಂದರಲ್ಲಿ ಈ ಮಾದಕ ತಾರೆಯ ಬರ್ತ್​ಡೇಗೆ ದೊಡ್ಡ ಬ್ಯಾನರ್​ ಹಾಕಲಾಗಿತ್ತು. ಈ ಮೂಲಕ ಶುಭಕೋರಲಾಗಿತ್ತು. ಆ ಫೋಟೋ ಆಗ ಸಖತ್​ ವೈರಲ್​ ಆಗಿತ್ತು.

ಇದನ್ನೂ ಓದಿ: Allu Arha: ಬಿಡುವಿಲ್ಲದಂತೆ ಫೋಟೋಶೂಟ್​ಗಳಲ್ಲಿ ಬ್ಯುಸಿಯಾದ ಅಲ್ಲುಅರ್ಜುನ್​ ಮಗಳು

ಇನ್ನೂ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸನ್ನಿ ಲಿಯೋನ್​ ವಿರುದ್ಧ ಇವೆಂಟ್​ ಮ್ಯಾನೇಜ್ಮೆಂಟ್​ ಕಂಪೆನಿಯೊಂದು ಕೇರಳದ ಪೊಲೀಸ್​ ಠಾಣೆಯೊಂದದರಲ್ಲಿ ದೂರು ದಾಖಲಿಸಿತ್ತು. ನಂತರ ಸನ್ನಿ ಲಿಯೋ ಈ ವಿಷಯವಾಗಿ ಸ್ಟಷ್ಟನೆ ಸಹ ಕೊಟ್ಟಿದ್ದರು.
Published by:Anitha E
First published: