ನಟಿ ಸನ್ನಿ ಲಿಯೋನ್ ಕೊರೋನಾ ಭೀತಿಯಿಂದಾಗಿ ಲಾಕ್ಡೌನ್ ಆರಂಭವಾಗುತ್ತಿದ್ದಂತೆಯೇ ಕುಟುಂಬದೊಂದಿಗೆ ವಿದೇಶಕ್ಕೆ ಹಾರಿದರು. ಅಲ್ಲೇ ಮಕ್ಕಳು ಹಾಗೂ ಗಂಡನೊಂದಿಗೆ ಕಾಲ ಕಳೆಯುತ್ತಿರುವ ಸನ್ನಿ, ತಮ್ಮ ನಿತ್ಯದ ಜೀವನದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್ ಕೊಡುತ್ತಿರುತ್ತಾರೆ.
ಮನೆಯಲ್ಲಿ ಸ್ನೇಹಿತರು ಹಾಗೂ ಮಕ್ಕಳೊಂದಿಗೆ ಟೈಮ್ಪಾಸ್ ಮಾಡುತ್ತಾ... ಕಡಲ ಕಿನಾರೆಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಸನ್ನಿ ಲಿಯೋನ್. ಗಂಡ ಡೇನಿಯಲ್ಗೆ ಹೆಡ್ ಮಸಾಜ್ ಮಾಡಿರುವ ಸನ್ನಿ, ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
![sunny leone enjoying wiht her family at beach and photos go viral on social media]()
ಕಡಲ ಕಿನಾರೆಯಲ್ಲಿ ಸನ್ನಿ ಲಿಯೋನ್ ಹಾಗೂ ಕುಟುಂಬ.
ವಿಡಿಯೋ ಜೊತೆಗೆ ಸನ್ನಿ ಅಭಿಮಾನಿಗಳನ್ನೂ ಪ್ರಶ್ನಿಸಿದ್ದಾರೆ. ಹೆಡ್ ಮಸಾಜ್ ಮಾಡುವ ಈ ಉಪಕರಣವನ್ನು ಯಾರು ಬಳಸಿದ್ದೀರಿ..? ಇದನ್ನು ಯಾರು ಕಂಡು ಹಿಡಿದರೋ ನಿಜಕ್ಕೂ ಅವರು ಪ್ರತಿಭಾವಂತರು ಎಂದಿದ್ದಾರೆ ಮಾಜಿ ನೀಲಿ ತಾರೆ.
ಸನ್ನಿ ಲಿಯೋನ್ ವಿದೇಶದಲ್ಲಿರುವ ತಮ್ಮ ಮನೆಯಲ್ಲೂ ಅವರು ಖಾಲಿಯಾಗಿ ಕುಳಿತಿಲ್ಲ. ಅಲ್ಲೂ ಸಹ ಅವರು ಮಾಸ್ಕ್ ಧರಿಸುವುದರೊಂದಿಗೆ, ಸಾಮಾಜಿಕ ಅಂತರ ಕಾಯ್ದು ಕೊಂಡು ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ.
ಸನ್ನಿ ಲಿಯೋನ್ ತಮ್ಮ ಮನೆಯಲ್ಲೇ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇದು ಅವರು ಬೇರೆಯವರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವುದಾ... ಅಥವಾ ಸ್ಟೇಜ್ ಶೋಗಾಗಿ ಅಭ್ಯಾಸ ಮಾಡುತ್ತಿರುವುದಾ ಎಂದು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿಲ್ಲ. ಆದರೆ ವರ್ಕ್ ಮೋಡ್ ಎಂದು ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗೆ ನೆಮ್ಮದಿ ಕೊಡುತ್ತದೆಯಂತೆ ಈ ಸ್ಥಳ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ