ಮನೆಗೆಲಸದಲ್ಲಿ ಸಹಾಯ ಮಾಡದ ಗಂಡನ ಮೇಲೆ ಸಿಟ್ಟು ತೀರಿಸಿಕೊಳ್ಳಲು ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ​: ಇಲ್ಲಿದೆ ಫನ್ನಿ ವಿಡಿಯೋ..!

Sunny Leone Funny Video: ವಿದೇಶದಲ್ಲಿ ತಮ್ಮ ಡ್ಯಾನ್ಸ್​ ಗ್ರೂಪ್​ ಜೊತೆಗೆ ನೃತ್ಯ ಮಾಡುತ್ತಾ.... ಮಕ್ಕಳೊಂದಿಗೆ ಬೀಚ್​ನಲ್ಲಿ ಎಂಜಾಯ್​ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಸನ್ನಿ ಲಿಯೋನ್​. ಈ ನಟಿ ನಿನ್ನೆಯಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ವೈರಲ್​ ಆಗುತ್ತಿದೆ.

ಸನ್ನಿ ಲಿಯೋನ್​ ಹಾಗೂ ಅವರ ಗಂಡ ಡೇನಿಯಲ್​

ಸನ್ನಿ ಲಿಯೋನ್​ ಹಾಗೂ ಅವರ ಗಂಡ ಡೇನಿಯಲ್​

  • Share this:
ಸನ್ನಿ ಲಿಯೋನ್​ ಸದ್ಯ ಗಂಡ ಹಾಗೂ ಮಕ್ಕಳೊಂದಿಗೆ ವಿದೇಶದಲ್ಲಿದ್ದಾರೆ. ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಆರಂಭದಲ್ಲೇ ವಿದೇಶಕ್ಕೆ ಹಾರಿದ್ದರು ಈ ಮಾಜಿ ನೀಲಿ ತಾರೆ. ಎಲ್ಲೇ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ ಲಿಯೋನ್​ ತಮ್ಮ ನಿತ್ಯದ ಅಪ್ಡೇಟ್​ಗಳನ್ನು ಕೊಡುತ್ತಿರುತ್ತಾರೆ.

ವಿದೇಶದಲ್ಲಿ ತಮ್ಮ ಡ್ಯಾನ್ಸ್​ ಗ್ರೂಪ್​ ಜೊತೆಗೆ ನೃತ್ಯ ಮಾಡುತ್ತಾ.... ಮಕ್ಕಳೊಂದಿಗೆ ಬೀಚ್​ನಲ್ಲಿ ಎಂಜಾಯ್​ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಸನ್ನಿ ಲಿಯೋನ್​. ಈ ನಟಿ ನಿನ್ನೆಯಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ವೈರಲ್​ ಆಗುತ್ತಿದೆ.
View this post on Instagram

Masti...masti...masti with my girl @nuria.contreras (Masti= crazy fun)


A post shared by Sunny Leone (@sunnyleone) on


ಸನ್ನಿ ಲಿಯೋನ್​ ತಮ್ಮ ಮನೆಯಲ್ಲಿ ಸ್ನೇಹಿತರಿಗಾಗಿ ಡಿನ್ನರ್​ ಪಾರ್ಟಿ ಆಯೋಜಿಸಿದ್ದರಂತೆ. ಆ ಕೆಲಸದಲ್ಲಿ ಅವರ ಪತಿ ಡೇನಿಯಲ್​ ಸ್ವಲ್ಪವೂ ಸಹಾಯ ಮಾಡಲಿಲ್ಲವಂತೆ. ಈ ಕಾರಣದಿಂದಲೇ ಸನ್ನಿ ಸಖತ್​ ಸಿಟ್ಟಾಗಿದ್ದಾರೆ. ಅವರ ಸಿಟ್ಟನ್ನು ಹೇಗೆ ತೀರಿಸಿಕೊಂಡಿದ್ದಾರೆ ಅಂತ ಈ ವಿಡಿಯೋ ನೋಡಿ ತಿಳಿಯುತ್ತೆ.
ಡೇನಿಯಲ್​ ಸ್ವಲ್ಪವೂ ಸಹಾಯ ಮಾಡದರೆ ಆರಾಮಾಗಿ ಬಿಸಿಲಿನಲ್ಲಿ ಮಲಗಿರುವುದನ್ನು ನೋಡಿದ ನಟಿ, ನೀರು ತುಂಬಿದ ಬಲೂನ್​ ಅನ್ನು ಗಂಡನ ಬಳಿ ಇಡುತ್ತಾರೆ. ಮೆಲ್ಲನೆ ಅದಕ್ಕೆ ಪಿನ್​ನಿಂದ ಚುಚ್ಚುತ್ತಾರೆ. ನಿದ್ದೆಯಲ್ಲಿದ್ದ ಡೇನಿಯಲ್​ ಗಾಬರಿಯಿಂದ ಎದ್ದೇಳುತ್ತಾರೆ. ಇದನ್ನು ಸ್ನನಿ ಲಿಯೋನ್​ ಅವರ ಸ್ನೇಹಿತೆ ವಿಡಿಯೋ ಮಾಡಿದ್ದಾರೆ.
Published by:Anitha E
First published: