Sunny Leone: 500ಕ್ಕೂ ಹೆಚ್ಚು ಅಶ್ಲೀಲ ಪೋನ್​ ಕಾಲ್​: ದೆಹಲಿ ವ್ಯಕ್ತಿಯ ಕ್ಷಮೆ ಯಾಚಿಸಿದ ಸನ್ನಿ ಲಿಯೋನ್..!

Sunny Leone: ಯಾರಿಗಾದರೂ ದಿನಕ್ಕೆ 50- 100 ಕರೆಗಳು ಬರಬಹುದು ಅಲ್ವಾ..! ಆದರೆ ಅದರಲ್ಲಿ ಒಂದೆರಡು ಅನಾಮಧೇಯ ಕರೆಗಳು ಹಿಂದೆಂದೆ ಬಂದರೆ ಅದನ್ನೇ ಸಹಿಸಿಕೊಳ್ಳಲು ಆಗುವುದಲ್ಲ. ಇನ್ನು ದಿನಕ್ಕೆ 150ಕ್ಕೂ ಅಶ್ಲೀಲ ಕರೆಗಳು ಬಂದರೆ ಹೇಗಿರಬೇಡ. ಹೌದು, ದೆಹಲಿಯ ಖಾಸಗಿ ಕಂಪೆನಿಯ ವ್ಯಕ್ತಿಯೊಬ್ಬರಿಗೆ ಒಂದೇ ದಿನಕ್ಕೆ 150 ಅಶ್ಲೀಲ ಕರೆಗಳು ಬಂದ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಸನ್ನಿ ಲಿಯೋನ್​ ಈಗ ಕ್ಷಮೆ ಯಾಚಿಸಿದ್ದಾರೆ.

Anitha E | news18
Updated:August 3, 2019, 2:34 PM IST
Sunny Leone: 500ಕ್ಕೂ ಹೆಚ್ಚು ಅಶ್ಲೀಲ ಪೋನ್​ ಕಾಲ್​: ದೆಹಲಿ ವ್ಯಕ್ತಿಯ ಕ್ಷಮೆ ಯಾಚಿಸಿದ ಸನ್ನಿ ಲಿಯೋನ್..!
ನಟಿ ಸನ್ನಿ ಲಿಯೋನ್​
Anitha E | news18
Updated: August 3, 2019, 2:34 PM IST
ನಟಿ ಸನ್ನಿ ಲಿಯೋನ್​ ಅವರಿಗಿರುವ ಅಭಿಮಾನಿ ಬಳಗದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಸದ್ಯ ಬಾಲಿವುಡ್​ನಲ್ಲೇ ಬ್ಯುಸಿಯಾಗಿರು ಸನ್ನಿ ಈಗ ವಿವಾದವೊಂದಕ್ಕೆ ಸಿಕ್ಕಿಕೊಂಡಿದ್ದಾರೆ. ಸನ್ನಿ ಲಿಯೋನ್​ ದೆಹಲಿಯ ವ್ಯಕ್ತಿಯೊಬ್ಬರ ಕ್ಷಮೆ ಯಾಚಿಸಿದ್ದಾರೆ.

ಹೌದು, ಸನ್ನಿ ಸದಾ ತಾವಾಯ್ತು... ತಮ್ಮ ಕೆಲಸವಾಯ್ತು... ಎಂದಿರುವ ನಟಿ. ಹೀಗಿರುವ ಸನ್ನಿಗೆ ಈಗ ವಿನಾ ಕಾರಣ ಸಮಸ್ಯೆಯೊಂದು ಎದುರಾಗಿದೆ ಅದು ಸಹ ಅವರ ಅಭಿನಯದ ಸಿನಿಮಾವೊಂದರಿಂದ.

ಸನ್ನಿ ಲಿಯೋನ್


ಕಳೆದ ತಿಂಗಳು 26ರಕ್ಕೆ ತೆರೆಕಂಡ 'ಅರ್ಜುನ್​ ಪಟಿಯಾಲ' ಸಿನಿಮಾದಲ್ಲಿ ಸನ್ನಿ ಅವರ ಕ್ಯಾಮಿಯೋ ಇತ್ತು. ಇದರಲ್ಲಿ ಇದೇ ಸನ್ನಿ ಅವರ ಫೋನ್​ ನಂಬರ್​ ಎಂದು ಒಂದು ಅನಾಮಧೇಯ ಸಂಖ್ಯೆಯನ್ನು ತೋರಿಸಲಾಗಿತ್ತು. ಆದರೆ ಅದು ಯಾರದ್ದೋ ಮೊಬೈಲ್​ ನಂಬರ್ ಆಗಿರುತ್ತದೆ ಎಂದು ಊಹಿಸಿರಲಿಲ್ಲ. ಈಗ ಆ ನಂಬರ್​ಗೆ ಸನ್ನಿ ಅಭಿಮಾನಿಗಳು ಸಿಕ್ಕಾಪಟ್ಟೆ ಕರೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ

ಸಿನಿಮಾದಲ್ಲಿ ತೋರಿಸಿರುವ ನಂಬರ್​ ದೆಹಲಿಯ ವ್ಯಕ್ತಿ ಪುನೀತ್​ ಅವರದ್ದು. ಅವರಿಗೆ ಕಳೆದ ಕೆಲವು ದಿನಗಳಿಂದ ನಿತ್ಯ 150 ಕರೆಗಳು ಬರುತ್ತಿದ್ದು, ಕರೆ ಮಾಡುವವರು ಸನ್ನಿ ಲಿಯೋನ್​ಗಾಗಿ ಕೇಳುತ್ತಿದ್ದಾರಂತೆ. ಅಲ್ಲದೆ ಅಶ್ಲೀಲವಾಗಿ ಮಾತನಾಡುತ್ತಿದ್ದಾರಂತೆ. ಸಾಲದಕ್ಕೆ  ಕೆಟ್ಟದಾಗಿ ಬೈಗುಳಗಳನ್ನೂ ಕೇಳಿಸುತ್ತಿದ್ದಾರಂತೆ. ಇದರಿಂದ ಬೇಸತ್ತ ಪುನೀತ್​ ಮೌರ್ಯ ಎನ್​ಕ್ಲೇವ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.


Loading...

ಇದರಿಂದಾಗಿ ಪುನೀತ್​ ಅಗರ್ವಾಲ್​ ಈಗ ದಿನೇಶ್​ ವಿಜನ್​ ಹಾಗೂ ಭೂಷನ್​ ಕುಮಾರ್​ ಅವರ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಪುನೀತ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ಈ ವಿಷಯ ತಿಳಿದ ಸನ್ನಿ ಪುನೀತ್​ ಅವರ ಕ್ಷಮೆ ಯಾಚಿಸಿತ್ತು. ಹೀಗೆಲ್ಲ ನಿಮ್ಮೊಂದಿಗೆ ಆಗುವುದು ನನಗೆ ಇಷ್ಟವಿಲ್ಲ ಕ್ಷಮಿಸಿ ಎಂದಿದ್ದಾರಂತೆ.

ಇದನ್ನೂ ಓದಿ: ಕೋಟಿಗಳ ಒಡತಿ ದೀಪಿಕಾ ಪಡುಕೋಣೆ ಹೋಟೆಲ್​ಗಳಲ್ಲಿ ಏನು​ ಕದಿಯುತ್ತಾರೆ ಗೊತ್ತಾ..?

Katrina Kaif: ಮಾಲ್ಡೀವ್ಸ್​ನ ಬೀಚ್​ಗಳಲ್ಲಿ ಬಿಕಿನಿಯಲ್ಲಿ ನೀರಾಟವಾಡಿದ ಕತ್ರಿನಾ..!

First published:August 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...