Video: ತರಕಾರಿ ಕಟ್ ಮಾಡುವಾಗ ಬೆರಳು ಕತ್ತರಿಸಿಕೊಂಡ ಸನ್ನಿ ಲಿಯೋನ್! ಗಾಬರಿಗೊಂಡ ಡೇನಿಯಲ್ ಮಾಡಿದ್ದೇನು?

Sunny Leone: ಅಡುಗೆ ಮನೆಗೆ ತರಕಾರಿ ಕಟ್​​ ಮಾಡಲು ಹೋಗಿದ್ದ ಸನ್ನಿ ಲಿಯೋನ್​ ಗೊತ್ತಲ್ಲದೆ ತಮ್ಮ ಕೈಬೆರಳನ್ನು ಕತ್ತರಿಸಿಕೊಳ್ಳುತ್ತಾರೆ. ನಂತರ ಗಾಬರಿಯಿಂದ ಜೋರಾಗಿ ಪತಿ ಡೇನಿಯಲ್​​​ರನ್ನು ಕರೆಯುತ್ತಾರೆ.  ಸನ್ನಿ ಮೇಲೂಧ್ವನಿಗೆ ಓಡಿ ಬಂದ ಡೇನಿಯಲ್​​ ಬಟ್ಟೆ ಸುತ್ತಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದ್ದಾರೆ.

ಸನ್ನಿ ಲಿಯೋನ್

ಸನ್ನಿ ಲಿಯೋನ್

  • Share this:
    ನಟಿ ಸನ್ನಿ ಲಿಯೋನ್​ ಸಾಮಾಜಿಕ ಜಾಲತಾಣದಲ್ಲಿ ಏನಾದರು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ.

    ವಿಡಿಯೋದಲ್ಲಿ ಅಡುಗೆ ಮನೆಗೆ ತರಕಾರಿ ಕಟ್​​ ಮಾಡಲು ಹೋಗಿದ್ದ ಸನ್ನಿ ಲಿಯೋನ್​ ಗೊತ್ತಲ್ಲದೆ ತಮ್ಮ ಕೈಬೆರಳನ್ನು ಕತ್ತರಿಸಿಕೊಳ್ಳುತ್ತಾರೆ. ನಂತರ ಗಾಬರಿಯಿಂದ ಜೋರಾಗಿ ಪತಿ ಡೇನಿಯಲ್​​​ರನ್ನು ಕರೆಯುತ್ತಾರೆ.  ಸನ್ನಿ ಮೇಲೂಧ್ವನಿಗೆ ಓಡಿ ಬಂದ ಡೇನಿಯಲ್​​ ಬಟ್ಟೆ ಸುತ್ತಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಆಗಲೇ ನೋಡಿ ಸನ್ನಿ ಲಿಯೋನ್​ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಪತಿ ಡೇನಿಯಲ್​ ಪ್ರ್ಯಾಂಕ್​ ಮಾಡಲು ಹಿಗೋಂದು ವಿಡಿಯೋ ಮಾಡಿದ್ದಾರೆ.

     



     




    View this post on Instagram




     

    This ain’t no cooking video!!!! Haha @dirrty99 got pranked and served!!


    A post shared by Sunny Leone (@sunnyleone) on






    ನಂತರ ಡೇನಿಯಲ್​ ಬಳಿ ಸನ್ನಿ ಲಿಯೋನ್​ ಹೇಗಿತ್ತು ಫ್ರಾಂಕ್​​​ ವಿಡಿಯೋ ಎಂದು ಕೇಳಿದ್ದಾರೆ. ಆದಕ್ಕೆ ಉತ್ತರಿಸಿದ ಡೇನಿಯಲ್​ ‘ನನಗೆ ಪ್ರ್ಯಾಂಕ್​​​​ಗಳೆಂದರೆ ಇಷ್ಟವಿಲ್ಲ, ನಾನು ಗಂಭೀರ ಸ್ವಭಾವದವನು. ನಾನು ಬೇರೆಯವರಿಗೆ  ಪ್ರ್ಯಾಂಕ್​​​​ಮಾಡುವುದಾಗಲಿ ಅಥವಾ ನನ್ನ ಮೇಲೆ ಪ್ರಯೋಗ ಮಾಡುವುದಾಗಲಿ ಇಷ್ಟವಾಗುವುದಿಲ್ಲ. ಹಾಗಾಗಿ ನೀನು ಮಾಡಿದ ಈ ವಿಡಿಯೋಗೆ ನಾನು ರೇಟಿಂಗ್​ ಕೊಡುವುದಿಲ್ಲ. ನನಗನಿಸಿದ ಮಟ್ಟಿಗೆ ನಿನ್ನ ಈ ಕೆಲಸ ಜೀರೋ‘ ಎಂದು ಡೇನಿಯಲ್​ ಹೇಳಿದ್ದಾರಂತೆ.

    ಇನ್ನು ಸನ್ಮಿ ಲಿಯೋನ್​ ಲೈವ್​ ಚಾಟ್​ ವೇಳೆ ಡೇನಿಯಲ್​ಗೆ ಪ್ರ್ಯಾಂಕ್​​​​ ಮಾಡುವುದಾಗಿ ಅಭಿಮಾನಿಗಳ ಜತೆಗೆ ಹೇಳಿದ್ದರಂತೆ. ಆದರೆ ಈ ಮಾತನ್ನು ಡೇನಿಯಲ್​ ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಲೈವ್​ ಮುಗಿಯುತ್ತಿದ್ದಂತೆ ಸನ್ನಿ ಲಿಯೋನ್​​ ರಕ್ತವನ್ನು ಹೋಲುವ ಕೆಂಪು ಬಣ್ಣವನ್ನು ಬೆರಳ ಮೇಲೆ ಸುರಿಸಿಕೊಂಡು ಪ್ರ್ಯಾಂಕ್​​​​ ಮಾಡಿದ್ದಾರೆ.

    ಶಾರುಖ್​ ಖಾನ್​ ಕೆನ್ನೆಗೆ ಬಾರಿಸುತ್ತಿದ್ದೆ ಎಂದಿದ್ದರು ಜಯಾ ಬಚ್ಚನ್!​; ಯಾವ ಕಾರಣಕ್ಕಾಗಿ ಗೊತ್ತಾ?
    First published: