ಸನ್ನಿ ಲಿಯೋನ್(Sunny Leone) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಪಡ್ಡೆ ಹೈಕ್ಳ ಪಾಲಿಗೆ ದೇವತೆ(Angel) ಆಕೆ. ಜೀವನದಲ್ಲಿ ಯಾವುದನ್ನು ಮಾಡಬಾರದು ಎಂದು ತೋರಿಸಿಕೊಟ್ಟ ಮಹಿಳೆ. ನಿಮ್ಮ ಭೂತಕಾಲ ಹೇಗಿದ್ದರು, ನಿಮ್ಮ ಭವಿಷ್ಯ(Future)ತ್ ಕಾಲ ಚೆನ್ನಾಗಿರಬೇಕು ಎಂದು ತೋರಿಸಿಕೊಟ್ಟ ದಿಟ್ಟ ಮಹಿಳೆ. ವಿದೇಶದಿಂದ ಬಂದು ಇಲ್ಲಿನ ಸಂಸ್ಕೃತಿಗೆ ಬದಲಾಗಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಸನ್ನಿ ಲಿಯೋನ್. ಅಶ್ಲೀಲ ಚಿತ್ರ(Blue Film)ಗಳಲ್ಲಿ ನಟಿಸಿ, ಅದನ್ನು ಬಟ್ಟು ಬಾಲಿವುಡ್ಗೆ ಬಂದು ಹೊಸ ಜೀವನ ರೂಪಿಸಿಕೊಂಡಿದ್ದಾರೆ. ಹಿಂದಿಯ ಹಲವಾರು ಸಿನಿಮಾಗಳಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ. ಹಲವಾರು ಐಟಂ ಸಾಂಗ್(Item Song), ಆಲ್ಬಮ್ ಸಾಂಗ್(Album Song)ಗಳಲ್ಲಿ ನಟಿಸಿದ್ದಾರೆ. ಆದರೆ, ಸನ್ನಿ ಲಿಯೋನ್ರವರವ ಹೊಸ ಹಾಡೊಂದು ಇದೀಗ ವಿವಾದ ಸೃಷ್ಟಿಸಿದ್ದು, ಸಾವರ್ಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಸನ್ನಿ ಲಿಯೋನ್ ವಿರುದ್ಧವೂ ಗರಂ ಆಗಿದ್ದಾರೆ. ಬಾಲಿವುಡ್(Bollywood) ನಟಿ ಸನ್ನಿ ಲಿಯೋನ್ (Sunny Leone) ಮತ್ತು ಗಾಯಕಿ ಕನಿಕಾ ಕಪೂರ್ (Kanika Kapoor) ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಹೊಸ ಹಾಡು ‘ಮಧುಬನ್’ (Madhuban) ಬಿಡುಗಡೆಯಾಗಿದೆ. ಹಾಡಿಗೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಇದೀಗ ಹಾಡಿಗೆ ವಿರೋಧ ವ್ಯಕ್ತವಾಗುತ್ತಿದ್ದು, ಜನರು ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದಾರೆ.
ಸೂಪರ್ ಹಿಟ್ ಸನ್ನಿ ಲಿಯೋನ್ ಹೊಸ ಹಾಡು
ಕೇವಲ ಎರಡು ದಿನದ ಹಿಂದೆ ಬಿಡುಗಡೆಯಾಗಿರುವ ಈ ಹಾಡು ಸಖತ್ ವೀಕ್ಷಣೆ ಕಾಣುತ್ತಿದ್ದು, ಈಗಾಗಲೇ 70 ಲಕ್ಷ ವೀಕ್ಷಕರು ಅದನ್ನು ವೀಕ್ಷಿಸಿದ್ದಾರೆ. ಶರೀಬ್ ಮತ್ತು ತೋಶಿ ಸಂಗೀತ ನೀಡಿರುವ ಈ ಹಾಡನ್ನು ಬಾಲಿವುಡ್ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನಿರ್ದೇಶಿಸಿದ್ದಾರೆ. ಲವರು ಕ್ರಿಸ್ಮಸ್ ಸಂದರ್ಭಕ್ಕೆ ಹೇಳಿಮಾಡಿಸಿದಂತಿದೆ ಎಂದಿದ್ದರೆ, ಮತ್ತೆ ಕೆಲವು ವಿಮರ್ಶೆಯಲ್ಲಿ ಸನ್ನಿ- ಕನಿಕಾ ಕಾಂಬಿನೇಷನ್ ಪ್ರತಿ ಬಾರಿ ಮೋಡಿ ಮಾಡುತ್ತದೆ ಎನ್ನುವುದು ತಪ್ಪು ಕಲ್ಪನೆ ಎನ್ನಲಾಗಿತ್ತು.
ಇದನ್ನು ಓದಿ : ಪಬ್ಲಿಕ್ನಲ್ಲೇ ಆಲಿಯಾ ಭಟ್-ರಣಬೀರ್ ಕಪೂರ್ ಫೈಟ್? ಗಲಾಟೆ ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಸನ್ನಿ ಲಿಯೋನ್ ವಿರುದ್ಧ ಯಾಕೆ ಆಕ್ರೋಶ?
ಟ್ವಿಟರ್ನಲ್ಲಿ ಸನ್ನಿ ಲಿಯೋನ್ ಹಾಡಿನ ಕುರಿತಾದ ಟ್ವೀಟ್ ಹಂಚಿಕೊಂಡಿದ್ದರು. ಹಲವರು ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಎಲ್ಲರಿಗೂ ಈ ಹಾಡು ಇಷ್ಟವಾಗಿಲ್ಲ. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಹಾಡಿನಲ್ಲಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವ ಕಾರಣ ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದರೆ, ಮತ್ತಷ್ಟು ಜನ ಹಾಡನ್ನುನ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಹಲವರು ಸಾಹಿತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾಚಿಕೆಗೇಡಿನ ಸಾಹಿತ್ಯ ಇದಾಗಿದೆ ಎಂದಿದ್ದಾರೆ.
ಇದನ್ನು ಓದಿ : ಮನೆ ಹೊರಗೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವ ಅಭಿಮಾನಿ ಬಗ್ಗೆ ನಟಿ ಪಿಗ್ಗಿ ಹೇಳಿದ್ದೇನು ಗೊತ್ತೇ.!
‘ಸನ್ನಿ ಲಿಯೋನ್ಗೆ ಬೈದು ಪ್ರಯೋಜನವಿಲ್ಲ’
ಹಲವರು ಹಾಡನ್ನು ರಿಪೋರ್ಟ್ ಮಾಡಬೇಕೆಂದು ಒತ್ತಾಯಿಸುತ್ತಿದ್ದು, ‘‘ದೇವರನ್ನು ದೂಷಿಸುವ ಹಾಡನ್ನು ರಿಪೋರ್ಟ್ ಮಾಡಬೇಕು. ಜನರ ಹಣದಿಂದ ನೀವೆಲ್ಲರೂ ಐಷಾರಾಮಿ ಜೀವನ ಅನುಭವಿಸುತ್ತಿದ್ದೀರಿ. ಈ ಕುರಿತು ಬಹಳ ಜಾಗರೂಕರಾಗಿರಿ. ಹಾಡನ್ನು ತೆಗೆದುಹಾಕಿ, ಸಾಹಿತ್ಯ ಬದಲಾಯಿಸಿ’’ ಎಂದು ಬರೆದಿದ್ದಾರೆ. ಇನ್ನೂ ಕೆಲವರು ಆಕೆಯ ಭೂತಕಾಲದ ಬಗ್ಗೆ ಮಾತನಾಡುತ್ತಿದ್ದಾರೆ. ಆ ಬದುಕನ್ನು ನಡೆಸುತ್ತಿದ್ದ ನಿನಗೆ ದೇವರು ಮತ್ತೊಂದು ಅವಕಾಶ ಕೊಟ್ಟಿದ್ದಾರೆ. ಉತ್ತಮವಾಗಿ ಉಪಯೋಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಮತ್ತೊಂದು ವರ್ಗ ಆಕೆಗೆ ಲಿರಿಕ್ಸ್ ಬಗ್ಗೆ ಅಷ್ಟು ಗೊತ್ತಾಗುವುದಿಲ್ಲ. ಸಾಹಿತ್ಯ ಬರೆದವರು, ಹಾಗೂ ನಿರ್ದೇಶಕರಿಗೆ ಬುದ್ಧಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ