ಕೋಲ್ಕತ್ತಾ ಕಾಲೇಜಲ್ಲಿ ಕಲಾ ವಿಭಾಗಕ್ಕೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ ಸನ್ನಿ ಲಿಯೋನ್​!

 ಸನ್ನಿ ಡಿಯೋಲ್​ ಬಿಜೆಪಿ ಸೇರ್ಪಡೆಯಾದಾಗಲೂ ಸನ್ನಿ ಲಿಯೋನ್​ ಭಾರೀ ಸುದ್ದಿಯಾಗಿದ್ದರು. ಸುದ್ದಿ ವಾಹಿನಿಯ ಆ್ಯಂಕರ್​ ಒಬ್ಬರು ಸನ್ನಿ ಡಿಯೋಲ್​ ಎಂದು ಹೇಳಲು ಸನ್ನಿ ಲಿಯೋನ್​ ಎಂದು ಉಚ್ಛರಿಸಿದ್ದರು. ಇದು ಭಾರೀ ಟ್ರೋಲ್​ ಆಗಿತ್ತು.

 • Share this:
  ಕೋಲ್ಕತ್ತಾ: ಸನ್ನಿ ಲಿಯೋನ್​ ಈ ಮೊದಲು ನೀಲಿ ತಾರೆಯಾಗಿದ್ದರು. ಅದನ್ನು ತೊರೆದು ಬಾಲಿವುಡ್​ನಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಕಾಲೇಜೊಂದಕ್ಕೆ ಪ್ರವೇಶ ಪಡೆಯುತ್ತಿದ್ದಾರಂತೆ! ಇದಕ್ಕಾಗಿ ಅವರು ಅರ್ಜಿ ಕೂಡ ಸಲ್ಲಿಕೆ ಮಾಡಿದ್ದು, ಪ್ರವೇಶ ಪಟ್ಟಿಯಲ್ಲಿ ಮೊದಲಿದ್ದಾರೆ! ಅರೆ ಸನ್ನಿ ಪದವಿ ಕಾಲೇಜಿಗೆ ಪ್ರವೇಶ ಪಡೆಯುತ್ತಿರೋದೆಕೆ ಅನ್ನೋ ಪ್ರಶ್ನೆ ನಿಮ್ಮದೆ? ಅದಕ್ಕೆ ಇಲ್ಲಿದೆ ಉತ್ತರ.

  ಕೋಲ್ಕತ್ತಾದ ಕಾಲೇಜೊಂದರ ಪ್ರವೇಶ ಪಟ್ಟಿಯಲ್ಲಿ ನಟಿ ಸನ್ನಿ ಲಿಯೋನ್​ ಹೆಸರು ಟಾಪ್​ನಲ್ಲಿ ಬಂದಿದೆ. ಇದನ್ನು ನೋಡಿದ ಎಲ್ಲರೂ ಅಚ್ಚರಿಗೊಂಡಿದ್ದರು. ಸನ್ನಿ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿರೋದೆಕೆ ಎನ್ನುವ ಪ್ರಶ್ನೆಯನ್ನೂ ಕೇಳಿಕೊಂಡಿದ್ದರು. ನಂತರ ಇದು ಯಾರೋ ಕಿಡಿಗೇಡಿಗಳು ಮಾಡಿದ ದುಷ್ಕೃತ್ಯ ಎಂಬ ವಿಚಾರ ಬೆಳಕಿಗೆ ಬಂದಿದೆ.

  ಬ್ಯಾಚುಲರ್​ ಆಫ್​ ಆರ್ಟ್ಸ್​​​​ಗೆ ಪ್ರವೇಶ ಪಡೆಯಲು ಅರ್ಹರಾದ ಮೊದಲ ಪಟ್ಟಿಯನ್ನು ಕಾಲೇಜ್​ನ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಪ್ರವೇಶ ಪಟ್ಟಿಯಲ್ಲಿ ನಟಿ ಸನ್ನಿ ಲಿಯೋನ್​ ಹೆಸರು ಮೊದಲಿತ್ತು. ಅಪ್ಲಿಕೇಷನ್​ ಐಡಿ ಹಾಗೂ ರೋಲ್​ ನಂಬರ್​ಗಳನ್ನೂ ಕೂಡ ನೀಡಲಾಗಿತ್ತು.

  ಇದನ್ನೂ ಓದಿ: ಈಗಿನ ಕಾಂಗ್ರೆಸ್ ಅಧ್ಯಕ್ಷರಿಗೆ ಶೇ. 1ರಷ್ಟು ಬೆಂಬಲವೂ ಇಲ್ಲ; ಸೋನಿಯಾ ವಿರುದ್ಧ ಮತ್ತೆ ಭುಗಿಲೆದ್ದ ಅಸಮಾಧಾನ

  ಕೊರೋನಾ ವೈರಸ್​ ಇರುವುದರಿಂದ ಆನ್​ಲೈನ್​ ಮೂಲಕವೇ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ. ಅನಾಮಧೇಯ ವ್ಯಕ್ತಿಗಳು ಸನ್ನಿ ಲಿಯೋನ್​ ಹೆಸರಿನಲ್ಲಿ ಅರ್ಜಿ ತುಂಬಿದ್ದಾರೆ. ಇದು ದುರುದ್ದೇಶ ಇಟ್ಟುಕೊಂಡು ಮಾಡಿರುವ ಕೃತ್ಯ. ನಾವು ಇದನ್ನು ಸರಿ ಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇವೆ. ನಾವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.

  ಸನ್ನಿ ಡಿಯೋಲ್​ ಬಿಜೆಪಿ ಸೇರ್ಪಡೆಯಾದಾಗಲೂ ಸನ್ನಿ ಲಿಯೋನ್​ ಭಾರೀ ಸುದ್ದಿಯಾಗಿದ್ದರು. ಸುದ್ದಿ ವಾಹಿನಿಯ ಆ್ಯಂಕರ್​ ಒಬ್ಬರು ಸನ್ನಿ ಡಿಯೋಲ್​ ಎಂದು ಹೇಳಲು ಸನ್ನಿ ಲಿಯೋನ್​ ಎಂದು ಉಚ್ಛರಿಸಿದ್ದರು. ಇದು ಭಾರೀ ಟ್ರೋಲ್​ ಆಗಿತ್ತು.
  Published by:Rajesh Duggumane
  First published: