Sunny Leone: ಗೂಗಲ್​​​ನಲ್ಲಿ ಪ್ರಧಾನಿ ಮೋದಿ, ನಟ ಶಾರುಖ್ ಖಾನ್ ಹಿಂದಿಕ್ಕಿದ ಬಾಲಿವುಡ್​ ನಟಿ!

Google Trends: ಕಳೆದ ವರ್ಷವೂ ಗೂಗಲ್​ ಟ್ರೆಂಡ್ಸ್​​ನಲ್ಲಿ ನಟಿ ಸನ್ನಿ ಲಿಯೋನ್​ ಮೊದಲ ಸ್ಥಾನದಲ್ಲಿದ್ದರು. ಈ ಬಾರಿಯೂ ಆ ಸ್ಥಾನ ಉಳಿಸಿಕೊಂಡಿದ್ದಾರೆ. ಈ ಮೊಲಕ ಸೆಲೆಬ್ರಿಟಿಗಳಾದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್​ ನಟ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮೊದಲಾದವರನ್ನು ಹಿಂದಿಕ್ಕಿದ್ದಾರೆ.

Rajesh Duggumane | news18
Updated:August 13, 2019, 10:51 AM IST
Sunny Leone: ಗೂಗಲ್​​​ನಲ್ಲಿ ಪ್ರಧಾನಿ ಮೋದಿ, ನಟ ಶಾರುಖ್ ಖಾನ್ ಹಿಂದಿಕ್ಕಿದ ಬಾಲಿವುಡ್​ ನಟಿ!
ಸನ್ನಿ ಲಿಯೋನ್​
  • News18
  • Last Updated: August 13, 2019, 10:51 AM IST
  • Share this:
ನಟಿ ಸನ್ನಿ ಲಿಯೋನ್​ ಬಾಲಿವುಡ್​ನಲ್ಲಿ ಮಿಂಚಿದ್ದಾರೆ. ಮಕ್ಕಳನ್ನು ದತ್ತು ಪಡೆದಿರುವ ಅವರು, ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಸನ್ನಿ ಮೊದಲಿನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ತಮ್ಮ ಖ್ಯಾತಿಯನ್ನು ಮಾತ್ರ ಕಳೆದುಕೊಂಡಿಲ್ಲ! ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಗೂಗಲ್​ ಸರ್ಚ್​ ಮಾಡಿದವರ ಸಾಲಿನಲ್ಲಿ ಸನ್ನಿ ಲಿಯೋನ್​ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎಂಬುದು ಅದಕ್ಕೆ ಸಾಕ್ಷಿ.

ಹೌದು, ಈ ಬಾರಿಯೂ ನಟಿ ಸನ್ನಿಲಿಯೋನ್​ ಗೂಗಲ್​ ಸರ್ಚ್​ನಲ್ಲಿ ಸೆಲೆಬ್ರಿಟಿಗಳಾದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್​ ನಟ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮೊದಲಾದವರನ್ನು ಹಿಂದಿಕ್ಕಿದ್ದಾರೆ. ಗೂಗಲ್​ ಟ್ರೆಂಡ್ ಮಾಹಿತಿ ಪ್ರಕಾರ, ಸನ್ನಿ ಕುರಿತು ನಿರ್ಮಾಣವಾದ ‘ಕರಣ್​ಜಿತ್​ ಕೌರ್​; ದಿ ಅನ್​ಟೋಲ್ಡ್​​​ ಸ್ಟೋರಿ ಆಫ್​ ಸನ್ನಿ ಲಿಯೋನ್​’ ಕುರಿತ ಮಾಹಿತಿ ಹಾಗೂ ವಿಡಿಯೋಗಾಗಿ ಜನರು ಹುಡುಕಾಟ ನಡೆಸಿದ್ದಾರೆ. ಇನ್ನು, ಸನ್ನಿ ಮೂಲದ ಬಗ್ಗೆಯೂ ಹುಡುಕಾಟ ನಡೆಸಿದ್ದಾರೆ.

ಕಳೆದ ವರ್ಷವೂ ಗೂಗಲ್​ ಟ್ರೆಂಡ್ಸ್​​ನಲ್ಲಿ ನಟಿ ಸನ್ನಿ ಲಿಯೋನ್​ ಮೊದಲ ಸ್ಥಾನದಲ್ಲಿದ್ದರು. ಈ ಬಾರಿಯೂ ಆ ಸ್ಥಾನ ಉಳಿಸಿಕೊಂಡಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಕೋಕಾಕೋಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿನಿಮಾ ಕಥೆ ಸಾಗಲಿದ್ದು, ಅವರು ಬೋಜ್ಪುರಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಆರ್​​ ಯು ವರ್ಜಿನ್​? ಎಂಬ ಅಭಿಮಾನಿಯ ಪ್ರಶ್ನೆಗೆ ಟ್ರೈಗರ್​ ಶ್ರಾಫ್​ ನೀಡಿದ ಉತ್ತರವೇನು ಗೊತ್ತಾ?

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ