Sunny Leone: 'ಆ ವಿಡಿಯೋ' ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಸನ್ನಿ! ಅಷ್ಟಕ್ಕೂ 'ಸೇಸಮ್ಮ' ಹೇಳಿದ್ದೇನು?

ಮೊದಲು ತಮ್ಮ ಹಸಿ-ಬಿಸಿ ದೃಶ್ಯಗಳಿಂದಲೇ ಸುದ್ದಿ ಮಾಡಿದವರು ನಟಿ ಸನ್ನಿ ಲಿಯೋನ್. ಬಳಿ ನೀಲಿ ಚಿತ್ರಗಳ ರಾಣಿ ಎಂಬ ಹಣೆಪಟ್ಟಿ ಕಳಚಿ, ಪ್ರತಿಭಾನ್ವಿತ ನಟಿ ಅಂತ ಸಾಬೀತು ಮಾಡಿದ್ರು, ಬಳಿಕ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಮಾದರಿಯಾದರು. ಅವರ ಲೈಫ್‌ನಲ್ಲಿ ಎಷ್ಟೊಂದು ಕಮೆಂಟ್ ಎದುರಿಸಿಲ್ಲ. ಆದರೆ ಈ ಒಂದು ಕಮೆಂಟ್‌ಗೆ ಮಾತ್ರ ಸನ್ನಿ ಲಿಯೋನ್ ಖಡಕ್ ಆಗಿ ಉತ್ತರಿಸಿದ್ದಾರೆ.

ನಟಿ ಸನ್ನಿಲಿಯೋನ್

ನಟಿ ಸನ್ನಿಲಿಯೋನ್

  • Share this:
ಸನ್ನಿ ಲಿಯೋನ್‌ (Sunny Leone) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಆಗ ತಾನೇ ಮೀಸೆ ಚಿಗುರುತ್ತಿರುವ ಹುಡುಗರಿಂದ (Boys) ಹಿಡಿದು, ಹಲ್ಲು ಬಿದ್ದು, ಕಣ್ಣು ಮಂಜಾದ ಮುದುಕರವರೆಗೂ (Old Man) ಹೆಚ್ಚಿನವರಿಗೆ ಈ ‘ಸೇಸಮ್ಮ’ನ ಬಗ್ಗೆ ಗೊತ್ತು. ಮೊದಲು ತಮ್ಮ ಹಸಿ-ಬಿಸಿ ದೃಶ್ಯಗಳಿಂದಲೇ ಸುದ್ದಿ ಮಾಡಿದವರು ನಟಿ ಸನ್ನಿ ಲಿಯೋನ್. ಬಳಿ ‘ನೀಲಿ ಚಿತ್ರಗಳ ರಾಣಿ’ (Queen of the Blue Films) ಎಂಬ ಹಣೆಪಟ್ಟಿ ಕಳಚಿ, ಬಳಿಕ ತಾನೊಬ್ಬ ಪ್ರತಿಭಾನ್ವಿತ ನಟಿ (Heroine) ಅಂತ ಸಾಬೀತು ಮಾಡಿದ್ರು. ಅದಾದ ಮೇಲೆ ಸಮಾಜ ಸೇವೆಯಲ್ಲೂ (Social Service) ತೊಡಗಿಸಿಕೊಂಡು ಮಾದರಿಯಾದರು. ಮಕ್ಕಳನ್ನು ದತ್ತು (Adoption) ತೆಗೆದುಕೊಂಡು ‘ಮಹಾತಾಯಿ’ ಎನಿಸಿಕೊಂಡ್ರು. ಅವರ ಲೈಫ್‌ನಲ್ಲಿ (Life) ಎಷ್ಟೊಂದು ಕಮೆಂಟ್ (Comment) ಎದುರಿಸಿಲ್ಲ. ಆದರೆ ಈ ಒಂದು ಕಮೆಂಟ್‌ಗೆ ಮಾತ್ರ ಸನ್ನಿ ಲಿಯೋನ್ ಖಡಕ್ ಆಗಿ ಉತ್ತರಿಸಿದ್ದಾರೆ.

 ಸನ್ನಿ ಲಿಯೋನ್‌ ಮಕ್ಕಳ ಬಗ್ಗೆ ಕಾಮೆಂಟ್ ಮಾಡಿದ್ದ ವ್ಯಕ್ತಿ

ನಟಿ ಸನ್ನಿ ಲಿಯೋನ್‌ಗೆ ಮೂವರು ಮಕ್ಕಳು. ಸನ್ನಿ ಮತ್ತು ಪತಿ ಡೇನಿಯಲ್ ವೆಬರ್ 2017 ರಲ್ಲಿ ಮೊದಲು ಬಾಲಕಿ ನಿಶಾಳನ್ನು ದತ್ತು ಪಡೆದರು. ಅದೇ ಮುಂದಿನ ವರ್ಷ, ಬಾಡಿಗೆ ತಾಯ್ತನದ ಮೂಲಕ ದಂಪತಿಗಳು ಅವಳಿ ಗಂಡು ನೋವಾ ಮತ್ತು ಆಶರ್‌ಗೆ ಪೋಷಕರಾದರು. ಇದೀಗ ಸನ್ನಿ ಲಿಯೋನ್ ತನ್ನ ಮಗಳು ನಿಶಾಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.

“ಪ್ರಚಾರಕ್ಕಾಗಿ ದತ್ತು ತೆಗೆದುಕೊಂಡಿದ್ದಾರೆ” ಅಂತ ಆರೋಪ

ಈ ಹಿಂದೆ, ಸನ್ನಿ ಲಿಯೋನ್ ಬಾಲಕಿ ನಿಶಾ ಅವರನ್ನು ಪ್ರಚಾರಕ್ಕಾಗಿ ಮಾತ್ರ ದತ್ತು ತೆಗೆದುಕೊಂಡಿದ್ದಾರೆ ಎಂದು ಟ್ರೋಲ್‌ಗಳು ಆರೋಪಿಸಿದ್ದವು. ನಿಶಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಆದರೆ ನೋವಾ ಮತ್ತು ಆಶರ್‌ ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಿಶಾಳನ್ನು ದತ್ತು ಪಡೆದಿದ್ದು ಪ್ರಚಾರಕ್ಕಷ್ಟೇ. ಹೊರತಾಗಿ ಅವಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಉದ್ದೇಶ ಇಲ್ಲ ಅಂತ ಟ್ರೋಲಿಗರು ಆರೋಪಿಸಿದ್ದರು.

ಇದನ್ನೂ ಓದಿ: Janhvi Kapoor: ಬಾಲಿವುಡ್​ನ ಮುದ್ದು ಮುಖದ ಚೆಲುವೆಗೆ ಜನ್ಮದಿನದ ಸಂಭ್ರಮ, 25ನೇ ವಸಂತಕ್ಕೆ ಕಾಲಿಟ್ಟ ಜಾಹ್ನವಿ!

ವಿಡಿಯೋ ಟ್ರೋಲ್ ಮಾಡಿದ್ದ ನೆಟ್ಟಿಗರು

ಜನವರಿಯಲ್ಲಿ, ಪಾಪರಾಜಿ ಚಿತ್ರೀಕರಿಸಿದ ವೀಡಿಯೊದಲ್ಲಿ ಸನ್ನಿ ತನ್ನ ಮೂವರು ಮಕ್ಕಳಾದ ನಿಶಾ, ನೋಹ್ ಮತ್ತು ಆಶರ್ ಅವರೊಂದಿಗೆ ಮೆಟ್ಟಿಲುಗಳ ಕೆಳಗೆ ನಡೆಯುವುದನ್ನು ಚಿತ್ರೀಕರಿಸಲಾಗಿತ್ತು.  ವೀಡಿಯೊದಲ್ಲಿ, ಸನ್ನಿ ತನ್ನ ಇಬ್ಬರು ಮಕ್ಕಳಾದ ನೋಹ್ ಮತ್ತು ಆಶರ್ ಅನ್ನು ಹಿಡಿದು ನಡೆಸುತ್ತಾಕೆ. ಆದರೆ ನಿಶಾ ಮೆಟ್ಟಿಲುಗಳನ್ನು ಇಳಿಯುತ್ತಿರುವುದನ್ನು ನೋಡಿಯೂ ಸುಮ್ಮನಿರುತ್ತಾರೆ. ಈ ವಿಡಿಯೋವನ್ನೋ ಟ್ರೋಲಿಗರು ವೈರಲ್ ಮಾಡಿದ್ದರು. "ಸನ್ನಿ ಲಿಯೋನ್ ತನ್ನ ಮಗಳನ್ನು ಪ್ರಚಾರಕ್ಕಾಗಿ ಮಾತ್ರ ದತ್ತು ಪಡೆದಿದ್ದಾಳೆ " ಅಂತ ಬಹುತೇಕರು ಕಾಮೆಂಟ್ ಮಾಡಿದ್ದರು.

ಕಮೆಂಟ್‌ಗಳಿಗೆ ಸನ್ನಿ ಖಡಕ್ ಉತ್ತರ

ಇತ್ತೀಚಿಗೆ ಡಿಎನ್‌ಎ ಪತ್ರಿಕೆ ಜೊತೆ ಮಾತನಾಡಿದ ಸನ್ನಿ, ಈ ರೀತಿಯ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಯಾವುದೇ ಪೋಷಕರಿಗೆ ಮಗುವನ್ನು ಅಥವಾ ಬಹು ಮಕ್ಕಳನ್ನು ಬೆಳೆಸಲು ಏನು ಬೇಕು ಎಂದು ತಿಳಿದಿದೆ. ಆದ್ದರಿಂದ, ಅಲ್ಲಿ ಕಾಮೆಂಟ್ ಮಾಡುವವರಿಗೆ ಅದನ್ನು ಬಿಟ್ಟು ಮುಂದೆಕ್ಕೆ ನಡೆಯಿರಿ, ನೀವೂ ಬೆಳೆಯಿರಿ ಎಂದು ಹೇಳುತ್ತೇನೆ ಅಂತ ಹೇಳಿದ್ದರು.

ಇದನ್ನೂ ಓದಿ: Rashmika Mandanna: ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸೋಲು? ಕಿರಿಕ್​ ಬ್ಯೂಟಿಗೆ ಯಾಕ್​ ಬೇಕಿತ್ತು ಈ ಸಿನಿಮಾ ಎಂದ ಫ್ಯಾನ್ಸ್​!

 “ಕಮೆಂಟ್ ಮಾಡಿದವರಿಗೂ, ನನ್ನ ಲೈಫ್‌ಗೂ ಸಂಬಂಧವೇ ಇಲ್ಲ”

‘ಈ ರೀತಿ ಕಮೆಂಟ್​ ಮಾಡಿದ ವ್ಯಕ್ತಿಗೂ ನನ್ನ ಲೈಫ್​ಗೂ ಏನೂ ಸಂಬಂಧವಿಲ್ಲ. ಒಂದು ಫೋಟೋ ಆಧರಿಸಿ ನಾನು ಹೇಗೆ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎನ್ನುವುದನ್ನು ಜಡ್ಜ್​ ಮಾಡೋದು ಬೇಡ. ನನ್ನ ಲೈಫ್​ಅನ್ನು ಎಲ್ಲಿಯೋ ಕುಳಿತು ನೋಡಿ ಹೇಗೆ ನಿರ್ಧರಿಸಲಾಗುತ್ತದೆ? ನನ್ನ ಮಕ್ಕಳೇ ನನ್ನ ಕುಟುಂಬ. ಈ ರೀತಿಯ ಕಮೆಂಟ್​ಗಳು ಹಾಕೋದು ನಿಜಕ್ಕೂ ಮಕ್ಕಳಾಟ ಎನಿಸುತ್ತದೆ’ ಎಂದಿದ್ದಾರೆ ಸನ್ನಿ ಲಿಯೋನ್.
Published by:Annappa Achari
First published: