ಲಾಕ್ಡೌನ್ ಸಮಯವನ್ನು ಸಿನಿತಾರೆಯರು ಒಂದಲ್ಲ ಒಂದು ಚಟುವಟಿಕೆಗಳ ಮೂಲಕ ಕಳೆಯುತ್ತಿದ್ದಾರೆ. ಕೆಲ ನಟ-ನಟಿಯರು ಕೊರೋನಾ ಜಾಗೃತಿ ಮೂಲಕ ಗಮನ ಸೆಳೆದರೆ, ಮತ್ತೆ ಕೆಲವರು ವಿಶಿಷ್ಟ ಚಾಲೆಂಜ್ ಮೂಲಕ ಸುದ್ದಿಯಾದರು. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ನಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಸಾಕಷ್ಟು ಗಮನ ಸೆಳೆದಿದ್ದ ಸೆಲೆಬ್ರಿಟಿ ದಿನಚರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಕೂಡ ಧೂಳೆಬ್ಬಿಸುತ್ತಿದೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಅವರ ವಿಡಿಯೋ. ದಿನಗಳ ಹಿಂದೆಯಷ್ಟೇ ಸನ್ನಿ ಪತಿಯನ್ನು ಪ್ರ್ಯಾಂಕ್ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಬೆರಳನ್ನು ಕುಯ್ದುಕೊಂಡಿರುವಂತೆ ನಾಟಕವಾಡಿದ ಜಿಸ್ಮ್ ಬೆಡಗಿ, ಪತಿ ಡ್ಯಾನಿಲ್ ವೆಬರ್ನ್ನು ಬೆಚ್ಚಿ ಬೀಳಿಸಿದ್ದರು.
ಇದೀಗ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅದು ಮನೆ ಕೆಲಸ ಮಾಡುತ್ತಿರುವ ವಿಡಿಯೋ ತುಣುಕು. ಕಪ್ಪುಬಣ್ಣದ ಸ್ಟೈಲಿಷ್ಟ್ ಡ್ರೆಸ್, ಕೊರಳಲ್ಲಿ ಆಭರಣ, ಕಾಲಿಗೆ ಹೈ ಹೀಲ್ಸ್...ಹೀಗೆ ಪಾರ್ಟಿ ಲುಕ್ನಲ್ಲಿ ಡ್ಯಾನ್ಸ್ ಮಾಡುತ್ತಾ ಮನೆ ಒರೆಸುವ ವಿಡಿಯೋವೊಂದನ್ನು ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಗೊತ್ತಿಲ್ಲದ ಕೆಲಸ ಮಾಡಲು ಹೋದರೆ ಹೀಗಿರುತ್ತೆ. ಸೆಲೆಬ್ರಿಟಿಗಳು ಮನೆ ಒರೆಸುವುದು ಹೀಗೆ, ಸನ್ನಿ ಲಿಯೋನ್ ಕೆಲಸ ಮಾಡುವಾಗ ಅತ್ಯುತ್ತಮ ಡ್ರೆಸ್ ಧರಿಸುತ್ತಾರೆ...ಎಂಬಿತ್ಯಾದಿ ಕಮೆಂಟ್ಗಳ ಮೂಲಕ ನೆಟ್ಟಿಗರು ಬಾಲಿವುಡ್ ತಾರೆಯ ಕಾಲೆಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ