ಕೊಟೇಶನ್ ಗ್ಯಾಂಗ್ ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ನಟಿ ಸನ್ನಿ ಲಿಯೋನ್ (Actress Sunny Leone) ಗಾಯಗೊಂಡಿದ್ದಾರೆ. ಕಾಲಿನಲ್ಲಿ ರಕ್ತ ನೋಡಿ ಸನ್ನಿ ಫುಲ್ ಟೆನ್ಷನ್ (Tension) ಆಗಿದ್ದಾರೆ. ತಕ್ಷಣ ನಟಿಗೆ ಪ್ರಥಮ ಚಿಕಿತ್ಸೆ (First Aid) ಮಾಡಲಾಗಿದೆ. ಈ ವೇಳೆ ನಟಿ ಸನ್ನಿ ಲಿಯೋನ್ ನನಗೆ ಇಂಜೆಕ್ಷನ್ (Injection) ಬೇಡ ಎಂದು ಕೂಗಾಡಿದ್ದಾರೆ. ಸನ್ನಿ ಲಿಯೋನ್ ಕೂಗಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಸನ್ನಿ ಕಾಲಿಗೆ ಗಾಯ, ನಟಿ ಫುಲ್ ಟೆನ್ಷನ್
ಕೊಟೇಶನ್ ಗ್ಯಾಂಗ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿರುವ ನಟಿ ಸನ್ನಿ ಲಿಯೋನ್, ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆ ಶೂಟಿಂಗ್ ವೇಳೆ ನಡೆದ ಅವಘಡದ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಲಿನಲ್ಲಿ ರಕ್ತ ನೋಡಿ ಗಾಬರಿಗೊಂಡ ಸನ್ನಿ
ಶೂಟಿಂಗ್ ವೇಳೆ ನಟ-ನಟಿಯರು ತುಂಬಾ ಸಹಜವಾಗಿ ನಟಿಸಲು ಇಷ್ಟಪಡುತ್ತಾರೆ. ಅಷ್ಟೇ ಸಾಹಸ ದೃಶ್ಯಗಳಲ್ಲೂ ರಿಸ್ಕ್ ತೆಗೆದುಕೊಂಡು ಫೈಟ್ ಮಾಡ್ತಾರೆ. ಇಂತಹ ಸನ್ನಿವೇಶದ ವೇಳೆ ಅನೇಕ ನಟ-ನಟಿಯರು ಸಹ ಗಾಯಗೊಂಡಿದ್ದಾರೆ. ಸನ್ನಿ ಲಿಯೋನ್ ಸಹ ಇದೇ ರೀತಿ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಸಣ್ಣ ಮಟ್ಟದ ಗಾಯವಾಗಿದ್ರೂ, ಕಾಲಿನಲ್ಲಿ ರಕ್ತ ನೋಡಿ ಶಾಕ್ ಆಗಿದ್ದಾರೆ.
ವಿಡಿಯೋ ಶೇರ್ ಮಾಡಿದ ಸನ್ನಿ
ಸನ್ನಿ ಲಿಯೋನ್ ಶೇರ್ ಮಾಡಿರುವ ವಿಡಿಯೋದಲ್ಲಿ ನಟಿ ಚಿತ್ರೀಕರಣದ ಗೆಟಪ್‌ನಲ್ಲಿ ಇರುವುದನ್ನು ಕಾಣಬಹುದು. ಆದರೆ, ದೃಶ್ಯವೊಂದರ ಚಿತ್ರೀಕರಣದ ವೇಳೆ ಅವರ ಕಾಲಿಗೆ ಗಾಯವಾಗಿದೆ. ಅವರ ಒಂದು ಬೆರಳಿಗೆ ಗಾಯವಾಗಿದ್ದು, ಬೆರಳಿನಿಂದ ರಕ್ತ ಬರುತ್ತಿದೆ. ತಕ್ಷಣ ಚಿತ್ರತಂಡದವರೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಟಿಯ ಗಾಯದ ಮೇಲೆ ನೋವು ನಿವಾರಕ ಸ್ಪ್ರೇ ಸಿಂಪಡಿಸುತ್ತಾರೆ.
View this post on Instagram
ಸನ್ನಿ ಲಿಯೋನ್ ಗಾಯ ನೋಡಿ ಚಿತ್ರತಂಡದವರು ನಟಿಗೆ ಇಂಜೆಕ್ಷನ್ ಹಾಕಿ ಎಂದು ಹೇಳುತ್ತಾರೆ. ಇಂಜೆಕ್ಷನ್ ಹೆಸರು ಹೇಳಿದ ತಕ್ಷಣ, ಸನ್ನಿ ಲಿಯೋನ್ ತನ್ನ ತಂಡವನ್ನು ಬೈಯಲು ಪ್ರಾರಂಭಿಸಿದ್ದಾರೆ. ಇಂಜೆಕ್ಷನ್ ಬೇಡ ಎಂದು ಸನ್ನಿ ಕೂಗಾಡಿದ್ದಾರೆ. ಸನ್ನಿ ಲಿಯೋನ್‌ಗೆ ಯಾವುದೇ ಗಂಭೀರ ಗಾಯವಾಗಿಲ್ಲ ಮತ್ತು ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಮಾತ್ರ ಅಯ್ಯೋ ಸನ್ನಿ ಲಿಯೋನ್‌ಗೆ ಏನಾಯ್ತು. ಬೇಗ ಹುಷಾರಾಗಿ ಎಂದು ಕಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ: Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!
4 ಭಾಷೆಯಲ್ಲಿ ರಿಲೀಸ್ ಆಗಲಿದೆ 'ಕೊಟೇಶನ್ ಗ್ಯಾಂಗ್'
'ಕೊಟೇಶನ್ ಗ್ಯಾಂಗ್' ನಾಲ್ಕು ಭಾಷೆಗಳಲ್ಲಿ ಬಿಡುಗಡೆ
ಸನ್ನಿ ಲಿಯೋನ್ ಅಭಿನಯದ 'ಕೊಟೇಶನ್ ಗ್ಯಾಂಗ್' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದು ಸಾಕಷ್ಟು ಭಯಾನಕವಾಗಿದೆ. ಜನರು ಕೂಡ ಟ್ರೇಲರ್ ಅನ್ನು ತುಂಬಾ ಇಷ್ಟಪಟ್ಟಿದ್ದಾರೆ. ಚಿತ್ರದಲ್ಲಿ ಜಾಕಿ ಶ್ರಾಫ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ