ಲಾಕ್​ಡೌನ್​​ ಸಮಯದಲ್ಲಿ ಸನ್ನಿ ಲಿಯೋನ್​ ಮಾಡಿದ ಕೆಲಸ ನೋಡಿದ್ದೀರಾ?

Sunny Leone: ಲಾಕ್​ಡೌನ್ ಆದೇಶವನ್ನು ಪಾಲಿಸುತ್ತಾ​ ಮನೆಯಲ್ಲಿರುವ ಸನ್ನಿ ಲಿಯೋನ್​ ಪೇಟಿಂಗ್ ಮಾಡಿದ್ದಾರೆ. ಮೊದಲಿನಿದಂಲೇ ಸನ್ನಿ ಲಿಯೋಗ್​ಗೆ ಚಿತ್ರ ಬಿಡಿಸುವುದೆಂದರೆ ಇಷ್ಟವಂತೆ. ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ ಪೇಟಿಂಗ್​ ಮಾಡಲು ಸಮಯವಕಾಶ ಸಿಗುತ್ತಿರಲಿಲ್ಲವಂತೆ.

 ಸನ್ನಿ ಲಿಯೋನ್​

ಸನ್ನಿ ಲಿಯೋನ್​

 • Share this:
  ಲಾಕ್​​ಡೌನ್​ ಸಮಯದಲ್ಲಿ ಸ್ಟಾರ್​ ನಟ-ನಟಿಯರು ಮನೆಯಲ್ಲಿ ಕುಳಿತುಕೊಂಡು ಯೋಗ ಮಾಡುತ್ತಾ, ಧ್ಯಾನ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲವರು ಅಡುಗೆ ಮಾಡುತ್ತಾ, ತಂದೆ-ತಾಯಿಗೆ ಸಹಾಯ​​​​ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಆದರೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​​ ಮಾತ್ರ ಲಾಕ್​ಡೌನ್​ ಸಮಯದಲ್ಲಿ ಏನ್​ ಮಾಡಿದ್ದಾರೆ ಗೊತ್ತಾ?

  ಲಾಕ್​ಡೌನ್ ಆದೇಶವನ್ನು ಪಾಲಿಸುತ್ತಾ​ ಮನೆಯಲ್ಲಿರುವ ಸನ್ನಿ ಲಿಯೋನ್​ ಪೇಟಿಂಗ್ ಮಾಡಿದ್ದಾರೆ. ಮೊದಲಿನಿದಂಲೇ ಸನ್ನಿ ಲಿಯೋಗ್​ಗೆ ಚಿತ್ರ ಬಿಡಿಸುವುದೆಂದರೆ ಇಷ್ಟವಂತೆ. ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ ಪೇಟಿಂಗ್​ ಮಾಡಲು ಸಮಯವಕಾಶ ಸಿಗುತ್ತಿರಲಿಲ್ಲವಂತೆ.

  ಲಾಕ್​ಡೌನ್​ ಘೋಷಣೆಯಾದಾಗ ಮನೆಯಲ್ಲಿ ಕುಳಿತುಕೊಂಡು ಏನು ಮಾಡುವುದು ಎಂಬ ಯೋಚನೆ ಬಂದಾಗ ಸನ್ನಿ ಲಿಯೋನ್ ಪೇಟಿಂಗ್​ ಮಾಡುವ ಐಡಿಯಾ ಹೊಳೆದಿದೆ. ತಕ್ಷಣ ಕ್ಯಾನ್ವಾಸ್​, ಪೇಂಟ್​ ಬ್ರಶ್​​ ಹಿಡಿದ ಅವರು ‘ಬ್ರೋಕನ್​ ಗ್ಲಾಸ್‘​​ ಎಂಬ ಚಿತ್ರ ಬಿಡಿಸಿದ್ದಾರೆ

   
  ಇನ್ನು ಸನ್ನಿಲಿಯೋನ್​  ತಮ್ಮ ಬ್ರೋಕನ್​ ಗ್ಲಾಸ್​  ಪೇಟಿಂಗ್​ ವಿಶೇಷತೆ ಬಗ್ಗೆಯೂ ಹೇಳಿದ್ದಾರೆ. ಒಡೆದ ಗ್ಲಾಸ್​ ಪೀಸ್​ನ ಚಿತ್ರ ಇದಾಗಿದ್ದು, ಅದು ಎಲ್ಲರ ಜೀವನದ ಸಂಕೇತವಾಗಿದೆ ‘ ಸದ್ಯಕ್ಕೆ ಎಲ್ಲರದ್ದು ಒಡೆದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಗ್ಲಾಸ್​ ತುಂಡುಗಳನ್ನು ಜೋಡಿಸಿದರೆ ಮತ್ತೊಮ್ಮೆ ಒಂದಾಗುತ್ತದೆ‘ ಎಂದು ಸನ್ನಿ ಲಿಯೋನ್​ ಹೇಳಿದ್ದಾರೆ.

  ‘ಬ್ರೋಕನ್​ ಗ್ಲಾಸ್‘​ ಚಿತ್ರವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಸನ್ನಿ ಲಿಯೋನ್​ ಅವರ ಹೊಸ ಕೌಶಲ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ವರುಣ್​ ತೇಜ್ ‘ಬಾಕ್ಸರ್’​​ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ರಿಯಲ್​ ಸ್ಟಾರ್​ ಉಪ್ಪಿ!

  ರಾಯಲ್​ ಏನ್​ಫೀಲ್ಡ್​ ಮೆಟೊರ್​ 350 ಬೈಕಿನ ಬೆಲೆ ಬಹಿರಂಗ!
  First published: