Yash: ರಾಕಿಭಾಯ್​ ಯಶ್​ ಬಗ್ಗೆ ಸನ್ನಿ ಲಿಯೋನ್​ ಹಿಂಗ್ಯಾಕಂದ್ರು? ವಿಡಿಯೋ ಫುಲ್ ವೈರಲ್

Sunny Leone: ನಿರೂಪಕಿ ಅನುಶ್ರೀ, ಸನ್ನಿ ಲಿಯೋನ್​ಗೆ ಯಶ್​ ಫೋಟೋ ತೋರಿಸಿ ಇವರು ಯಾರು, ಇವರ ಬಗ್ಗೆ ಹೇಳಿ ಎಂದೆಲ್ಲಾ ಕೇಳುತ್ತಾರೆ. ಯಶ್​ ಫೋಟೋ ನೋಡಿ ಫುಲ್ ಎಕ್ಸೈಟ್​ ಆಗಿರುವ ನಟಿ, ಇವರು ಯಶ್​ ಎಂದಿದ್ದಾರೆ.

ಯಶ್​ ಹಾಗೂ ಸನ್ನಿ ಲಿಯೋನಿ

ಯಶ್​ ಹಾಗೂ ಸನ್ನಿ ಲಿಯೋನಿ

  • Share this:
ಕೆಜಿಎಫ್ ಸಿನಿಮಾದ ನಂತರ ರಾಕಿಂಗ್ ಸ್ಟಾರ್ ಯಶ್ ಎಲ್ಲೆಡೆ ಹೆಸರು ಗಳಿಸಿದ್ದಾರೆ. ಯಶ್​ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ. ಯಶ್​ ಎಂದರೆ ಸಾಕು ರಾಕಿಭಾಯ್​ ಎನ್ನುತ್ತಾರೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೆ ಯಶ್​ ಹೆಸರು ಕೇಳಿಬರುತ್ತಿದೆ. ರಾಕಿಂಗ್ ಸ್ಟಾರ್ (Rocking Star Yash) ಯಶ್ ಎಂದರೆ ಅಭಿಮಾನಿಗಳಿಗೆ ಬಹಳ ಕ್ರೇಜ್​. ಅದರಲ್ಲೂ ಕೆಜಿಎಫ್​ 2 (KGF 2) ಸಿನಿಮಾ ಬಿಡುಗಡೆಯಾದ ನಂತರ ಯಶ್​ ಹವಾ ಹೆಚ್ಚಾಗಿದೆ. ಇದೀಗ ಬಾಲಿವುಡ್​ ತಾರೆ ಒಬ್ಬರು ಯಶ್​ ಬಗ್ಗೆ ಮಾಡಿರುವ ಕಾಮೆಂಟ್​ ಫುಲ್ ವೈರಲ್ ಆಗಿದೆ.  

ಯಶ್​ ಬಗ್ಗೆ ಸನ್ನಿ ಲಿಯೋನ್ ಕಾಮೆಂಟ್​

ಹೌದು, ಇತ್ತೀಚೆಗೆ ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಯಶ್​ ಬಗ್ಗೆ ಕಾಮೆಂಟ್​ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಚಾಂಪಿಯನ್ ಸಿನಿಮಾದ ಸಂದರ್ಶನದಲ್ಲಿ ಸನ್ನಿ ಯಶ್​ ಬಗ್ಗೆ ಮಾತನಾಡಿದ್ದು, ಅವರನ್ನು ಹೊಗಳಿದ್ದಾರೆ. ಸಜನ್ನಿ ಲಿಯೋನ್​ ಕನ್ನಡದ ಚಾಂಪಿಯನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಚಿತ್ರತಂಡದ ಜೊತೆ ನಿರೂಪಕಿ ಅನುಶ್ರೀ ನಡೆಸಿರುವ ಸಂವಾದದಲ್ಲಿ ಯಶ್​ ಬಗ್ಗೆ ಸನ್ನಿ ಲಿಯೋನ್ ಕಾಮೆಂಟ್​ ಮಾಡಿದ್ದಾರೆ.

ನಿರೂಪಕಿ ಅನುಶ್ರೀ, ಸನ್ನಿ ಲಿಯೋನ್​ಗೆ ಯಶ್​ ಫೋಟೋ ತೋರಿಸಿ ಇವರು ಯಾರು, ಇವರ ಬಗ್ಗೆ ಹೇಳಿ ಎಂದೆಲ್ಲಾ ಕೇಳುತ್ತಾರೆ. ಯಶ್​ ಫೋಟೋ ನೋಡಿ ಫುಲ್ ಎಕ್ಸೈಟ್​ ಆಗಿರುವ ನಟಿ, ಇವರು ಯಶ್​ ಎಂದಿದ್ದಾರೆ. ಅದಕ್ಕೆ ಅನುಶ್ರೀ ಇವರನ್ನು ಏನಂಥ ಕರೆಯುತ್ತಾರೆ ಎಂದು ಕೇಳಿದ್ದು, ರಾಕಿಭಾಯ್​ ಎಂದು ಹೇಳಿದ್ದಾರೆ. ಅಲ್ಲದೇ, ಹಿ ಈಸ್​ ನಾಟ್​ ಮೈ ಬಾಯ್​ , ಅವರು ನನ್ನ ಹುಡುಗ ಅಲ್ಲ ಎಂದಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದ್ದು, ಸನ್ನಿ ಹಿಂಗ್ಯಾಕ್ ಅಂದ್ರು ಅಂತ ಯೋಚನೆ ಮಾಡ್ತಿದ್ದಾರೆ. ಆದರೆ ನಂತರ ಸಂದರ್ಶನದಲ್ಲಿ ಅವರು, ಯಶ್​ ಬಗ್ಗೆ ಅವರಿಗಿರುವ ಪ್ರೀತಿ ಹಾಗೂ ಅಭಿಮಾನವನ್ನು ಸಹ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ಅಭಿಮಾನದ ಅಂಬಾರಿ ಹೊತ್ತ ಯೋಗಿಗೆ ಹುಟ್ಟುಹಬ್ಬದ ಸಂಭ್ರಮ, ಲೂಸ್‌ ಮಾದನ ದುನಿಯಾ ಕಥೆ ಇಲ್ಲಿದೆ
ಇನ್ನು ಸನ್ನಿ ಲಿಯೋನ್ ಕನ್ನಡದ ಚಾಂಪಿಯನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರಂತೆ. ಹಾಗಾಗಿ ಪ್ರಚಾರ ಕಾರ್ಯಕ್ಕೆ ಸಹ ಸನ್ನಿ ಸಾಥ್ ನೀಡಿದ್ದು, ಇತ್ತೀಚೆಗೆ ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಮಾಡಿದ್ದಾರೆ.  ಹಾಗೆಯೇ, ಕೆಜಿಎಫ್ 2 ನಂತರ ಯಶ್ ಜಾಗತಿಕ ತಾರೆಯಾಗಿದ್ದಾರೆ. ಅವರಿಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ದಿನದಿಂದ ದಿನಕ್ಕೆ ಅವರ ಹೆಸರು ಬೆಳೆಯುತ್ತಲೇ ಇದೆ. ಇನ್ನು ಕೆಜಿಎಫ್ 2 ಸಕ್ಸಸ್ ನಂತರ ಯಶ್ ಮಕ್ಕಳು ಹಾಗೂ ಕುಟುಂಬ ಅಂತ ಬ್ಯುಸಿ ಇದ್ದಾರೆ.

ಯಶ್ ಮುಂದಿನ ಸಿನಿಮಾ ಯಾವುದು?

ಇನ್ನು ಕೆಜಿಎಫ್ 2 ನಂತರ ಯಶ್​ ಯಾವ ಸಿನಿಮಾ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯದ ಸುದ್ದಿ ಪ್ರಕಾರ ಯಶ್​ ಅವರ 19 ನೇ ಸಿನಿಮಾದ ತಯಾರಿ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಯಶ್ ಮುಂದಿನ ಸಿನಿಮಾಗೆ ತಯಾರಿ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಸರಿ ಸುಮಾರು 1500 ಕೋಟಿ ಗಳಿಗೆ ಮಾಡಿದೆ. ಇದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಕನ್ನಡ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಹಾಗಾಗಿ ಈ ಸಿನಿಮಾಗಳ ನಂತರ ಯಶ್​ ಇಡುವ ಪ್ರತಿ ಹೆಜ್ಜೆಯೂ ಬಹಳ ನಾಜೂಕಿರಬೇಕು. ಆಯ್ಕೆ ಮಾಡುವ ಸಿನಿಮಾ, ಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಯಶ್​ ಸಿನಿಮಾ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಎಂದ ನಿಖಿತಾಗೆ ಹುಟ್ಟುಹಬ್ಬದ ಸಂಭ್ರಮ, ವಂಶಿ ಬೆಡಗಿ ಮತ್ತೆ ಸಿನಿಮಾ ಮಾಡ್ತಾರಾ?

ಅಲ್ಲದೇ, ಯಶ್​ ಸುಮ್ಮನೆ ಯಾವುದೋ ಕಥೆಗಳನ್ನು ಒಪ್ಪಿಕೊಂಡಿಲ್ಲ, ಹಾಗಾಗಿ ತುಂಬಾ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಅವರ ಸಿನಿಮಾದ ಬಗ್ಗೆ ಯಾವುದೇ ಅಪ್​ಡೇಟ್​ ಇಲ್ಲ. ಆದರೆ ಮಾಹಿತಿಯ ಪ್ರಕಾರ ಯಶ್​ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ಆರಂಭಿಸಿದ್ದಾರಂತೆ.  ರಾಕಿಂಗ್ ಸ್ಟಾರ್ ತಮ್ಮ 19ನೇ ಸಿನಿಮಾಗಾಗಿ ಕಸರತ್ತು ಮಾಡುತ್ತಿದ್ದಾರಂತೆ. ಈ ಬಗ್ಗೆ ಯಶ್ ಅವರ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದು, ನಟ ತೂಕ ಇಳಿಸಲು ಸಾಕಷ್ಟು ವರ್ಕ್​ಔಟ್​ ಮಾಡುತ್ತಿದ್ದಾರಂತೆ.
Published by:Sandhya M
First published: