Sunny Leone ಹೆಸರಲ್ಲಿ ಲೋನ್​ ಪಡೆದ ಖತರ್ನಾಕ್​ ಕಿಲಾಡಿ, ಮನಸ್ಸಾದ್ರೂ ಹೆಂಗ್​ ಬಂತೋ ಅಂತ ಪಡ್ಡೆ ಹೈಕ್ಳು ಗರಂ!

ಸನ್ನಿ ಲಿಯೋನ್​ಗೂ ಮೋಸ(Fraud) ಆಗಿದೆ. ಅದು ಅವರ ಹೆಸರು ಬಳಸಿ ವಂಚಕನೊಬ್ಬ ಮೋಸ ಮಾಡಿದ್ದಾನೆ. ಅದೇನು ಅಂತೀರಾ? ಮುಂದೆ ನೋಡಿ..

ಸನ್ನಿ ಲಿಯೋನ್​

ಸನ್ನಿ ಲಿಯೋನ್​

  • Share this:
ಸನ್ನಿ ಲಿಯೋನ್(Sunny Leone)..​ ಈ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕ್ಳು ಕಿವಿ ಅಲರ್ಟ್ ಆಗುತ್ತೆ. ಹೌದು, ಪಡ್ಡೆ ಹೈಕ್ಳ ಪಾಲಿನ ದೇವತೆ(Angel) ಸನ್ನಿ ಲಿಯೋನ್​. ಹೊಟ್ಟೆ ಪಾಡಿಗೆ ಈ ಹಿಂದೆ ನೀಲಿ ಚಿತ್ರ(Blue Film)ದಲ್ಲಿ ನಟಿಸುತ್ತಿದ್ದರು. ಅದನ್ನೆಲ್ಲ ಬಿಟ್ಟು ಭಾರತ(India)ಕ್ಕೆ ಬಂದು ಇಲ್ಲೆ ನೆಲೆಸಿದ್ದಾರೆ. ಬಾಲಿವುಡ್(Bollywood)​ ಚಿತರರಂಗದಲ್ಲಿ ಸನ್ನಿ ಲಿಯೋನ್​ಗೆ ಸಖತ್​ ಡಿಮ್ಯಾಂಡ್(Demand)​ ಇದೆ. ನೀಲಿ ಸಿನಿಮಾಗಳಲ್ಲಿ ಆ್ಯಕ್ಟೀವ್​ ಆಗಿದ್ದ ಅವರು, ನಂತರ ಅದನ್ನು ತೊರೆದು ಬಾಲಿವುಡ್​ಗೆ ಕಾಲಿಟ್ಟರು. ದಕ್ಷಿಣ ಭಾರತ(South India)ದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ತಮ್ಮ ಪಾಸ್ಟ್​ ಹೇಗಿದ್ದರೆ ಏನು, ನಮ್ಮ ಭವಿಷ್ಯ(Future) ಚೆನ್ನಾಗಿರಬೇಕೆಂದು ನಂಬುವವರು ಈ ಸನ್ನಿ ಲಿಯೋನ್​. ಈಗಲೂ ತಮ್ಮ ಸಿನಿಮಾಗಳ ಮೂಲಕ ಜನರನ್ನು ರಂಜಿಸುವ ಕೆಲಸವನ್ನು ಸನ್ನಿ ಲಿಯೋನ್​ಮಾಡುತ್ತಿದ್ದಾರೆ. ಈಕೆ ಕೇವಲ ನೀಲಿ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಮಾತ್ರ ಫೇಮಸ್(Famous)​ ಆಗಲಿಲ್ಲ. ಆ ವೃತ್ತಿಯನ್ನು ಬೇರೆ ವೃತ್ತಿಯಲ್ಲಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು ಈ ಸನ್ನಿ ಲಿಯೋನ್​. ಅಂಥವರಿಗೆ ಜನ ಮೋಸ ಮಾಡುತ್ತಾರೆ ಏನು ಹೇಳಬೇಕು ಒಂದು ಗೊತ್ತಾಗುತ್ತಿಲ್ಲ. ಹೌದು, ಸನ್ನಿ ಲಿಯೋನ್​ಗೂ ಮೋಸ(Fraud) ಆಗಿದೆ. ಅದು ಅವರ ಹೆಸರು ಬಳಸಿ ವಂಚಕನೊಬ್ಬ ಮೋಸ ಮಾಡಿದ್ದಾನೆ. ಅದೇನು ಅಂತೀರಾ? ಮುಂದೆ ನೋಡಿ..

ಸನ್ನಿ ಹೆಸರು ಬಳಸಿ ಲೋನ್​ ಪಡೆದ ಖತರ್ನಾಕ್​ ಕಿಲಾಡಿ!

ಹೌದು, ಸನ್ನಿ ಲಿಯೋನ್​ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್​ ಪಡೆಯಲಾಗಿದೆ. ಈ ವಿಚಾರವನ್ನು ಕೇಳಿ ಸನ್ನಿ ಲಿಯೋನ್​​ ನಿಜಕ್ಕೂ ಶಾಕ್​ ಆಗಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿ ಬೇಸರ ತೋಡಿಕೊಂಡಿದ್ದಾರೆ. ಸನ್ನಿ ಈ ರೀತಿ ಟ್ವೀಟ್​ ಮಾಡಿದ ಬೆನ್ನಲ್ಲೇ ಅನೇಕರು ಇದೇ ಮಾದರಿಯ ಟ್ವೀಟ್​ ಮಾಡಿದ್ದು, ತಮಗೂ ಮೋಸ ಆಗಿದೆ ಎಂದಿದ್ದಾರೆ. ಇದೊಂದು ದೊಡ್ಡ ಸ್ಕ್ಯಾಮ್​ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನೂ ಸನ್ನಿ ಲಿಯೋನ್​ ಹೆಸರಲ್ಲಿ ಮೋಸ ಮಾಡಿರುವವನ ವಿರುದ್ಧ ಪಡ್ಡೆ ಹೈಕ್ಳು ಕ್ಲಾಸ್​ ತೆಗೆದುಕೊಂಡಿದ್ದಾರೆ. ‘ನಿನಗೆ ಮನಸ್ಸಾದ್ರೂ ಹೇಗೆ ಬಂತು, ನಮ್ಮಲ್ಲರ ಪಾಲಿನ ಏಜೆಂಲ್​ ಅವರು, ಅವರಿಗೆ ಮೋಸ ಮಾಡಲು ನಾಚಿಕೆ ಆಗಲ್ವಾ’ ಎಂದು ಕಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಬಿಗ್​ಬಿ-ಡಿಪ್ಪಿ-ಪ್ರಭಾಸ್​, ಯಪ್ಪೋ.. ಬಜೆಟ್ ಎಷ್ಟು ಅಂತ ಕೇಳಿದ್ರೆ ದಂಗಾಗ್ತೀರಾ!

ಸನ್ನಿ ನಕಲಿ  ಪಾನ್​ ಕಾರ್ಡ್​ ಬಳಸಿ ಲೋನ್​!

ಸನ್ನಿ ಲಿಯೋನ್​ ಅವರ ನಕಲಿ ಪಾನ್​ ಕಾರ್ಡ್​ ಬಳಕೆ ಮಾಡಿಕೊಂಡು ಖತರ್ನಾಕ್​ ಕಿಲಾಡಿ ಈ ಲೋನ್ ಪಡೆದಿದ್ದಾನೆ. ಧಾನಿ ಸ್ಟಾಕ್​ ಲಿಮಿಟೆಡ್​ ಪ್ಲಾಟ್​ಫಾರ್ಮ್​​ನಲ್ಲಿ ಈ ಮೊಸ ನಡೆದಿದೆ.  ‘ಯಾವುದೋ ಮೂರ್ಖ ನನ್ನ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್​ ಪಡೆದಿದ್ದಾನೆ. ಸಿಬಿಲ್​ ಸ್ಕೋರ್​ಗೆ ತೊಂದರೆ ಆಗಿದೆ. ಇಂಡಿಯಾಬುಲ್​ ಸೆಕ್ಯೂರಿಟಿ ಲಿಮಿಟೆಡ್​​ನಲ್ಲಿ (ಧಾನಿ ಸ್ಟಾಕ್​ ಈ ಮೊದಲು ಇಂಡಿಯನ್​ ಬುಲ್​ ಸೆಕ್ಯೂರಿಟಿ ಆಗಿತ್ತು)ಈ ಫ್ರಾಡ್​ ನಡೆದಿದೆ’ ಎಂದಿದ್ದಾರೆ ಟ್ವೀಟ್ ಮಾಡಿ ಗರಂ ಆಗಿದ್ದಾರೆ ಸನ್ನಿ ಲಿಯೋನ್​

ಇದನ್ನೂ ಓದಿ: ಜೊತೆಯಾಗಿರೋಕೆ ಮನೆ ಕೂಡ ರೆಡಿಯಾಯ್ತು.. ಮದ್ವೆ ಊಟ ಯಾವಾಗ ಹಾಕಿಸ್ತೀರಾ ಎಂದ ನೆಟ್ಟಿಗರು!

ಸಿನಿಮಾರಂಗದಲ್ಲಿ ಸನ್ನಿ ಫುಲ್​ ಬ್ಯುಸಿ!

ಸನ್ನಿ ಲಿಯೋನ್​ ಕೈಯಲ್ಲಿ ಹಲವಾರು ಸಿನಿಮಾಗಳಿವೆ. 2019ರಿಂದ ಸನ್ನಿ ಲಿಯೋನ್​ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಐಟಂ ಹಾಡಿನಲ್ಲಿ ಅವರು ಹೆಜ್ಜೆ ಹಾಕುತ್ತಿದ್ದಾರೆ.
Published by:Vasudeva M
First published: