ಅಮ್ಮನಾಗಿ ಒಂದು ವರ್ಷ: ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡ ಸನ್ನಿ ಲಿಯೋನ್

news18
Updated:July 16, 2018, 8:15 PM IST
ಅಮ್ಮನಾಗಿ ಒಂದು ವರ್ಷ: ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡ ಸನ್ನಿ ಲಿಯೋನ್
news18
Updated: July 16, 2018, 8:15 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ನಲ್ಲಿ ಮೋಹಕ ತಾರೆಯಾಗಿ ಅಡಿಯಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ನಟಿ ಸನ್ನಿ ಲಿಯೋನ್ ಬಾಲಕಿಯೊಬ್ಬಳನ್ನು ದತ್ತು ಪಡೆದಿರುವುದು ಗೊತ್ತಿರುವ ವಿಷಯ. 2017 ರಲ್ಲಿ ಮಹಾರಾಷ್ಟ್ರ ಲಾತೂರ್ ಗ್ರಾಮದಿಂದ ನಿಶಾ ಎಂಬ ಬಾಲೆಯನ್ನು ಸನ್ನಿ ಲಿಯೋನ್ ದತ್ತು ಪಡೆದಿದ್ದರು. ಈ ವಿಷಯ ಈಗ ಯಾಕೆ ಅಂತೀರಾ..? ವಿಷಯ ಏನಪ್ಪಾ ಅಂದರೆ ಸನ್ನಿ ಲಿಯೋನ್​ ಅಮ್ಮನಾಗಿ ಇಂದಿಗೆ ಒಂದು ವರ್ಷ.

ಸನ್ನಿ -ಡೇನಿಯಲ್ ದಂಪತಿ ಬಡ ಮಗುವೊಂದನ್ನು ದತ್ತು ಪಡೆದು ಜುಲೈ 16ಕ್ಕೆ ಒಂದು ವರ್ಷವಾಗಿದೆ. ಈ ಕುರಿತು ಮಗಳೊಂದಿಗಿರುವ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.
A post shared by Sunny Leone (@sunnyleone) on


Loading...ಒಂದು ವರ್ಷದ ಹಿಂದೆ ನಿನ್ನನ್ನು ನಾವು ಮನೆಗೆ ಕರೆತಂದೆವು. ಇಂದು ನೀನು ನಮ್ಮೊಂದಿಗೆ ಒಂದು ವರ್ಷ ಪೂರೈಸಿರುವೆ. ನೀನು ನಮ್ಮೊಂದಿಗೆ ಒಂದು ವರ್ಷವನ್ನಷ್ಟೇ ಕಳೆದಿದ್ದೇವೆ ಎಂದರೆ ನನಗೆ ನಂಬಲಾಗುತ್ತಿಲ್ಲ. ನಮ್ಮ ಜೀವನದ ಒಂದು ಭಾಗವಾಗಿರುವ ನೀನು ಪ್ರಪಂಚದ ಅತ್ಯಂತ ಸುಂದರ ಮಗು. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ 'ನಿಶಾ ಕೌರ್ ವೈಬರ್' ಎಂದು ಸನ್ನಿ ಲಿಯೋನ್ ಇನ್​ಸ್ಟಾಗ್ರಾಂನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

ಪೋರ್ನ್​ ಮತ್ತು ಹಿಂದಿ ಚಿತ್ರಗಳಿಂದ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸನ್ನಿ ಲಿಯೋನ್ ಸದ್ಯ 'ವೀರಮಾದೇವಿ' ಎಂಬ ಐತಿಹಾಸಿಕ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...