Sunny Leone: ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಸನ್ನಿ.. ಬೆಲೆ ಕೇಳಿದ್ರೆ ದಂಗಾಗಿ ಹೋಗ್ತಿರಾ!

ಮುಂಬೈನಲ್ಲಿ ಸನ್ನಿ ಲಿಯೋನ್ 3 ಬೆಡ್ ರೂಮ್​ನ ಸುಮಾರು 16 ಕೋಟಿ ರೂಪಾಯಿ ಪೆಂಟ್ ಹೌಸ್ ಖರೀದಿಸಿದ್ದಾರೆ. ಸನ್ನಿ ಲಿಯೋನ್ ಸದ್ಯ ದಕ್ಷಿಣದ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ಮುಂಬೈನಲ್ಲಿ ಸನ್ನಿ ಲಿಯೋನ್ 3 ಬೆಡ್ ರೂಮ್​ನ ಸುಮಾರು 16 ಕೋಟಿ ರೂಪಾಯಿ ಪೆಂಟ್ ಹೌಸ್ ಖರೀದಿಸಿದ್ದಾರೆ. ಸನ್ನಿ ಲಿಯೋನ್ ಸದ್ಯ ದಕ್ಷಿಣದ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ಮುಂಬೈನಲ್ಲಿ ಸನ್ನಿ ಲಿಯೋನ್ 3 ಬೆಡ್ ರೂಮ್​ನ ಸುಮಾರು 16 ಕೋಟಿ ರೂಪಾಯಿ ಪೆಂಟ್ ಹೌಸ್ ಖರೀದಿಸಿದ್ದಾರೆ. ಸನ್ನಿ ಲಿಯೋನ್ ಸದ್ಯ ದಕ್ಷಿಣದ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

  • Share this:
ನಟಿ ಸನ್ನಿ ಲಿಯೋನ್(Sunny Leone) ಅತಿ ಕಡಿಮೆ ಸಮಯದಲ್ಲಿ ಬಾಲಿವುಡ್(Bollywood)​​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ನಟಿಯ ಬಹುತೇಕ ಎಲ್ಲಾ ಹಾಡುಗಳು ಹಿಟ್ ಆಗಿವೆ. ಅನೇಕ ಬಾಲಿವುಡ್ ಸೂಪರ್‌ಸ್ಟಾರ್‌(Super Star)ಗಳು ಬಾಡಿಗೆ ಮನೆ(Rent House)ಗಳಲ್ಲಿ ವಾಸಿಸುತ್ತಿರುವ ಸಮಯದಲ್ಲಿ, ನಟಿ ಸನ್ನಿ ಲಿಯೋನ್ ತನ್ನದೇ ಆದ ಸ್ವಂತ ಮನೆಯನ್ನು ಖರೀದಿಸಿದ್ದಾರೆ. ಅದು ಕೂಡ ಮುಂಬೈ(Mumbai)ನಲ್ಲಿ. ಹೌದು, ಸನ್ನಿ ಲಿಯೋನ್ ಕಳೆದ ವರ್ಷ ತನ್ನ ಪತಿ ಡೇನಿಯಲ್(Daniel) ವೆಬರ್ ಅವರೊಂದಿಗೆ ಮನೆ ಖರೀದಿಸಿದ್ದರು. ಮಕ್ಕಳಿಗೆ ಸರಿಯಾದ ನೆಲೆ ಸಿಗಲಿ ಎಂದು ಮನೆ ಖರೀದಿಸಿದ್ದೇನೆ ಎನ್ನುತ್ತಾರೆ ಸನ್ನಿ(Sunny). ಕಳೆದೊಂದು ದಶಕದಿಂದ ಬಾಲಿವುಡ್‌ನಲ್ಲಿರುವ ಸನ್ನಿ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು, ಈಗ ಅವರು ತಮ್ಮ ಸ್ವಂತ ಕನಸಿನ ಮನೆಯನ್ನು ಖರೀದಿಸಿದ್ದಾರೆ.

3 ಬೆಡ್​ ರೂಂ ಪೆಂಟ್​ ಹೌಸ್​ ಖರೀದಿಸಿದ ಸನ್ನಿ!

ಮುಂಬೈನಲ್ಲಿ ಸನ್ನಿ ಲಿಯೋನ್ 3 ಬೆಡ್ ರೂಮ್​ನ ಸುಮಾರು 16 ಕೋಟಿ ರೂಪಾಯಿ ಪೆಂಟ್ ಹೌಸ್ ಖರೀದಿಸಿದ್ದಾರೆ. ಸನ್ನಿ ಲಿಯೋನ್ ಸದ್ಯ ದಕ್ಷಿಣದ ಕೆಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿ ಮನೆ ಖರೀದಿಸುವ ನಮ್ಮ ನಿರ್ಧಾರ ಭಾವನಾತ್ಮಕವಾಗಿತ್ತು ಎಂದು ಸನ್ನಿ ಲಿಯೋನ್​ ಹೇಳಿದರು. ಭಾರತವು ನಮ್ಮ ಪ್ರಾಥಮಿಕ ನೆಲೆಯಾಗಿದೆ ಎಂದು ಅವರು ಹೇಳಿದರು.

ಅಮೆರಿಕನ್​ ಶೈಲಿಯಲ್ಲಿರುವ ಸನ್ನಿ ಮನೆ!

ನಮಗೆ ಮೂವರು ಮಕ್ಕಳಿದ್ದಾರೆ ಮತ್ತು ಒಂದು ಅಪಾರ್ಟ್ಮೆಂಟ್​​ನಿಂದ ಇನ್ನೊಂದಕ್ಕೆ ಬದಲಾಯಿಸುವ ಮೂಲಕ ನಾವು ಅವರಿಗೆ ಸರಿಯಾದ ಸ್ಥಿರತೆಯನ್ನು ನೀಡುತ್ತಿಲ್ಲ ಎಂದು ನಾವು ಭಾವಿಸಿದ್ದೇವೆ. ನಮ್ಮ ಮಕ್ಕಳಿಗೆ ಅವರು ಇಷ್ಟಪಡುವ ಜಾಗವನ್ನು ನೀಡಲು ನಾವು ಬಯಸುತ್ತೇವೆ ಎಂದು ಸನ್ನಿ ಲಿಯೋನ್​ ದಂಪತಿ ಹೇಳಿದ್ದಾರೆ.

ಇದನ್ನೂ ಓದಿ: Madhuri Dixit ಥರಾ ಸುಂದರ ಕೂದಲು ನಿಮ್ಮದಾಗ್ಬೇಕಾ? ಅವ್ರು ಹೇಳಿರೋ ಟಿಪ್ಸ್ ಫಾಲೊ ಮಾಡಿ

‘ನಾವು ಶಾಶ್ವತವಾಗಿ ಏನನ್ನಾದರೂ ಮಾಡುವ ಸಮಯ ಈಗ ಬಂದಿದೆ. ನನ್ನ ಮಕ್ಕಳು ಕೂಡ ಈ ಸಮಯ ಮತ್ತು ಈ ಹೊಸ ಮನೆಯನ್ನು ನಿಜವಾಗಿಯೂ ಆನಂದಿಸುತ್ತಿದ್ದಾರೆ. ಏಕೆಂದರೆ ತೋಟದಲ್ಲಿ ಬೈಕ್ ಓಡಿಸಲು, ಆಟವಾಡಲು ಸಾಕಷ್ಟು ಜಾಗ ಸಿಗುತ್ತಿದೆ. ಈಜುಕೊಳ ಸೇರಿದಂತೆ ಹಲವು ಸೌಲಭ್ಯಗಳ ಕಾಮಗಾರಿ ನಡೆಯುತ್ತಿದೆ.. ನನ್ನ ಮಕ್ಕಳ ಬಗ್ಗೆ ನಾನು ಚಿಂತಿಸಬೇಕಾಗಿಲ್ಲ ಎಂದು ಸನ್ನಿ ಲಿಯೋನ್​ ಹೇಳಿದರು.

ಬಾಲಿವುಡ್​​ನಲ್ಲಿ 10 ವರ್ಷಗಳ ಪಯಣ!

ಸನ್ನಿ ಲಿಯೋನ್ ಕಳೆದ ಹತ್ತು ವರ್ಷಗಳಿಂದ ಭಾರತ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸನ್ನಿ ಲಿಯೋನ್(Sunny Leone)..​ ಈ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕ್ಳು ಕಿವಿ ಅಲರ್ಟ್ ಆಗುತ್ತೆ. ಹೌದು, ಪಡ್ಡೆ ಹೈಕ್ಳ ಪಾಲಿನ ದೇವತೆ(Angel) ಸನ್ನಿ ಲಿಯೋನ್​. ಹೊಟ್ಟೆ ಪಾಡಿಗೆ ಈ ಹಿಂದೆ ನೀಲಿ ಚಿತ್ರ(Blue Film)ದಲ್ಲಿ ನಟಿಸುತ್ತಿದ್ದರು. ಅದನ್ನೆಲ್ಲ ಬಿಟ್ಟು ಭಾರತ(India)ಕ್ಕೆ ಬಂದು ಇಲ್ಲೆ ನೆಲೆಸಿದ್ದಾರೆ. ಬಾಲಿವುಡ್(Bollywood)​ ಚಿತರರಂಗದಲ್ಲಿ ಸನ್ನಿ ಲಿಯೋನ್​ಗೆ ಸಖತ್​ ಡಿಮ್ಯಾಂಡ್(Demand)​ ಇದೆ.

ಇದನ್ನೂ ಓದಿ: ಕೊನೆಗೂ Ranbir Kapoor- Alia Bhatt ಮದುವೆ ಡೇಟ್ ಫಿಕ್ಸ್, ಬ್ಯಾಚುಲರ್​ ಪಾರ್ಟಿಗೆ ರೆಡಿಯಾಗ್ತಿದ್ದಾರೆ ಕ್ಯೂಟ್​ ಕಪಲ್​!

ಸನ್ನಿ ಲಿಯೋನ್​ ಹೆಸರು ಹಚ್ಚೆ ಹಾಕಿಸಿಕೊಂಡ ಅಭಿಮಾನಿ!

ಸನ್ನಿ ಲಿಯೋನ್​ ಕೈಯಲ್ಲಿ ಹಲವಾರು ಸಿನಿಮಾಗಳಿವೆ. 2019ರಿಂದ ಸನ್ನಿ ಲಿಯೋನ್​ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಐಟಂ ಹಾಡಿನಲ್ಲಿ ಅವರು ಹೆಜ್ಜೆ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಸನ್ನಿ ಲಿಯೋನ್​ ಅಭಿಮಾನಿಯೊನ್ನ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಬಳಿಕ ಸನ್ನಿ ಲಿಯೋನ್​ ಅವರನ್ನು ಭೇಟಿ ಮಾಡಿ ಆ ಹಚ್ಚೆ ತೋರಿಸಿದ್ದಾರೆ. ಅಭಿಮಾನ ಕಂಡ ಸನ್ನಿ ಮಾತೇ ಬರದೇ ಮೂಕವಿಸ್ಮಿತರಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.
Published by:Vasudeva M
First published: