• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sunny Leone: ಇಂದು ಪಡ್ಡೆ ಹೈಕ್ಳ ದೇವತೆ ಸನ್ನಿ ಹುಟ್ಟುಹಬ್ಬ, ಮಂಡ್ಯದಲ್ಲಿ ಕೇಕ್​ ಕತ್ತರಿಸಿ ಹಬ್ಬ ಮಾಡಿದ ಫ್ಯಾನ್ಸ್​!

Sunny Leone: ಇಂದು ಪಡ್ಡೆ ಹೈಕ್ಳ ದೇವತೆ ಸನ್ನಿ ಹುಟ್ಟುಹಬ್ಬ, ಮಂಡ್ಯದಲ್ಲಿ ಕೇಕ್​ ಕತ್ತರಿಸಿ ಹಬ್ಬ ಮಾಡಿದ ಫ್ಯಾನ್ಸ್​!

ಸನ್ನಿ ಲಿಯೋನ್​

ಸನ್ನಿ ಲಿಯೋನ್​

ಇಂದು ಪಡ್ಡೆ ಹೈಕ್ಳ ಹಾಟ್​ ಫೇವರಿಟ್​ ಆಗಿರುವ ಸನ್ನಿ ಲಿಯೋನ್​ ಹುಟ್ಟುಹಬ್ಬ.41ನೇ ವಸಂತಕ್ಕೆ ಇಂದು ಸನ್ನಿ ಲಿಯೋನ್​ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಚಿತ್ರರಂಗದವರು ಸನ್ನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  • Share this:

ಸನ್ನಿ ಲಿಯೋನ್(Sunny Leone)..​ ಈ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕ್ಳು ಕಿವಿ ಅಲರ್ಟ್ ಆಗುತ್ತೆ. ಹೌದು, ಪಡ್ಡೆ ಹೈಕ್ಳ ಪಾಲಿನ ದೇವತೆ(Angel) ಸನ್ನಿ ಲಿಯೋನ್​. ಇಂದು ಪಡ್ಡೆ ಹೈಕ್ಳ ಹಾಟ್​ ಫೇವರಿಟ್​ ಆಗಿರುವ ಸನ್ನಿ ಲಿಯೋನ್​ ಹುಟ್ಟುಹಬ್ಬ.41ನೇ ವಸಂತಕ್ಕೆ ಇಂದು ಸನ್ನಿ ಲಿಯೋನ್​ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ಚಿತ್ರರಂಗದವರು ಸನ್ನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹೊಟ್ಟೆ ಪಾಡಿಗೆ ಈ ಹಿಂದೆ ನೀಲಿ ಚಿತ್ರ(Blue Film)ದಲ್ಲಿ ನಟಿಸುತ್ತಿದ್ದರು. ಅದನ್ನೆಲ್ಲ ಬಿಟ್ಟು ಭಾರತ(India)ಕ್ಕೆ ಬಂದು ಇಲ್ಲೆ ನೆಲೆಸಿದ್ದಾರೆ. ಬಾಲಿವುಡ್(Bollywood)​ ಚಿತರರಂಗದಲ್ಲಿ ಸನ್ನಿ ಲಿಯೋನ್​ಗೆ ಸಖತ್​ ಡಿಮ್ಯಾಂಡ್(Demand)​ ಇದೆ. ನೀಲಿ ಸಿನಿಮಾಗಳಲ್ಲಿ ಆ್ಯಕ್ಟೀವ್​ ಆಗಿದ್ದ ಅವರು, ನಂತರ ಅದನ್ನು ತೊರೆದು ಬಾಲಿವುಡ್​ಗೆ ಕಾಲಿಟ್ಟರು. ದಕ್ಷಿಣ ಭಾರತ(South India)ದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.


41ನೇ ವಸಂತಕ್ಕೆ ಕಾಲಿಟ್ಟ ಸನ್ನಿ ಲಿಯೋನ್!


ಮೇ 13, 1981 ರಂದು ಕೆನಡಾದಲ್ಲಿ ಜನಿಸಿದವರು ಸನ್ನಿ ಲಿಯೋನ್. ಪಂಜಾಬಿ ಕುಟುಂಬದಲ್ಲಿ ಜನಿಸಿದ ಸನ್ನಿ ಲಿಯೋನ್ ಅವರ ನಿಜನಾಮ ಕರಣ್‌ಜಿತ್ ಕೌರ್ ವೊಹ್ರಾ. 2011ರಲ್ಲಿ ‘ಬಿಗ್ ಬಾಸ್ 5’ ರಿಯಾಲಿಟಿ ಶೋನಲ್ಲಿ ಸನ್ನಿ ಲಿಯೋನ್ ಸ್ಪರ್ಧಿಸಿದ್ದರು. ಬಳಿಕ 2012ರಲ್ಲಿ ‘ಜಿಸ್ಮ್ 2’ ಚಿತ್ರದ ಮೂಲಕ ಬಾಲಿವುಡ್‌ಗೆ ಸನ್ನಿ ಲಿಯೋನ್ ಕಾಲಿಟ್ಟರು.ತಮ್ಮ ಪಾಸ್ಟ್​ ಹೇಗಿದ್ದರೆ ಏನು, ನಮ್ಮ ಭವಿಷ್ಯ(Future) ಚೆನ್ನಾಗಿರಬೇಕೆಂದು ನಂಬುವವರು ಈ ಸನ್ನಿ ಲಿಯೋನ್​. ಈಗಲೂ ತಮ್ಮ ಸಿನಿಮಾಗಳ ಮೂಲಕ ಜನರನ್ನು ರಂಜಿಸುವ ಕೆಲಸವನ್ನು ಸನ್ನಿ ಲಿಯೋನ್​ಮಾಡುತ್ತಿದ್ದಾರೆ.


ಮಂಡ್ಯದಲ್ಲಿ ಬಿರಿಯಾನಿ ಹಂಚಿದ ಫ್ಯಾನ್ಸ್​!


ಈಕೆ ಕೇವಲ ನೀಲಿ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಮಾತ್ರ ಫೇಮಸ್(Famous)​ ಆಗಲಿಲ್ಲ. ಆ ವೃತ್ತಿಯನ್ನು ಬೇರೆ ವೃತ್ತಿಯಲ್ಲಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು. ಮಂಡ್ಯದ ಹಳ್ಳಿಗಳಲ್ಲು ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸನ್ನಿ ಲಿಯೋನ್​ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳ ಸಂಘದಿಂದ ವಿಶೇಷ ಕಾರ್ಯಕ್ರಮ ಕೂಡ ಅಯೋಜಿಸಲಾಗಿದೆ. ಗ್ರಾಮದ ಹೆಬ್ಬಾಗಿಲಲ್ಲಿ 20ಅಡಿಗೂ ಉದ್ದದ ಸನ್ನಿ ಫ್ಲೆಕ್ಸ್ ಅಳವಡಿಸಿದ್ದಾರೆ. ಬಡಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಜೈಕಾರ ಹಾಕಿದ್ದಾರೆ.


ಇದನ್ನೂ ಓದಿ: ಕನ್ನಡದಲ್ಲೇ 'ಅಖಂಡ'ನ ಆರ್ಭಟ ನೋಡಿ! ಈ ದಿನದಂದು ಸ್ಟಾರ್​​ ಸುವರ್ಣದಲ್ಲಿ ಬರ್ತಿದ್ದಾರೆ ಬಾಲಯ್ಯ


ಬಿರಿಯಾನಿ ಹಂಚಿದ ಸನ್ನಿ ಅಭಿಮಾನಿ ಪ್ರಸಾದ್​!


ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್ ನೇತೃತ್ವದಲ್ಲಿ ಮಂಡ್ಯದಲ್ಲಿ ಸನ್ನಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಸನ್ನಿ ಹುಟ್ಟುಹಬ್ಬ ಹಿನ್ನಲೆ ಬಿರಿಯಾನಿ ವಿತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸನ್ನಿ ಲಿಯೋನ್ ಫ್ಯಾನ್ಸ್ ಗೆ 10% ಡಿಸ್ಕೌಂಟ್ ನಲ್ಲಿ ಚಿಕನ್ ನೀಡ್ತಿದ್ದ ಅಭಿಮಾನಿ ಪ್ರಸಾದ್​. ಮಂಡ್ಯದ ಡಿಕೆ ಚಿಕನ್ ಸೆಂಟರ್ ನಿಂದ ಸ್ಪೆಷಲ್ ಆಫರ್ ನೀಡಿ ಸುದ್ದಿಯಾಗಿದ್ದ ಅಭಿಮಾನಿ. ಇಂದು ಬಿರಿಯಾನಿ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ ಪ್ರಸಾದ್.


ಇದನ್ನೂ ಓದಿ: ಮನೆಯಲ್ಲೇ ಕೂತು ನೋಡಿ 'ಆರ್​ಆರ್​ಆರ್'​​! ತಾರಕ್ ಹುಟ್ಟುಹಬ್ಬದ ದಿನವೇ ಒಟಿಟಿಗೆ ಎಂಟ್ರಿ


'ಜ್ಯಾಕ್‌ಪಾಟ್’, ‘ರಾಗಿಣಿ ಎಂಎಂಎಸ್‌ 2’ ಸಿನಿಮಾಗಳಲ್ಲಿ ನಟಿಸಿರುವ ಸನ್ನಿ ಲಿಯೋನ್ ‘ಹೇಟ್ ಸ್ಟೋರಿ 2’, ‘ಬಲ್ವಿಂದರ್ ಸಿಂಗ್ ಫೇಮಸ್ ಹೋ ಗಯಾ’ ಸಿನಿಮಾಗಳ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದರು. ಕನ್ನಡದ ‘ಡಿಕೆ’, ‘ಲವ್ ಯೂ ಆಲಿಯಾ’ ಸಿನಿಮಾಗಳ ಸ್ಪೆಷಲ್ ಸಾಂಗ್‌ಗಳಲ್ಲೂ ಸನ್ನಿ ಕಾಣಿಸಿಕೊಂಡಿದ್ದರು. ಇನ್ನಷ್ಟು ಕನ್ನಡ ಸಿನಿಮಾಗಳಲ್ಲಿ ಸನ್ನಿ ನಟಿಸಲು ಎಂದು ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

Published by:Vasudeva M
First published: