ಸನ್ನಿ ಜೀವನಾಧಾರಿತ ವೆಬ್ ​ಸೀರೀಸ್​ ಟ್ರೇಲರ್​ ಬಿಡುಗಡೆ; ಜು.16ರಿಂದ ಶುರುವಾಗಲಿದೆ ಹಾಟ್​ ಬೆಡಗಿಯ ಕಥೆ

news18
Updated:July 7, 2018, 5:03 PM IST
ಸನ್ನಿ ಜೀವನಾಧಾರಿತ ವೆಬ್ ​ಸೀರೀಸ್​ ಟ್ರೇಲರ್​ ಬಿಡುಗಡೆ; ಜು.16ರಿಂದ ಶುರುವಾಗಲಿದೆ ಹಾಟ್​ ಬೆಡಗಿಯ ಕಥೆ
news18
Updated: July 7, 2018, 5:03 PM IST
ನ್ಯೂಸ್​ 18 ಕನ್ನಡ

ನೀಲಿ ಚಿತ್ರಗಳ ತಾರೆ ಹಾಗೂ ಬಾಲಿವುಡ್​ನ ಬಹುಬೇಡಿಕೆ ನಟಿಯಾಗಿರುವ ಸನ್ನಿ ಲಿಯೋನ್​ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಆಕೆ ಪಟ್ಟ ಬವಣೆ ಸ್ಟಾರ್ ನಟಿಯಾಗಿ ಹೊಮ್ಮಿದರ ಬಗ್ಗೆ ಈಗ ಆಕೆಯೇ ತನ್ನ ವೆಬ್​ ಸೀರಿಸ್​ ಮೂಲಕ ಹೇಳಲು ಹೊರಟಿದ್ದಾಳೆ.

ಕೆನಡಾದಲ್ಲಿ ನೆಲೆಯಾಗಿದ್ದ ಅಪ್ಪಟ ಭಾರತದ ಪಂಜಾಬಿ ಕುಟುಂಬದ ಹೆಣ್ಣುಮಗಳಾಗಿದ್ದ ಸನ್ನಿ ನೀಲಿ ಚಿತ್ರದ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಆಕಸ್ಮಿಕವೇ. ದುಡ್ಡಿನ ಅವಶ್ಯಕತೆಗಾಗಿ ಕಾಮಪ್ರಚೋದಕ ವಿಡಿಯೋ ಮಾಡಲು ಹೊರಟ ಆಕೆಯ ಜೀವನದ ಹೇಗೆಲ್ಲಾ ತಿರುವ ಪಡೆಯಿತು ಎಂಬ ಕುರಿತು ಎರಡು ನಿಮಿಷದ ಟ್ರೇಲರ್​ನಲ್ಲಿ ತೋರಿಸಲಾಗಿದೆ.ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಲಾಟರಿ ಟಿಕೆಟ್​ ಆಗುವ ಸನ್ನಿ ಕಾರ್ಯಕ್ಕೆ ಮನೆಯ ಬೆಂಬಲ ನೀಡಿದ್ದರು. ಮನೆಯಲ್ಲಿ ಗೊತ್ತಿಲ್ಲದಂತೆ ಈ ಕ್ಷೇತ್ರಕ್ಕೆ ಬಂದ ನಟಿ ಹೇಗೆ ಪೋಷಕರನ್ನು ಒಪ್ಪಿಸಿ ನೀಲಿ ಚಿತ್ರದ ತಾರೆಯಾಗಿ ಮಿಂಚಿದಳು. ನಂತರ ಬಾಲಿವುಡ್​ ಸೇರಿದಂತೆ ಭಾರತದ ಇತರೆ ಭಾಷೆ ಚಿತ್ರಗಳಲ್ಲಿ ಹೇಗೆ ಆಕೆ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಳು ಎಂಬ ಕುರಿತು ಚಿತ್ರದಲ್ಲಿ ತಿಳಿಸಲಾಗಿದೆ.

2016ರಲ್ಲಿ ವಿವಾದ ಹುಟ್ಟುಹಾಕಿದ ಆಕೆಯ ಸಂದರ್ಶನದಿಂದ ಪ್ರಾರಂಭವಾಗುವ ಚಿತ್ರ ಆಕೆಯ ಬಾಲ್ಯವನ್ನು ಹೇಳಲು ಶುರುಮಾಡುತ್ತಾಳೆ.2 ನಿಮಿಷದಲ್ಲಿ ಮಂತ್ರ ಮುಗ್ದವಾಗಿಸುವ ಸನ್ನಿ ಜೀವನ ಚರಿತ್ರೆಗೆ ನೋಡಲು ವಿಶ್ವದ ಸಿನಿರಸಿಕರು ಕಾತುರರಾಗಿದ್ದಾರೆ. ತನ್ನ ಮೂಲ ಹೆಸರಾದ ಕರಣ್​​ಜಿತ್​ ಕೌರ್​ ಎಂಬ ಹೆಸರಿನಲ್ಲಿಯೇ ಸನ್ನಿ ವೆ ನಿರ್ಮಿಸಿದ್ದು ಇದೆ ​ ಜು.16ರಿಂದ ಈ ವೆಬ್​ ಸಿರೀಸ್​ ಪ್ರಸಾರವಾಗಲಿದ್ದು, ಹಿಂದಿಯ ಖಾಸಗಿ ಚಾನಲ್​ ಅಲ್ಲಿ ಪ್ರಸಾರವಾಗಲಿದೆ.
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...