Sunny Leone: ಈ ಕೇಕ್ ತಿನ್ನೋದ್ರಿಂದಲೇ ಸನ್ನಿ ಹಾಗಿರೋದಂತೆ, ಬ್ಯೂಟಿ ಸೀಕ್ರೆಟ್ ಹೇಳಿದಾರೆ ನೋಡಿ!

’ಚಾಂಪಿಯನ್’ (Champion) ಸಿನಿಮಾದ ಆಡಿಯೋ ಲಾಂಚ್ ಗಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಿದ್ದು, ಸ್ಪೋರ್ಟ್ಸ್ ಕಥೆ ಆಧಾರಿತ ಚಾಂಪಿಯನ್ ಸಿನಿಮಾದಲ್ಲಿ ಸಚಿನ್ ಧನಪಾಲ್ ನಟಿಸಿದ್ದಾರೆ.

ಸನ್ನಿ ಲಿಯೋನ್

ಸನ್ನಿ ಲಿಯೋನ್

  • Share this:
ಬಾಲಿವುಡ್ ನಟಿ (Bollywood Actress) ಸನ್ನಿ ಲಿಯೋನ್ (Sunny Leone) ಸದ್ಯ ಅಭಿಮಾನಿಗಳ (Fans) ಹಾಟ್ ಫೇವರೆಟ್ (Favorite). ಒಂದು ಕಾಲದಲ್ಲಿ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನ್ ಬಾಲಿವುಡ್ ಎಂಟ್ರಿ ಬಳಿಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ಪ್ರಬುದ್ಧ ಪಾತ್ರಗಳಲ್ಲಿ ನಟಿಸುವ ಮೂಲಕ ಜನರ ಮನ ಗೆದ್ದರು. ಇಂತಹ ಬಾಲಿವುಡ್ ಹಾಟ್ ಬ್ಯೂಟಿ ಸನ್ನಿಲಿಯೋನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಹೌದು, ’ಚಾಂಪಿಯನ್’ (Champion) ಸಿನಿಮಾದ ಆಡಿಯೋ ಲಾಂಚ್ ಗಾಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಿದ್ದು, ಸ್ಪೋರ್ಟ್ಸ್ ಕಥೆ ಆಧಾರಿತ ಚಾಂಪಿಯನ್ ಸಿನಿಮಾದಲ್ಲಿ ಸಚಿನ್ ಧನಪಾಲ್ ನಟಿಸಿದ್ದಾರೆ. ಈ ಚಿತ್ರದಲ್ಲಿನ ವಿಶೇಷ ಹಾಡಿಗೆ ಸನ್ನಿಲಿಯೋನ್ ಹೆಜ್ಜೆ ಹಾಕುವ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ವಾಪಸಾಗಿದ್ದಾರೆ. ಡಿಂಗರ್ ಬಿಲ್ಲಿ ಅನ್ನೋ  ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದಾರೆ. ಇನ್ನು, ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ ಸನ್ನಿ, ತಮ್ಮ ಬ್ಯೂಟಿ ಸೀಕ್ರೇಟ್ಸ್ ಅನ್ನು ಬಿಚ್ಚಿಟ್ಟಿದ್ದಾರೆ.

ಬ್ಯೂಟಿ ಸೀಕ್ರೇಟ್ಸ್ ಬಿಚ್ಚಿಟ್ಟ ಸನ್ನಿ:

ಇನ್ನು, ಚಾಂಪಿಯನ್’ ಸಿನಿಮಾದ ಆಡಿಯೋ ಲಾಂಚ್ ಗಾಗಿ ಬೆಂ.ಗಳುರಿಗೆ ಆಗಮಿಸಿರುವ ಸನ್ನಿ ಲಿಯೋನ್, ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಹೌದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಆಟಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಸನ್ನಿ, ’ಕೇಕ್ ತಿಂತಿನಿ, ವೈರಟಿ ಬಗೆಯ ಪಾನೀಯ ಕುಡಿತೀನಿ ಎನ್ನುವ ಮೂಲಕ ತಮ್ಮ ಸೌಂದರ್ಯದ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಇದಲ್ಲದೇ ನನಗೆ  ಬೆಂಗಳೂರು ತುಂಬಾ ಇಷ್ಟ. ಅದಲ್ಲದೇ ಯಾರಾದರು ಸರಿ ಬೇಸಿಕ್ ಹ್ಯುಮ್ಯಾನಿಟಿ, ಸೋಷಿಯಲ್ ಕೆಲಸಗಳು ಫ್ಯಾಮಿಲಿಗೆ ಹೆಚ್ಚು ಮಹತ್ವ ಕೊಡಬೇಕು’ ಎಂದು ಹೇಳಿದ್ದಾರೆ.

ಡಿಂಗ್ರಿ ಬಿಲ್ಲಿ ಸಾಂಗ್ ನನ್ನ ಫೇವರೀಟ್ ಸಾಂಗ್:

ಕಾರ್ಯಕ್ರಮದಲ್ಲಿ ಮಾತನಾಡಿದ ಸನ್ನಿ ಲಿಯೋನ್, ಚಾಂಪಿಯನ್ ಚಿತ್ರದ ಡಿಂಗ್ರಿ ಬಿಲ್ಲಿ ಸಾಂಗ್ ನನ್ನ ಫೇವರೀಟ್ ಆಗಿದೆ. ಮನೆಯಲ್ಲಿ ನನ್ನ ಮಕ್ಕಳು ಕೂಡ ಡಿಂಗ್ರಿ ಬಿಲ್ಲಿ ಹಾಡು ಹಾಡ್ತಾರೆ ಐ ಲವ್ ದ ಸಾಂಗ್ ಎಂದು ಹೇಳಿದ್ದಾರೆ. ಸನ್ನಿ ಈ ಹಿಂದೆ ಡಿಕೆ ಚಿತ್ರ ಸೇಸಮ್ಮ,ಹಾಗೂ ಲವ್ ಯು ಆಲಿಯಾ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಾಂಪಿಯನ್ ಜೊತೆ ಡಿಂಗ್ರಿ ಬಿಲ್ಲಿಯಾಗಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: Sunny Leone: ಮಂಡ್ಯ ಹೈಕ್ಳಿಗೆ "ಶಾನೆ ಥ್ಯಾಂಕ್ಸ್" ಎಂದ 'ಸೇಸಮ್ಮ'! ಅಷ್ಟಕ್ಕೂ ಸನ್ನಿ ಲಿಯೋನ್ ಹಾಗೆಂದಿದ್ದೇಕೆ?

ಮಂಡ್ಯಕ್ಕೆ ಇನ್ನೊಮ್ಮೆ ಭೇಟಿ ನೀಡ್ತಿನಿ:

ಸನ್ನಿ ಲಿಯೋನ್ ಹುಟ್ಟುಹಬ್ಬದಂದು ಮಂಡ್ಯದ ಜನತೆ ಕೊಮ್ಮೇರಹಳ್ಳಿಯ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದರು. ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 40 ಯುವಕರು ರಕ್ತದಾನ ಮಾಡುವ ಮೂಲಕ ನೆಚ್ಚಿನ ನಟಿಗೆ ಶುಭಾಶಯ ಹೇಳಿದ್ದರು. ಇದಕ್ಕೆ ಸೇಸಮ್ಮ ಇಂದು ಮತ್ತೊಮ್ಮೆ ಧನ್ಯವಾದ ತಿಳಿಸಿದ್ದಾರೆ. ಮಂಡ್ಯ ಜನತೆ ನನಗೆ ಪ್ರೀತಿಕೊಟ್ಟಿದ್ದಾರೆ ತುಂಬಾ ಖುಷಿ ಆಯಿತು. ನನ್ನ ಅಭಿಮಾನಿಗಳ ಪ್ರೀತಿಗೆ ನಾನು ಋಣಿ. ನಾನು ಮಂಡ್ಯದ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಆದರೆ ಇಂದು ಅದು ಆಗುವುದಿಲ್ಲ. ಆದರೆ ಇನ್ನೊಮ್ಮೆ ಖಂಡಿತ ಭೇಟಿ ಮಾಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Sanjjanaa Galrani: ಗುಡ್​ನ್ಯೂಸ್​, ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಲ್ರಾನಿ

ಕೆಜಿಎಫ್ 2 ಕುರಿತು ಮಾತನಾಡಿದ ಸನ್ನಿ:

ಇನ್ನು, ಕನ್ನಡದ ಹೆಮ್ಮೆಯ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ 2 ಕುರಿತು ಸಹ ಸನ್ನಿ ಲಿಯೋನ್ ಮಾತನಾಡಿದ್ದು, ಕೆಜಿಎಫ್ 2 ಸಿನಿಮಾವನ್ನ  ಓಟಿಟಿಯಲ್ಲಿ ನೋಡುವುದಾಗಿ ತಿಳಸಿದ್ದಾರೆ. ಅಲ್ಲದೇ ಕನ್ನಡ ಇಂಡಸ್ಟ್ರಿಯ ಬೇಳವಣಿಗೆ ತುಂಬಾ ಚೆನ್ನಾಗಿದೆ. ಏನಾದರೂ ಕನ್ನಡದಲ್ಲಿ ಒಳ್ಳೆ ಆಫರ್ ಬಂದಲ್ಲಿ ನಾನು ಮಾಡುತ್ತೇನೆ‘ ಎನ್ನುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
Published by:shrikrishna bhat
First published: