'ಶೃಂಗಾರ ದೇವತೆ' ಸನ್ನಿ ಲಿಯೋನ್ಗೆ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಹಳ್ಳಿಯಿಂದ ಹಿಡಿದು ದಿಲ್ಲಿವರೆಗೂ ಜನ ಸನ್ನಿ ಜಪ ಮಾಡ್ತಾರೆ. ಹಾಲು ಗಲ್ಲದ ಮಕ್ಕಳಿಂದ ಹಿಡಿದು, ಹಲ್ಲು ಉದುರಿದ ಮುದುಕರವರೆಗೂ ಸಮೂಹ 'ಸನ್ನಿ'ಗೆ ಒಳಗಾದವರಿದ್ದಾರೆ. ಇಂತಿಪ್ಪ ‘ಸೇಸಮ್ಮ’ ಅಲಿಯಾಸ್ ಸನ್ನಿ ಲಿಯೋನ್ ನಮ್ಮ ಮಂಡ್ಯದ ಹುಡುಗರ ಬಗ್ಗೆ ಟ್ವೀಟ್ ಮಾಡಿದ್ದಾರೆ!
ಸನ್ನಿ ಲಿಯೋನ್ (Sunny Leone) ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಹಾಲು ಗಲ್ಲದ ಮಕ್ಕಳಿಂದ (Chldren) ಹಿಡಿದು, ಹಲ್ಲು ಉದುರಿದ ಮುದುಕರವರೆಗೂ (Old Age People) ಸನ್ನಿ ಲಿಯೋನ್ ಅಭಿಮಾನಿಗಳಿದ್ದಾರೆ. ತನ್ನ ಹಸಿ ಬಿಸಿ ದೃಶ್ಯಗಳ ಸಿನಿಮಾಗಳಿಂದಲೇ (Cinema) ಗುರುತಿಸಿಕೊಂಡಿದ್ದ ಈ ‘ಶೃಂಗಾರ ದೇವತೆ’, ಇದೀಗ ತಮ್ಮ ಸಮಾಜಸೇವೆಯಿಂದಲೇ (Social Service) ಸುದ್ದಿ ಮಾಡುತ್ತಿದ್ದಾರೆ. ಅಶ್ಲೀಲ ಪಾತ್ರಗಳನ್ನು ತೊರೆದು, ಪ್ರಬುದ್ಧ ಪಾತ್ರಗಳನ್ನು (Character) ಮಾಡುತ್ತಾ ತಾನೊಬ್ಬ ಪ್ರಬುದ್ಧ ನಟಿ (Actress) ಅಂತ ಸಾಬೀತು ಮಾಡುತ್ತಿದ್ದಾರೆ. ಸಮಾಜಸೇವೆಯಲ್ಲೂ ಸದಾ ಮುಂಚೂಣಿಯಲ್ಲಿರುವ ಸನ್ನಿ ಲಿಯೋನ್ಗೆ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಹಳ್ಳಿಯಿಂದ (Village) ಹಿಡಿದು ದಿಲ್ಲಿವರೆಗೂ (Delhi) ಜನ ಸನ್ನಿ ಜಪ ಮಾಡ್ತಾರೆ. ಇಂತಿಪ್ಪ ‘ಸೇಸಮ್ಮ’ ಅಲಿಯಾಸ್ ಸನ್ನಿ ಲಿಯೋನ್ ಮೊನ್ನೆ ಮೊನ್ನೆಯಷ್ಟೇ 41ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು (Fans) ಬೇರೆ ಬೇರೆ ರೀತಿಯಲ್ಲಿ ಸನ್ನಿ ಹುಟ್ಟುಹಬ್ಬ (Birth Day) ಆಚರಿಸಿದ್ದಾರೆ. ಇದೀಗ ಮಂಡ್ಯದ (Mandya) ಹೈಕ್ಳಿಗೆ ಸೇಸಮ್ಮ “ಥ್ಯಾಂಕ್ಸ್” (Thanks) ಎಂದಿದ್ದಾರೆ.
ಮಂಡ್ಯದ ಅಭಿಮಾನಿಗಳಿಗೆ ಸನ್ನಿ ಲಿಯೋನ್ ಧನ್ಯವಾದ
ಮಂಡ್ಯದ ತಮ್ಮ ಅಭಿಮಾನಿಗಳಿಗೆ ನಟಿ ಸನ್ನಿಲಿಯೋನ್ ಧನ್ಯವಾದ ಅರ್ಪಿಸಿದ್ದಾರೆ. ಇತ್ತೀಚಿಗಷ್ಟೇ ಮಂಡ್ಯದ ಯುವಕರು ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ್ದರು. ಅದು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆ ವರದಿಯ ಪೇಪರ್ ಕಟಿಂಗ್ಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಸೇಸಮ್ಮ, ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದಿದ್ದಾರೆ.
ರಕ್ತ ದಾನ ಮಾಡಿ ಸನ್ನಿ ಬರ್ತ್ ಡೇ ಆಚರಿಸಿದ್ದ ಫ್ಯಾನ್ಸ್
ಮೇ 13ರಂದು ಸನ್ನಿ ಲಿಯೋನ್ ಅವರ 41ನೇ ವರ್ಷದ ಹುಟ್ಟುಹಬ್ಬವಿತ್ತು. ಅಂದು ಮಂಡ್ಯದ ಹಳ್ಳಿಯೊಂದರಲ್ಲಿ ಸ್ಪೆಷಲ್ ಆಗಿ ಸನ್ನಿ ಬರ್ತ್ ಡೇ ಆಚರಿಸಲಾಗಿತ್ತು. ಯುವಕರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಕೊಮ್ಮೇರಹಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಸನ್ನಿ ಲಿಯೋನ್ ಅವರ ದೊಡ್ಡ ಕಟೌಟ್ಗಳನ್ನು ನಿರ್ಮಿಸಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಆಹಾರ ವಿತರಿಸಿದ್ದರು. ಶಿಬಿರದಲ್ಲಿ 39 ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು.
ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿಯ ತುಣುಕನ್ನು ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಓಹ್ ಇದು ನಂಬಲು ಅಸಾಧ್ಯವಾಗಿದೆ. ನಿಮ್ಮ ಪ್ರೀತಿ, ಅಭಿಮಾನಗ ಗೌರವಾರ್ಥ ನಾನೂ ಬಂದು ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು! ನೀವೆಲ್ಲರೂ ನಿಜವಾಗಿಯೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ! ನಿನ್ನನ್ನು ಪ್ರೀತಿಸುತ್ತೇನೆ” ಅಂತ ಬರೆದುಕೊಂಡಿದ್ದಾರೆ.
Omg this is unbelievable.
In honor of you I will also go and donate my blood!!
ಟ್ರಸ್ಟ್ ಅಧ್ಯಕ್ಷ ನಟರಾಜು ಮಾತನಾಡಿ, ಸನ್ನಿ ಲಿಯೋನ್ ಅವರ ಹುಟ್ಟುಹಬ್ಬದ ಆಚರಣೆಗೆ ಗ್ರಾಮದ ಯುವಕರು ರಕ್ತದಾನ ಮಾಡಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ. ಇನ್ನು "ಯುವಕರು ದತ್ತಿ ಕಾರ್ಯಕ್ರಮಗಳನ್ನು ನಡೆಸಲು ಅವರ ಹೆಸರಿನಲ್ಲಿ ಸಂಘವನ್ನು ರಚಿಸಿದ್ದೇವೆ ಎಂದು ಹೇಳಿದರು. ಅನಾಥ ಮಕ್ಕಳಿಗೆ ಸಹಾಯ ಮಾಡುವಲ್ಲಿ ಲಿಯೋನ್ ಅವರ ಕೆಲಸವನ್ನು ಗೌರವಿಸಬೇಕು ಎಂದು ಅವರು ಹೇಳಿದರು.
ನಾವು ಲಿಯೋನ್ ಅವರ ಚಾರಿಟಿಯಿಂದ ಸ್ಫೂರ್ತಿ ಪಡೆದಿದ್ದೇವೆ. ನಾವು ಸನ್ನಿ ಲಿಯೋನ್ ಅವರ ಅಭಿಮಾನಿಗಳ ಸಂಘವನ್ನು ರಚಿಸಿದ್ದೇವೆ ಮತ್ತು ಆಕೆಯ ಹೆಸರಿನಲ್ಲಿ ದಾನ ಕಾರ್ಯಗಳನ್ನು ಮುಂದುವರಿಸುತ್ತೇವೆ.ಇದು ಎರಡನೇ ಬಾರಿಗೆ ಅವರ ಹುಟ್ಟುಹಬ್ಬವನ್ನು ಆಚರಿಸಿದೆವು' ಎಂದಿದ್ದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ