Sunny Leone: ಮತ್ತೆ ಸ್ಯಾಂಡಲ್​ವುಡ್​ ಕದ ತಟ್ಟಿದ ಸನ್ನಿ ಲಿಯೋನ್​: ಒಂದು ಹಾಡಿಗೆ ಮಾದಕ ತಾರೆ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಸನ್ನಿ ಲಿಯೋನ್​ ಹೆಜ್ಜೆ ಹಾಕಲಿದ್ದಾರೆ. ಕನಕಪುರ ಶ್ರೀನಿವಾಸ್​ ನಿರ್ಮಿಸುತ್ತಿರುವ ಕನ್ನಡ ಹಾಗೂ ತೆಲುಗು ಚಿತ್ರದ ಐಟಂ ಹಾಡಿಗೆ ಸನ್ನಿ ಲಿಯೋನ್​ ಸೊಂಟ ಬಳುಕಿಸಲಿದ್ದಾರೆ.

ನಟಿ ಸನ್ನಿ ಲಿಯೋನ್​

ನಟಿ ಸನ್ನಿ ಲಿಯೋನ್​

  • Share this:
ಮಾದಕ ತಾರೆ ಸನ್ನಿ ಲಿಯೋನ್ ಹೆಸರು ಕೇಳಿದೊಡಣೆ ಪಡ್ಡೆ ಹುಡುಗರ ನಿದ್ದೆ ಹಾಳಾಗುತ್ತದೆ. ಸನ್ನಿ ಲಿಯೋನ್​ ಸ್ಯಾಂಡಲ್​ವುಡ್​ಗೆ ಹೊಸಬರೇನಲ್ಲ. ಈ ಹಿಂದೆಯೇ ಎರಡು ಸಿನಿಮಾಗಳಲ್ಲಿ ಐಟಂ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ಡಿಕೆ ಸಿನಿಮಾದಲ್ಲಿ ಸೇಸಮ್ಮ ಅಂತ ಸೊಂಟ ಬಳುಕಿಸಿರುವ ಸನ್ನಿ ಲಿಯೋನ್​ ಲವ್​ ಯೂ ಆಲಿಯಾ ಸಿನಿಮಾದಲ್ಲೂ ಹಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಪಡ್ಡೆ ಹುಡುಗರ ಕನಸಿನ ರಾಣಿ ಸನ್ನಿ ಲಿಯೋನ್ ಈಗ ಮತ್ತೆ ಸ್ಯಾಂಡಲ್​ವುಡ್​ ಬಾಗಿಲು ತಟ್ಟಿದ್ದಾರೆ. ಸ್ಪೆಷಲ್​ ಹಾಡೊಂದರಲ್ಲಿ ಹೆಜ್ಜೆ ಹಾಕಲು ಮತ್ತೆ ಬಂದಿದ್ದಾರೆ. ಹೌದು, ಕನ್ನಡದ ಹೊಸ ಸಿನಿಮಾದ ಐಟಂ ಹಾಡಿನಲ್ಲಿ ಸನ್ನಿ ಲಿಯೋನ್​ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗಾಗಿ ಸನ್ನಿ ಲಿಯೋನ್​ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ. 

ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಸನ್ನಿ ಲಿಯೋನ್​ ಹೆಜ್ಜೆ ಹಾಕಲಿದ್ದಾರೆ. ಕನಕಪುರ ಶ್ರೀನಿವಾಸ್​ ನಿರ್ಮಿಸುತ್ತಿರುವ ಕನ್ನಡ ಹಾಗೂ ತೆಲುಗು ಚಿತ್ರದ ಐಟಂ ಹಾಡಿಗೆ ಸನ್ನಿ ಲಿಯೋನ್​ ಸೊಂಟ ಬಳುಕಿಸಲಿದ್ದಾರೆ.

Sunny leone Viral Video, Bollywood, Reality Show Splitsvilla, Sunney Leone, Sunny leone Viral Video, Bollywood, Snake Prank Video, Prank Videos, Sunny leone Instagram Posts, ಸನ್ನಿ ಲಿಯೋನ್​, ವೈರಲ್​ ವಿಡಿಯೋಗಳು, ನಕಲಿ ಹಾವಿನ ಫನ್ನಿ ವಿಡಿಯೋ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್​, ಸನ್ನಿ ಲಿಯೋನ್​ರ ವೈರಲ್​ ವಿಡಿಯೋ
ನಟಿ ಸನ್ನಿ ಲಿಯೋನ್​


ಕನಕಪುರ ಶ್ರೀನಿವಾಸ್ ಅವರು ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಿಸುತ್ತಿರುವ ಕಾಟನ್​ ಪೇಟೆ ಗೇಟ್ ​ಹಾಗೂ ತೆಲುಗಿನ ಸೀತಣ್ಣ ಪೇಟೆ ಗೇಟ್​ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕಲು ಸನ್ನಿ ಲಿಯೋನ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದಂದೇ ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ನಟಿ..!

ಕೇವಲ ಮೂರು ದಿನಗಳ ಚಿತ್ರೀಕರಣಕ್ಕೆ ಸನ್ನಿ ಲಿಯೋನ್​ ಬರೋಬ್ಬರಿ 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಹಾಡಿಗೆ ನಿರ್ದೇಶಕ ಬಹದ್ದೂರ್​ ಚೇತನ್​ ಸಾಹಿತ್ಯ ನೀಡಿದ್ದಾರಂತೆ.  ಇನ್ನು ಈ ಹಾಡಿನಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್​ ಅವರೂ ಸನ್ನಿ ಲಿಯೋನ್​ ಜತೆ ಡ್ಯಾನ್ಸ್​ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೇ ತಿಂಗಳು ಅಂದರೆ ಜುಲೈ 27 ರಿಂದ ಮೂರು ದಿನಗಳ ಕಾಲ ಈ ಐಟಂ ಹಾಡಿನ ಚಿತ್ರೀಕರಣ ಹೈದರಾಬಾದಿನಲ್ಲಿ ನಡೆಯಲಿದೆ. ಈ ಹಾಡಿಗಾಗಿ ಸಖತ್ತಾಗಿರುವ ಸೆಟ್​ ಸಹ ನಿರ್ಮಾಣವಾಗಲಿದೆಯಂತೆ.

ಸನ್ನಿ ಲಿಯೋನ್ ವೈರಲ್​ ವಿಡಿಯೋ

ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಹೆಚ್ಚಾಗಿ ತಮ್ಮ ಬೋಲ್ಡ್​ ಹಾಗೂ ಹಾಟ್​ ಫೋಟೋಶೂಟ್​ಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಇನ್ನು ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯವಾಗಿರುವ ನಟಿ ತಮ್ಮ ವೃತ್ತಿ ಹಾಗೂ ವೈಯಕ್ತಿಯ ವಿಷಯಗಳ ಬಗ್ಗೆ ಆಗಾಗ ನೆಟ್ಟಿಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಒಂದು ಕಾಲದಲ್ಲಿ ನೀಲಿ ಚಿತ್ರಗಳ ತಾರೆಯಾಗಿದ್ದ ಸನ್ನಿ ಲಿಯೋನ್​ ನಂತರ ಬಾಲಿವುಡ್​ಗೆ ಕಾಲಿಟ್ಟರು. ಹಿಂದಿ ಬಿಗ್​ ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟ ಸನ್ನಿ ನಂತರ ಬಾಲಿವುಡ್​ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದರು. ಜೊತೆಗೆ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದರು. ಕಾಮಿಡಿ ಹಾಗೂ ಹಾರರ್​ ಸಿನಿಮಾಗಳಲ್ಲಿ ಕೊಂಚ ಹೆಚ್ಚಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸದ್ದು ಮಾಡುವ ಸನ್ನಿ ಲಿಯೋನ್​ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದು, ಅದು ವೈರಲ್​ ಆಗಿತ್ತು.


View this post on Instagram


A post shared by Sunny Leone (@sunnyleone)


ಸನ್ನಿ ಲಿಯೋನ್ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಈ ನಟಿಯನ್ನು ಆರಾಧಿಸುವ ಸಿನಿ ರಸಿಕರಿದ್ದಾರೆ. ಸದ್ಯ ಸನ್ನಿ ಲಿಯೋನ್​​ ಎಂಟಿವಿಯ ಜನಪ್ರಿಯ Splits villa ಶೋಗೆ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಗಾಗಿ ಸಿದ್ಧರಾಗುತ್ತಿದ್ದಾಗ ಅವರಿಗೆ ಡ್ರೆಸ್​ ತೊಡಲು ತುಂಬಾ ಕಷ್ಟಪಟ್ಟಿದ್ದಾರೆ.

ಹೌದು, ಆ ಕಾರ್ಯಕ್ರಮಕ್ಕೆಂದು ವಿನ್ಯಾಸ ಮಾಡಲಾಗಿದ್ದ ಡ್ರೆಸ್​ ತೊಡಲು ಸನ್ನಿ ಅವರಿಗೆ ತುಂಬಾ ಕಷ್ಟವಾಗಿದೆ. ಅದಕ್ಕೆ ಸಹಾಯಕ್ಕಾಗಿ ಅವರ ತಂಡವೂ ಬಂದಿದೆ. ಸರಿಯಾಗಿ ಆ ಡ್ರೆಸ್​ ಫಿಟ್​ ಆಗಿ ಎಂದು ಸನ್ನಿ ಲಿಯೋನ್​ ಅವರ ಡ್ರೆಸ್ಸಿಂಗ್​ ಟೀಮ್​ ಪಡುವ ಪಾಡು ಈ ವಿಡಿಯೋದಲ್ಲಿ ತಿಳಿಯುತ್ತದೆ.

ಇದನ್ನೂ ಓದಿ: Duniya Vijay: ಕೊರೋನಾದಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್​ ತಾಯಿ ವಿಧಿವಶ..!

ಮೇ. 13ರಂದು ಸನ್ನಿ ಲಿಯೋನ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಮಂಡ್ಯದ ಈ ಹಳ್ಳಿಯೊಂದರಲ್ಲಿ ಈ ಮಾದಕ ತಾರೆಯ ಬರ್ತ್​ಡೇಗೆ ದೊಡ್ಡ ಬ್ಯಾನರ್​ ಹಾಕಲಾಗಿತ್ತು. ಈ ಮೂಲಕ ಶುಭಕೋರಲಾಗಿತ್ತು. ಆ ಫೋಟೋ ಆಗ ಸಖತ್​ ವೈರಲ್​ ಆಗಿತ್ತು. ಇನ್ನೂ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಸನ್ನಿ ಲಿಯೋನ್​ ವಿರುದ್ಧ ಇವೆಂಟ್​ ಮ್ಯಾನೇಜ್ಮೆಂಟ್​ ಕಂಪೆನಿಯೊಂದು ಕೇರಳದ ಪೊಲೀಸ್​ ಠಾಣೆಯೊಂದದರಲ್ಲಿ ದೂರು ದಾಖಲಿಸಿತ್ತು. ನಂತರ ಸನ್ನಿ ಲಿಯೋ ಈ ವಿಷಯವಾಗಿ ಸ್ಟಷ್ಟನೆ ಸಹ ಕೊಟ್ಟಿದ್ದರು
Published by:Anitha E
First published: