ಬಾಲಿವುಡ್ ಚಿತ್ರಗಳನ್ನು ಬಾಯ್ಕಾಟ್ (Boycott) ಭೂತ ಬೆನ್ನುಬಿಡದೆ ಕಾಡ್ತಿದೆ. ಕಳೆದ ವರ್ಷ ಬಾಲಿವುಡ್ ಯಾವ ಸಿನಿಮಾ (Bollywood Movie) ಕೂಡ ನಿರೀಕ್ಷಿತ ಗಳಿಗೆ ಮಾಡಿಲ್ಲ. ಅನೇಕ ಟಾಪ್ ಹೀರೋಗಳ (Top Hero) ಸಿನಿಮಾಗಳು ಮಕಾಡೆ ಮಲಗಿದವು. ದಕ್ಷಿಣ ಭಾರತದ ಸಿನಿಮಾಗಳೇ ಬಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿತು. ಹೀಗಾಗಿ ಬಾಲಿವುಡ್ನ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿಲ್ಲ, ಅನೇಕ ನಟ-ನಟಿಯರು ಸೌತ್ ಸಿನಿಮಾಗಳತ್ತ (South Movies) ಮುಖ ಮಾಡ್ತಿದ್ದಾರೆ. ಬಾಯ್ಕಾಟ್ ಅಭಿಯಾನದಿಂದ ಪಾರು ಮಾಡುವಂತೆ ನಟ ಸುನೀಲ್ ಶೆಟ್ಟಿ (Suniel Shetty ), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಮೊರೆ ಹೋಗಿದ್ದಾರೆ. ಇದೇ ವೇಳೆ ಬಾಲಿವುಡ್ ನಟರ ಮೇಲಿರುವ ಡ್ರಗ್ಸ್ ಕಳಂಕದ ಬಗ್ಗೆ ಕೂಡ ಮಾತಾಡಿದ್ದಾರೆ.
ಬಾಯ್ಕಾಟ್ ಅಭಿಯಾನದಿಂದ ಬಾಲಿವುಡ್ಗೆ ನಷ್ಟ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬೈ ಪ್ರವಾಸದಲ್ಲಿದ್ದಾರೆ. ಈ ವೇಳೆ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ. ಪ್ರಸ್ತುತ ಹಿಂದಿ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ಪಠಾಣ್, ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಹಲವು ಸಿನಿಮಾಗಳ ಬಾಯ್ಕಾಟ್ ಅಭಿಯಾನದಿಂದ ಬಾಲಿವುಡ್ಗೆ ಭಾರೀ ನಷ್ಟವಾಗಿದೆ ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ.
ನಾವು ಒಳ್ಳೆಯ ಕೆಲಸವನ್ನು ಸಹ ಮಾಡಿದ್ದೇವೆ
ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ಸೋನು ನಿಗಮ್, ಕೈಲಾಶ್ ಖೇರ್ ಸೇರಿದಂತೆ ಅನೇಕರು ಯೋಗಿ ಆದಿತ್ಯನಾಥ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳು ಚರ್ಚೆ ನಡೆದಿದೆ. ಈ ವೇಳೆ ಮಾತಾಡಿದ ಸುನೀಲ್ ಶೆಟ್ಟಿ, ಬಾಲಿವುಡ್ ನಟರಾದ ನಾವು ಒಳ್ಳೆಯ ಕೆಲಸಗಳನ್ನು ಕೂಡ ಮಾಡಿದ್ದೇವೆ ಎಂಬ ಸತ್ಯ ಎಲ್ಲರಿಗೂ ತಿಳಿಸಬೇಕಿದೆ. ಕೆಲವರು ಕೆಟ್ಟವರು ಇರಬಹುದು. ಆದರೆ ಇಡೀ ಚಿತ್ರರಂಗ ಕೆಟ್ಟದ್ದಲ್ಲ. ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರೂ ಜೊತೆಯಾಗಿ ಬಾಯ್ಕಾಟ್ ಬಾಲಿವುಡ್ ಎಂಬ ಟ್ರೆಂಡ್ ನಿಲ್ಲಿಸಬೇಕಿದೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
.@SunielVShetty Sir impactful words on 'Boycott Bollywood' trend on twitter:
Hashtag 'BoycottBollywood' should stop.Imp to convey that we've done good work.There can be one rotten apple. 99% of us don't indulge in wrong things.We've to change this perception..👏🙏🙏#SunielShetty pic.twitter.com/Oi16h25mJ2
— Suniel Shetty FC (@SunielShetty_FC) January 5, 2023
ಇಂದು ನಾನು ಸುನೀಲ್ ಶೆಟ್ಟಿ ಅಂತ ಜನಪ್ರಿಯವಾಗಿದ್ದರೆ ಅದಕ್ಕೆ ಉತ್ತರ ಪ್ರದೇಶದ ಜನರು ಕಾರಣ. ಬಾಲಿವುಡ್ ನಟರ ಮೇಲಿರುವ ಕಳಂಕವನ್ನು ತೆಗೆದು ಹಾಕಬೇಕಿದೆ. ಡ್ರಗ್ಸ್ ಕಳಂಕದ ಬಗ್ಗೆ ಮಾತಾಡಲು ನೋವಾಗುತ್ತದೆ. ಪ್ರಧಾನಿ ಮೋದಿ ಹಾಗೂ ಸಿಎಂ ಆದಿತ್ಯನಾಥ್ ಮನಸ್ಸು ಮಾಡಿದ್ದಾರೆ ಎಲ್ಲಾ ಸರಿ ಹೋಗುತ್ತದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ
ನಾವು ದಿನವಿಡೀ ಡ್ರಗ್ಸ್ ಸೇವಿಸಲ್ಲ
ಬಾಲಿವುಡ್ ಮಂದಿಯೆಲ್ಲಾ ಕೆಟ್ಟವರಲ್ಲ, ನಮ್ಮಲ್ಲಿ ಶೇಕಡಾ 99ರಷ್ಟು ಮಂದಿ ಡ್ರಗ್ಸ್ ತೆಗೆದುಕೊಳ್ಳೋದಿಲ್ಲ, ನಾವು ದಿನವಿಡೀ ಡ್ರಗ್ಸ್ ಸೇವಿಸಲ್ಲ, ಕೆಟ್ಟ ಕೆಲಸ ಮಾಡಲ್ಲ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ನಮ್ಮ ಸಿನಿಮಾ ಸಂಗೀತವು ಭಾರತವನ್ನು ಜಗತ್ತಿನ ಜೊತೆ ಬೆಸೆಯುವಂತೆ ಮಾಡಿದೆ. ಯೋಗಿ ಅವರೇ.. ನೀವು ಮುಂದಾಳತ್ವ ವಹಿಸಿಕೊಂಡು ಪ್ರಧಾನ ಮಂತ್ರಿಗಳ ಬಳಿ ಮಾತನಾಡಿದರೆ ಅದರಿಂದ ತುಂಬ ಬದಲಾವಣೆ ಆಗಲಿದೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ಬಾಲಿವುಡ್ನ ಕಳಂಕಿತ ಇಮೇಜ್ ಅನ್ನು ಸರಿಪಡಿಸಬೇಕಿದೆ. ಬಾಲಿವುಡ್ ಅನ್ನು ಬಹಿಷ್ಕರಿಸಿ ಎಂಬ ಈ ಟ್ಯಾಗ್ ಅನ್ನು ತೆಗೆದುಹಾಕಬೇಕಾಗಿದೆ. ಬುಟ್ಟಿಯಲ್ಲಿ ಕೊಳೆತ ಸೇಬು ಇರಬಹುದು, ಆದರೆ ನಾವೆಲ್ಲರೂ ಕೆಟ್ಟವರಲ್ಲ ಎಂದು ಸುನೀಲ್ ಶೆಟ್ಟಿ ಹೇಳಿದ್ದು, ನಟನ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ