HOME » NEWS » Entertainment » SUNIEL SHETTY LASHES OUT AT FAKE VINEETA POSTER HTV ZP

Suniel Shetty: ನಿರ್ಮಾಪಕರ ವಿರುದ್ಧ ಸಿಡಿದೆದ್ದ ಪೈಲ್ವಾನ್ ನಟ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸುನಿಲ್ ಶೆಟ್ಟಿ!

ಸದ್ಯ  ಈ ಬಗ್ಗೆ ತನಿಖೆ ಆರಂಭಿಸಿರುವ ಮುಂಬೈ ಪೊಲೀಸರು ಆ ನಿರ್ಮಾಣ ಸಂಸ್ಥೆಯವರು ಯಾರ ಬಳಿಯಾದರೂ ಹಣ ಪಡೆದಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಜೊತೆಗೆ ನಿರ್ಮಾಣ ಸಂಸ್ಥೆಯವರಿಗೆ ನೋಟೀಸ್ ನೀಡಿ ಕರೆದು, ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

news18-kannada
Updated:March 5, 2021, 7:37 PM IST
Suniel Shetty: ನಿರ್ಮಾಪಕರ ವಿರುದ್ಧ ಸಿಡಿದೆದ್ದ ಪೈಲ್ವಾನ್ ನಟ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸುನಿಲ್ ಶೆಟ್ಟಿ!
sunil shetty
  • Share this:
ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕಳೆದ ಮೂರು ದಶಕಗಳ ಸಿನಿಜರ್ನಿಯಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಈ ಬಾಲಿವುಡ್ ಆಕ್ಷನ್ ಸ್ಟಾರ್​ಗೆ ಸಲ್ಲುತ್ತದೆ. ಇಂತಹ ಸುನಿಲ್ ಶೆಟ್ಟಿ ಪೈಲ್ವಾನ್ ಚಿತ್ರದ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಗುರುವಿನ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಡೆಬ್ಯೂ ಮಾಡಿದ್ದು ಗೊತ್ತೇಯಿದೆ. ಸುನಿಲ್ ಶೆಟ್ಟಿ ಸದ್ಯ ಹಿಂದಿಯಲ್ಲಿ ಮುಂಬೈ ಸಾಗಾ, ತಡಪ್, ಮಲಯಾಳಂನಲ್ಲಿ ಮರಕ್ಕರ್ : ಲಯನ್ ಆಫ್ ದಿ ಅರೇನಿಯನ್ ಸೀ, ಹಾಗೂ ತೆಲುಗಿನಲ್ಲಿ ಮೋಸಗಲ್ಲು ಹಾಗೂ ಬಿಬಿ3 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಹೀಗೆ ಬಹುಭಾಷೆಗಳಲ್ಲಿ ನಟಿಸಿ ಭಾರತದಾದ್ಯಂತ ಹೆಸರು ಮಾಡಿರುವ 59 ವರ್ಷದ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿಯವರ ಹೆಸರನ್ನು ನಿರ್ಮಾಪಕರೊಬ್ಬರು ತಮ್ಮ ಸಿನಿಮಾ ಪೋಸ್ಟರ್​ನಲ್ಲಿ ಬಳಸಿಕೊಳ್ಳುತ್ತಿದ್ದಾರಂತೆ. ಮಾತ್ರವಲ್ಲ ಸುನಿಲ್ ಶೆಟ್ಟಿಯವರ ಗಮನಕ್ಕೆ ತರದೇ, ಅನುಮತಿ ಪಡೆಯದೇ ಹೆಸರು ಬಳಸಿಕೊಂಡಿದ್ದಲ್ಲದೇ ಕೆಲವರಿಂದ ತಮ್ಮ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿ ಎಂದು ಪುಸಲಾಯಿಸುತ್ತಿದ್ದರಂತೆ. ವಿಷಯ ತಿಳಿದಿದ್ದೇ ತಡ ಆಕ್ರೋಶಗೊಂಡಿರುವ ಸುನಿಲ್ ಶೆಟ್ಟಿ ಆ ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಸದ್ಯಕ್ಕಿನ್ನೂ ಪ್ರಾಥಮಿಕ ಹಂತದ ತನಿಖೆ ನಡೆಸುತ್ತಿರುವ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ.

ಸುನಿಲ್ ಶೆಟ್ಟಿ ಕುಟುಂಬ


ಸುನಿಲ್ ಶೆಟ್ಟಿ ಸದ್ಯ ತಮ್ಮ ಮಗ ಅಹಾನ್ ಶೆಟ್ಟಿಯನ್ನು ಲಾಂಚ್ ಮಾಡುವ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ 2015ರಲ್ಲೇ ಹೀರೋ ಚಿತ್ರದ ಮೂಲಕ ಬಾಲಿವುಡ್ ಡೆಬ್ಯೂ ಮಾಡಿದ್ದರು. ಬಳಿಕ ಮುಬಾರಕಾನ್, ನವಾಬ್‍ಜಾದೇ ಹಾಗೂ ಮೋತಿಚೋರ್ ಚಕ್‍ನಾಚೂರ್ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಬೆನ್ನಲ್ಲೇ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಕೂಡ ಬಿಟೌನ್‍ಗೆ ಪದಾರ್ಪಣೆ ಮಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಅಹಾನ್ ಶೆಟ್ಟಿ ನಾಯಕನಾಗಿರುವ ತಡಪ್ ಚಿತ್ರದಲ್ಲಿ ಅವರಿಗೆ ಸ್ಟೂಡೆಂಟ್ ಆಫ್ ದಿ ಇಯರ್ 2 ಖ್ಯಾತಿಯ ತಾರಾ ಸುತಾರಿಯಾ ನಾಯಕಿಯಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಮಿಲನ್ ಲೂಥ್ರಿಯಾ ನಿರ್ದೇಶನದಲ್ಲಿ ಮೂಡಿಬರಲಿದೆ. ಹೀಗೆ ಮಗನ ಲಾಂಚ್‍ನ ಬಗ್ಗೆ ತಲೆ ಕೆಡಿಸಿಕೊಂಡಿರುವ ಸುನಿಲ್ ಶೆಟ್ಟಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸುದ್ದಿ ಕೇಳಿ ಕೆಂಡಾಮಂಡಲವಾಗಿದ್ದಾರೆ. ಹೀಗಾಗಿಯೇ ನಿರ್ಮಾಪಕರು ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಅನುಮತಿ ಪಡೆಯದೇ ತಮ್ಮ ಹೆಸರನ್ನು, ಫೋಟೋವನ್ನು ಬಳಸಿಕೊಂಡಿರುವವರ ವಿರುದ್ಧ ದೂರು ನೀಡಿದ್ದಾರೆ.
Youtube Video

ಸದ್ಯ  ಈ ಬಗ್ಗೆ ತನಿಖೆ ಆರಂಭಿಸಿರುವ ಮುಂಬೈ ಪೊಲೀಸರು ಆ ನಿರ್ಮಾಣ ಸಂಸ್ಥೆಯವರು ಯಾರ ಬಳಿಯಾದರೂ ಹಣ ಪಡೆದಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಜೊತೆಗೆ ನಿರ್ಮಾಣ ಸಂಸ್ಥೆಯವರಿಗೆ ನೋಟೀಸ್ ನೀಡಿ ಕರೆದು, ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಮತ್ತೊಂದೆಡೆ ಈ ಆರೋಪಗಳನ್ನು ತಿರಸ್ಕರಿಸಿರುವ ನಿರ್ಮಾಣ ಸಂಸ್ಥೆಯವರು, ಸುನಿಲ್ ಶೆಟ್ಟಿಯವರ ಅನುಮತಿ ಪಡೆಯದೇ ಫೋಟೋ ಬಳಸಿಕೊಂಡಿದ್ದು ನಮ್ಮ ತಪ್ಪು ನಿಜ, ಆದರೆ ನಾವು ಯಾರ ಬಳಿಯೂ ಹಣ ಪಡೆದಿಲ್ಲ ಎಂದಿದ್ದಾರೆ.
Published by: zahir
First published: March 5, 2021, 7:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories