ಸೌತ್ ಸಿನಿಮಾಗಳಲ್ಲಿ ಬಾಲಿವುಡ್ ಶೆಟ್ರ ದರ್ಬಾರ್

ನಯನತಾರಾ ನಾಯಕಿಯಾಗಿರುವ ದರ್ಬಾರ್ ಸಿನಿಮಾ ಭಾರೀ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರವನ್ನು ಮುಂದಿನ ವರ್ಷ ಮೂರನೇ ವಾರದಲ್ಲಿ ತೆರೆಗೆ ತರಲು ನಿರ್ದೇಶಕ ಮುರುಗದಾಸ್ ಯೋಜನೆ ಹಾಕಿಕೊಂಡಿದ್ದಾರೆ.

zahir | news18
Updated:May 25, 2019, 5:30 PM IST
ಸೌತ್ ಸಿನಿಮಾಗಳಲ್ಲಿ ಬಾಲಿವುಡ್ ಶೆಟ್ರ ದರ್ಬಾರ್
@Sanjeevni Today
zahir | news18
Updated: May 25, 2019, 5:30 PM IST
ಬಾಲಿವುಡ್ ಅಣ್ಣ ಸುನೀಲ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ದಕ್ಷಿಣ ಭಾರತದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪೈಲ್ವಾನ್'​ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದ ಶೆಟ್ರು, ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧ ತೊಡೆ ತಟ್ಟಲು ಸಜ್ಜಾಗುತ್ತಿದ್ದಾರೆ.

'ತಲೈವಾ' ರಜನಿ ಅಭಿನಯದ ಬಹುನಿರೀಕ್ಷಿತ 'ದರ್ಬಾರ್' ಚಿತ್ರದಲ್ಲಿ ಸುನೀಲ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಕಡಲ ಕಿನಾರೆಯಿಂದ ಕೇಳಿ ಬಂದಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ರಜನಿ ವಿರುದ್ಧ ಸೆಟೆದು ನಿಲ್ಲುವ ರೋಲ್​ನಲ್ಲಿ ಬಾಲಿವುಡ್ ಶೆಟ್ರು ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

'ಕತ್ತಿ' ನಿರ್ದೇಶಕ ಎಆರ್​ ಮುರುಗದಾಸ್ ಇದೇ ಮೊದಲ ಬಾರಿ ರಜನಿಕಾಂತ್​ಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದು, ಈಗಾಗಲೇ 'ದರ್ಬಾರ್' ಸಿನಿಮಾ ತಾರಾ ಬಳಗದಿಂದಲೇ ಸುದ್ದಿಯಾಗುತ್ತಿದೆ. ಇದೀಗ ಸುನೀಲ್ ಶೆಟ್ಟಿ ಹೆಸರು ಕೂಡ ತಾರಾಗಣದಲ್ಲಿ ಕೇಳಿ ಬಂದಿದೆ. ಇದು ನಿಜವಾದರೆ 18 ವರ್ಷಗಳ ಬಳಿಕ ಸುನೀಲ್ ಶೆಟ್ಟಿ ಮತ್ತೊಮ್ಮೆ ತಮಿಳಿನಲ್ಲಿ ಬಣ್ಣ ಹಚ್ಚಲಿದ್ದಾರೆ. 2001ರಲ್ಲಿ ತೆರೆಕಂಡಿದ್ದ ಜ್ಯೋತಿಕಾ ಅಭಿನಯದ '12B' ಎಂಬ ಚಿತ್ರದಲ್ಲಿ ಸುನೀಲ್ ಶೆಟ್ಟಿ  ಕಾಲಿವುಡ್​ನಲ್ಲಿ ಕೊನೆಯ​ ಬಾರಿ ಅಭಿನಯಿಸಿದ್ದರು.'ಪೈಲ್ವಾನ್' ಚಿತ್ರದಲ್ಲಿನ ಸುನಿಲ್ ಶೆಟ್ಟಿ ಹೆಸರು ಹಾಗೂ ಫಸ್ಟ್‌ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, 'ಸರ್ಕಾರ್'​ ಅವತಾರದಲ್ಲಿ ಕಿಚ್ಚ ಸುದೀಪ್ ವಿರುದ್ಧ ಬಾಲಿವುಡ್ ಅಣ್ಣ ಅಬ್ಬರಿಸುವ ಸೂಚನೆ ನೀಡಿದ್ದಾರೆ.


Loading...

ಇನ್ನು ವರುಣ್ ತೇಜ್ ಅಭಿನಯದ ಕ್ರೀಡಾ ಪ್ರಧಾನ ಚಿತ್ರದಲ್ಲೂ ಸುನೀಲ್ ಶೆಟ್ಟಿಗೆ ಆಫರ್ ನೀಡಲಾಗಿದ್ದು, ಮೊದಲ ಸುತ್ತಿನ ಮಾತುಕತೆಯಲ್ಲಿ ಶೆಟ್ರರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಹಾಗೆಯೇ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಲಿರುವ 'ಮರಕ್ಕರ್' ಎಂಬ ಸಿನಿಮಾಗೂ 'ಪೈಲ್ವಾನ್' ಸರ್ಕಾರ್ ಸಹಿ ಹಾಕಿದ್ದಾರೆ.ನಯನತಾರಾ ನಾಯಕಿಯಾಗಿರುವ 'ದರ್ಬಾರ್' ಸಿನಿಮಾ ಭಾರೀ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರವನ್ನು ಮುಂದಿನ ವರ್ಷ ಮೂರನೇ ವಾರದಲ್ಲಿ ತೆರೆಗೆ ತರಲು ನಿರ್ದೇಶಕ ಮುರುಗದಾಸ್ ಯೋಜನೆ ಹಾಕಿಕೊಂಡಿದ್ದಾರೆ. ಇದೀಗ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ದರ್ಬಾರ್'​ ಚಿತ್ರದಲ್ಲೂ 'ದರ್ಬಾರ್' ನಡೆಸಲು ಸುನೀಲ್ ಶೆಟ್ಟಿ ಎಂಟ್ರಿಯಾಗುತ್ತಿರುವುದು ಚಿತ್ರ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಫುಲ್​ ಬ್ಯುಸಿಯಾಗುವ ಸೂಚನೆ ನೀಡಿದ್ದಾರೆ ಸುನೀಲ್ ಶೆಟ್ಟಿ.

ಇದನ್ನೂ ಓದಿ: ICC World Cup 2019: ವಿಶ್ವಕಪ್​ನಲ್ಲಿ ಆರೆಂಜ್​ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಂ ಇಂಡಿಯಾ?

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...