ಕೆ.ಎಲ್‌. ರಾಹುಲ್ ಗಳಿಸಿದ ಶತಕ ನನಗೆ ಹುಟ್ಟುಹಬ್ಬದ ಉಡುಗೊರೆ: ಸುನೀಲ್‌ ಶೆಟ್ಟಿ

Suniel Shetty: ರಾಹುಲ್ ಮೊದಲನೆಯ ಟೆಸ್ಟ್ ಪಂದ್ಯದ ಮೊದಲನೆಯ ಇನ್ನಿಂಗ್ಸ್‌ನಲ್ಲಿ 84 ರನ್ ಗಳಿಸಿದ್ದು, ಎರಡನೆಯ ಇನ್ನಿಂಗ್ಸ್‌ನಲ್ಲಿ 25 ರನ್ ಗಳಿಸಿ ಉತ್ತಮವಾಗಿ ಆಡಿದ್ದು, ಅದೇ ಆಟವನ್ನು ಲಾರ್ಡ್ಸ್ ಮೈದಾನದಲ್ಲಿಯೂ ಮುಂದುವರೆಸಿರುವುದು ಕೆ.ಎಲ್‌. ರಾಹುಲ್ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.

ಕೆ.ಎಲ್‌. ರಾಹುಲ್ -ಸುನೀಲ್‌ ಶೆಟ್ಟಿ

ಕೆ.ಎಲ್‌. ರಾಹುಲ್ -ಸುನೀಲ್‌ ಶೆಟ್ಟಿ

  • Share this:

ಸುಮಾರು 2 ವರ್ಷಗಳ ನಂತರ ಭಾರತ ಕ್ರಿಕೆಟ್ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಕೆ.ಎಲ್.ರಾಹುಲ್ ಇದೀಗ ತಮ್ಮ ಅಮೋಘವಾದ ಶತಕದಿಂದ ಮತ್ತೊಮ್ಮೆ ಸುದ್ದಿಯಲಿದ್ದಾರೆ.ಇಂಗ್ಲೆಂಡ್ ತಂಡದ ವಿರುದ್ಧ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೆಯ ಟೆಸ್ಟ್ ಪಂದ್ಯದ ಮೊದಲನೇ ದಿನವೇ ಭರ್ಜರಿ ಶತಕ ಗಳಿಸುವುದರ ಮೂಲಕ ತಂಡದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ನಿನ್ನೆ ಗಳಿಸಿದ ಶತಕವು ರಾಹುಲ್‌ರ ಟೆಸ್ಟ್ ಪಂದ್ಯಗಳಲ್ಲಿ 6ನೇ ಶತಕವಾಗಿದೆ ಮತ್ತು ಸೆಪ್ಟೆಂಬರ್‌ 2018ರ ನಂತರ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ ಇದು ಮೊದಲ ಶತಕವಾಗಿದೆ.


ರಾಹುಲ್ ಮೊದಲನೆಯ ಟೆಸ್ಟ್ ಪಂದ್ಯದ ಮೊದಲನೆಯ ಇನ್ನಿಂಗ್ಸ್‌ನಲ್ಲಿ 84 ರನ್ ಗಳಿಸಿದ್ದು, ಎರಡನೆಯ ಇನ್ನಿಂಗ್ಸ್‌ನಲ್ಲಿ 25 ರನ್ ಗಳಿಸಿ ಉತ್ತಮವಾಗಿ ಆಡಿದ್ದು, ಅದೇ ಆಟವನ್ನು ಲಾರ್ಡ್ಸ್ ಮೈದಾನದಲ್ಲಿಯೂ ಮುಂದುವರೆಸಿರುವುದು ಕೆ.ಎಲ್‌. ರಾಹುಲ್ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.


ಈ ಸಂದರ್ಭದಲ್ಲಿ, ರಾಹುಲ್ ಬಾರಿಸಿದ ಶತಕದ ಬಗ್ಗೆ ಅವರ ಗರ್ಲ್‌ಫ್ರೆಂಡ್‌ ಅತಿಯಾ ಶೆಟ್ಟಿ ತಂದೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸುನೀಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾಹುಲ್ ಇಂಗ್ಲೆಂಡ್ ವಿರುದ್ಧದ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ವಿಡಿಯೋ ಹಂಚಿಕೊಂಡರು ಮತ್ತು “ನನಗೆ ನನ್ನ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ನೀಡಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.


"ಕ್ರಿಕೆಟ್‌ನ ಮೆಕ್ಕಾ ಎಂದೇ ಪ್ರಖ್ಯಾತಿಯಾದ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಶತಕ.. ನಿಮಗೆ ಅಭಿನಂದನೆಗಳು ಮತ್ತು ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ”, ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ರಾಹುಲ್ ಶತಕ ತುಂಬಾ ಜನರಿಗೆ ಸಂತೋಷ ನೀಡಿದೆ ಎಂದರೆ ತಪ್ಪಾಗಲಾರದು.


ಸುನೀಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದ ಸಾಲುಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಏನು ಹೆಚ್ಚಾಗಿ ಮಾತನಾಡದೇ ಹೃದಯದ ಮತ್ತು ಅಪ್ಪುಗೆಯ ಎಮೋಜಿಗಳನ್ನು ಹಾಕಿದ್ದಾರೆ.


ಸುನೀಲ್ ಹುಟ್ಟುಹಬ್ಬದಂದು, ಮಗಳು ಅತಿಯಾ ತನ್ನ ತಂದೆಗೆ ಹೃತ್ಪೂರ್ವಕ ಶುಭಾಶಯ ಹೇಳಿದ್ದಾಳೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ಮಗಳು ಒಟ್ಟಿಗೆ ಇರುವಂತಹ ಒಂದು ಹಳೆಯ ಮತ್ತು ಇತ್ತೀಚಿನ ಫೋಟೋ ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ ತನ್ನ ತಂದೆಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ತಿಳಿಸಿದ್ದಾರೆ.


ಸುನೀಲ್ ಪುತ್ರ ಅಹಾನ್ ಶೆಟ್ಟಿ ಬಾಲಿವುಡ್ ನಟಿ ತಾರಾ ಸುತಾರಿಯಾ ಅವರೊಂದಿಗೆ 'ತಡಪ್' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಪದಾರ್ಪಣೆ ಮಾಡಲು ಕಾತುರರಾಗಿದ್ದಾರೆ.


ತನ್ನ ತಂದೆಯ ವಿಶೇಷ ದಿನದಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಂದೆಯೊಡನೆ ಕಳೆದಂತಹ ಸುಮಧುರವಾದ ಕ್ಷಣಗಳನ್ನು ಸೆರೆ ಹಿಡಿದಿರುವ ಫೋಟೋಗಳನ್ನು ಹಂಚಿಕೊಂಡು "60 ನೇ ಹುಟ್ಟುಹಬ್ಬದ ಶುಭಾಶಯಗಳು ಅಪ್ಪ" ಎಂದು ಬರೆದಿದ್ದಾರೆ.


First published: