• Home
 • »
 • News
 • »
 • entertainment
 • »
 • Suniel Shetty: ಈ ನಟನ ಫಿಟ್ನೆಸ್​ಗೆ ಫಿದಾ ಆದ್ರು ಬಿ-ಟೌನ್​ನ ಯುವ ನಟರು: ವೈರಲ್​ ಆಗುತ್ತಿದೆ ಕರಾವಳಿಯ ಖಡಕ್​ ಹೈದನ ಈ ವಿಡಿಯೋ..!

Suniel Shetty: ಈ ನಟನ ಫಿಟ್ನೆಸ್​ಗೆ ಫಿದಾ ಆದ್ರು ಬಿ-ಟೌನ್​ನ ಯುವ ನಟರು: ವೈರಲ್​ ಆಗುತ್ತಿದೆ ಕರಾವಳಿಯ ಖಡಕ್​ ಹೈದನ ಈ ವಿಡಿಯೋ..!

ಸುನೀಲ್​ ಶೆಟ್ಟಿ

ಸುನೀಲ್​ ಶೆಟ್ಟಿ

Fitness Video Of Suniel Shetty: ಈ ವಯಸ್ಸಿನಲ್ಲೂ ಸುನೀಲ್​ ಶೆಟ್ಟಿ ಯುವಕರನ್ನು ನಾಚಿಸುವಂತಹ ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ. ಅವರ ಫಿಟ್ನೆಸ್​ಗೆ ಕಿಚ್ಚ ಸುದೀಪ್​ ಅವರೇ ಫಿದಾ ಆಗಿದ್ದರು. ಈಗ ಸುನೀಲ್​ ಶೆಟ್ಟಿ ಅವರ ಫಿಟ್ನೆಸ್​ ಗುಟ್ಟು ರಟ್ಟಾಗಿದೆ.

 • Share this:

  ಕರಾವಳಿಯಿಂದ ಬಾಲಿವುಡ್​ಗೆ ಹೋಗಿ ಹೆಸರು ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಅವರಲ್ಲಿ ನಟ ಸುನೀಲ್​ ಶೆಟ್ಟಿ ಸಹ ಒಬ್ಬರು. ಬಾಲಿವುಡ್​ ಜೊತೆಗೆ ಕನ್ನಡ ಹಾಗೂ ಇತರೆ ಭಾಷೆಗಳಲ್ಲೂ ಅಭಿನಯಿಸಿರುವ ಬಹುಭಾಷಾ ನಟ.


  ಕಿಚ್ಚ ಸುದೀಪ್​ ಅಭಿನಯದ 'ಪೈಲ್ವಾನ್'​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು ಸುನೀಲ್​ ಶೆಟ್ಟಿ. ಸುದೀಪ್​ಗೆ ಗುರುವಾಗಿ ಸರ್ಕಾರ್​ ಪಾತ್ರದಲ್ಲಿ  ಸುನೀಲ್​ ಶೆಟ್ಟಿ ಅಭಿನಯ ಪ್ರೇಕ್ಷಕರ ಮನ ಗೆದ್ದಿತ್ತು. 1992ರಿಂದ ಬಾಲಿವುಡ್​ನಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿರುವ ಸುನೀಲ್​ ಶೆಟ್ಟಿ ಅವರಿಗೆ ಈಗ 58 ವರ್ಷ.

  View this post on Instagram

  We can choose to be affected by the world or we can choose to affect the world.


  A post shared by Suniel Shetty (@suniel.shetty) on

  ಈ ವಯಸ್ಸಿನಲ್ಲೂ ಸುನೀಲ್​ ಶೆಟ್ಟಿ ಯುವಕರನ್ನು ನಾಚಿಸುವಂತಹ ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ. ಅವರ ಫಿಟ್ನೆಸ್​ಗೆ ಕಿಚ್ಚ ಸುದೀಪ್​ ಅವರೇ ಫಿದಾ ಆಗಿದ್ದರು. ಈಗ ಸುನೀಲ್​ ಶೆಟ್ಟಿ ಅವರ ಫಿಟ್ನೆಸ್​ ಗುಟ್ಟು ರಟ್ಟಾಗಿದೆ. ಕೆಲವೇ ಗಂಟೆಗಳ ಹಿಂದೆ ಸುನೀಲ್​ ತಮ್ಮ ಫಿಟ್ನೆಸ್​ ವಿಡಿಯೋ ಹಂಚಿಕೊಂಡಿದ್ದಾರೆ.

  View this post on Instagram

  Nothing feels better! 👊🏽 @fittrwithsquats @bodyfirstwellness #reelitfeelit #eatlocal


  A post shared by Suniel Shetty (@suniel.shetty) on

  58ನೇ ವಯಸ್ಸಿನಲ್ಲೂ ಸುನೀಲ್​ ಶೆಟ್ಟಿ ನಿತ್ಯ ಜಿಮ್​ನಲ್ಲಿ ಬೆವರಿಳಿಸುತ್ತಾರೆ. ಸಾಕಷ್ಟು ವರ್ಕೌಟ್​ ಮಾಡುವ ಈ ನಟನಿಗೆ ವ್ಯಾಯಾಮ ಮಾಡುವುದೆಂದರೆ ತುಂಬಾ ಇಷ್ಟವಂತೆ. ವ್ಯಾಯಾಮ ಮಾಡದಿದ್ದರೆ ಅವರ ದಿನ ಕಳೆದಂತೆಯೇ ಅನಿಸುವುದಿಲ್ಲವಂತೆ.

  View this post on Instagram

  Back to the 90s 👊🏾#throwbackthursday


  A post shared by Suniel Shetty (@suniel.shetty) on

  ಸುನೀಲ್​ ಶೆಟ್ಟಿ ಈಗ ಹಂಚಿಕೊಂಡಿರುವ ಅವರ ಫಿಟ್ನೆಸ್​ ವಿಡಿಯೋ ನೋಡಿರುವ ಟೈಗರ್​ ಶ್ರಾಫ್​ ಹಾಗೂ ರಿತೇಶ್,​ ವಾವ್​ ಅಣ್ಣ..! ಎಂದಿದ್ದಾರೆ. 58ನೇ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹವನ್ನು ಕಾಟಪಾಡಿಕೊಳ್ಳಲು ಸುನೀಲ್​ ಮಾಡುವ ಕಸರತ್ತಿಗೆ ಯುವ ನಟರೇ ತಲೆ ಬಾಗಿಸಿದ್ದಾರೆ. ಸುನೀಲ್​ ಶೆಟ್ಟಿ ಅವರ ಈ ವಿಡಿಯೋ ವೈರಲ್​ ಆಗುತ್ತಿದೆ.


  Rakshit Shetty: ಪುಣ್ಯಕೋಟಿ ಚಿತ್ರಕ್ಕೆ ಬ್ರೇಕ್​ ಕೊಟ್ಟು ಹೊಸ ಪ್ರಾಜೆಕ್ಟ್​ ಕೈಗೆತ್ತಿಕೊಂಡ ರಕ್ಷಿತ್​ ಶೆಟ್ಟಿ..!
  ಸಿನಿಮಾ ವಿಷಯಕ್ಕೆ ಬಂದರೆ ಸುನೀಲ್​ ಶೆಟ್ಟಿ ಸದ್ಯ ವೆಬ್​ ಸರಣಿಯೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಖಡಕ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ.


  ಇದನ್ನೂ ಓದಿ: Nikhil Kumaraswamy: ಪುಸ್ತಕ ಓದೋಕೆ ಆರಂಭಿಸಿದ್ದೇ ಪಾಠ ಮಾಡೋಕೆ ಶುರು ಮಾಡಿದ್ರಾ ನಿಖಿಲ್​ ಕುಮಾರಸ್ವಾಮಿ..!

  Published by:Anitha E
  First published: