Arjun Janya: ಎರಡು ಗಂಟೆ ತಡವಾಗಿದ್ರೆ ಅರ್ಜುನ್​ ಜನ್ಯಗೆ ಅಪಾಯ ಕಾದಿತ್ತು ಎಂದ ವೈದ್ಯರು..!

Arjun Janya: ಅರ್ಜುನ್​ ಜನ್ಯ ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಸುದ್ದಿಗೋಷ್ಠಿ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ದರ್ಶನ್​ ಹಾಗೂ ಅರ್ಜುನ್​ ಜನ್ಯ

ದರ್ಶನ್​ ಹಾಗೂ ಅರ್ಜುನ್​ ಜನ್ಯ

  • Share this:
ಲಘು ಹೃದಯಾಘಾತದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸ್ಯಾಂಡಲ್​ವುಡ್​ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ಅರ್ಜುನ್​ ಅವರಿಗೆ ಆ್ಯಂಜಿಯೋಗ್ರಾಂ ಮಾಡಿದ ನಂತರ ಆ್ಯಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ.

ಅರ್ಜುನ್​ ಜನ್ಯ ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಸುದ್ದಿಗೋಷ್ಠಿ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

Sunday only Arjun Janya admitted to hospital for Treatment
ವೈದ್ಯ ಆದಿತ್ಯ ಉಡುಪ


'2 ಗಂಟೆ ತಡವಾಗಿದ್ರೆ ಕೆಟ್ಟ ಪರಿಣಾಮ ಎದುರಿಸಬೇಕಿತ್ತು. ಶೇಖಡ 99% ಬ್ಲಾಕೇಜ್​ ಇತ್ತು. ಸೂಕ್ತ ಸಮಯದಲ್ಲಿ ಜನ್ಯಗೆ ಚಿಕಿತ್ಸೆ ನೀಡಿದ್ದೇವೆ. ಅರ್ಜುನ್ ಜನ್ಯ ಭಾನುವಾರವೇ ಆಸ್ಪತ್ರೆಗೆ ಬಂದಿದ್ರು. ಹೊಟ್ಟೆಉರಿ, ತಲೆನೋವು ಹಾಗೂ ಬೆನ್ನುನೋವಿಗೆ ಚಕಿತ್ಸೆ ಪಡೆದುಕೊಂಡಿದ್ದರು. ನಂತರ ಮತ್ತೆ ಸೋಮವಾರ ಅವರಿಗೆ ತಲೆ ನೋವು ಹಾಗೂ ಎದೆ ನೋವು ಕಾಣಿಸಿಕೊಂಡಿತ್ತು. ಆಗ ಅವರಿಗೆ ಪದೇ ಪದೇ ಇಸಿಜಿಯಲ್ಲಿ ಮಾಡಲಾಯಿತು. ಅದರಲ್ಲಿ ಬಹಳ ವ್ಯತ್ಯಾಸ ಕಂಡುಬಂದಿತ್ತು' ಎಂದು ಮೈಸೂರಿನಲ್ಲಿ ಅಪೋಲೋ ಆಸ್ಪತ್ರೆ ವೈದ್ಯ ಆದಿತ್ಯ ಉಡುಪ ತಿಳಿಸಿದ್ದಾರೆ.

ಇದನ್ನೂ ಓದಿ: Arjun Janya: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ..!

'ತಕ್ಷಣ ಆ್ಯಂಜಿಯೋಗ್ರಾಂ ಪರೀಕ್ಷೆ ಮಾಡಲಾಗಿದ್ದು, ಆಗಲೇ ಗೊತ್ತಾಗಿದ್ದು ಶೇ. 99% ಬ್ಲಾಕೇಜ್ ಇದೆ ಎಂದು. ತಕ್ಷಣ ಅವರ ಕುಟುಂಬಸ್ಥರು ಜೊತೆ ಮಾತನಾಡಿ ಆ್ಯಂಜಿಯೋಪ್ಲ್ಯಾಸ್ಟಿ ಮಾಡಿದೆವು. ನಂತರ ಅವರು ಸಂಪೂರ್ಣ ನಿರಾಳರಾದರು.
ಮಂಗಳವಾರ ಬೆಳಗ್ಗೆ 2.30ಕ್ಕೆ ಅವರಿಗೆ ಆ್ಯಂಜಿಯೋಪ್ಲ್ಯಾಸ್ಟಿ ಮಾಡಿದ್ದೇವೆ.
ನಿಜವಾಗಿಯೂ 2 ಗಂಟೆ ತಡವಾಗಿದ್ದರೆ ಕೆಟ್ಟಪರಿಣಾಮ ಎದುರಿಸಬೇಕಿತ್ತು. ಸದ್ಯ ಎಲ್ಲವು ಸರಿಯಾಗಿದೆ‌. ಚಿಕಿತ್ಸೆ ಪಡೆದು ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ' ಮಾಹಿತಿ ನೀಡಿದ್ದಾರೆ ಆದಿತ್ಯ ಉಡುಪ.

ಇದನ್ನೂ ಓದಿ: Pooja Hegde: ಉಟ್ಟ ಸೀರೆ ಎಲ್ಲಿ ಜಾರಿ ಹೋಗುತ್ತೋ ಎಂದು ಭಯಪಡುತ್ತಿದ್ದರಂತೆ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಅಪೋಲೋ ಆಸ್ಪತ್ರೆ ಘಟಕದ ಮುಖ್ಯಸ್ಥ ಎನ್.ಜಿ.ಭರತೀಶ್ ರೆಡ್ಡಿ. ಗ್ಯಾಸ್ಟ್ರೋ ಇಂಟ್ರೋಲಜಿಸ್ಟ್ ಮುಖ್ಯ ವೈದ್ಯ ಡಾ.ರಾಜ್ ಕುಮಾರ್ ಪಿ.ವಾದ್ವಾ ಅವರು ಉಪಸ್ಥಿತರಿದ್ದರು.

ಕೆಲಸದ ಒತ್ತಡವೇ ಕಾರಣವಾಯ್ತಾ ಹೃದಯಾಘಾತಕ್ಕೆ...

ಸ್ಯಾಂಡಲ್​ವುಡ್​ನಲ್ಲಿ ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್​ ಸಿನಿಮಾಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ‌. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಅದಕ್ಕೆ ಸಂಗೀತ ನೀಡುವ ಕೆಲಸದಲ್ಲಿ ನಿರತರಾಗಿದ್ದರು ಅರ್ಜುನ್ ಜನ್ಯ‌. ಮಾರ್ಚ್‌ 21ಕ್ಕೆ ಅರ್ಜುನ್ ಜನ್ಯ ನೈಟ್ಸ್‌ನೊಂದಿಗೆ 'ರಾಬರ್ಟ್' ಸಿನಿಮಾದ ಆಡಿಯೋ ಲಾಂಚ್ ಮಾಡಬೇಕಿತ್ತು.  'ರಾಬರ್ಟ್' ಚಿತ್ರ ಏಪ್ರಿಲ್‌ 9ಕ್ಕೆ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಅರ್ಜುನ್​ ಜನ್ಯ ಹಾಡುಗಳನ್ನು ಸಿದ್ಧಪಡಿಸಬೇಕಿತ್ತು. ಅದಕ್ಕಾಗಿಯೇ ಒತ್ತಡದಲ್ಲಿ ಜನ್ಯ ಹಾಗೂ ಅವರ ತಂಡ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.

'ರಾಬರ್ಟ್' ಸಿನಿಮಾದ​ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ

''ರಾಬರ್ಟ್'​ ಸಿನಿಮಾದ ಕೆಲಸಗಳೆಲ್ಲ ಮುಗಿದೆ.  ಅರ್ಜುನ್​ ಜನ್ಯ ತುಂಬಾ ಬೇಗ ಬೇಗ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ತರುಣ್​ ಅವರಿಗೆ ಈ ವಿಷಯ ಗೊತ್ತಿತ್ತು. ನಿನ್ನೆ ನನಗೆ ಗೊತ್ತಾಯಿತು. ಈಗ ಅವರ ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಸಿನಿಮಾದ ಆಡಿಯೋ ಲಾಂಚ್​ ದಿನಾಂಕ ನಿರ್ಧರಿಸಲಾಗುವುದು. ಆ್ಯಸಿಡಿಟಿ ಅಂತ ನಿರ್ಲಕ್ಷಿಸಿದ್ರು. ಅದೃಷ್ಟ ಚೆನ್ನಾಗಿತ್ತು ಚಿಕ್ಕದರಲ್ಲೇ ಎಲ್ಲ ಮುಗಿದಿದೆ. ಇಂದು ಅವರನ್ನು ನೋಡಲು ಹೋಗುತ್ತಿದ್ದೇನೆ'' ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

Arjun Janya: ಅರ್ಜುನ್​ ಜನ್ಯ ಹೃದಯಾಘಾತಕ್ಕೆ ಕಾರಣವಾಯ್ತಾ ಒತ್ತಡದ ಕೆಲಸ..?
First published: