news18-kannada Updated:May 12, 2020, 8:49 PM IST
ರಜನಿಕಾಂತ್
ಕೊರೋನಾ ಲಾಕ್ಡೌನ್ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಅಣ್ಣಾತೆ‘ ಸಿನಿಮಾ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ.
‘ವಿಶ್ವಾಸಂ‘ ಸಿನಿಮಾ ಖ್ಯಾತಿಯ ಸಿರುಥೈ ಶಿವ ಸೂಪರ್ ಸ್ಟಾರ್ ರಜನಿ ಅವರನ್ನು ಹಾಕಿಕೊಂಡು ‘ಅಣ್ಣಾತೆ‘ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೀಗ ಈ ಸಿನಿಮಾ ಕೆಲಸಗಳು ಪೂರ್ಣ ಹಂತದಲ್ಲಿದ್ದು. ಇದರ ನಡುವೆ ಸಿನಿಮಾ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. 2021ರ ಪೊಂಗಲ್ಗೆ ‘ಅಣ್ಣಾತೆ‘ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಚಿತ್ರತಂಡ ಈ ಹಿಂದೆ ಯೋಜನೆ ಹಾಕಿಕೊಂಡತೆ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದರು. ಆದರೆ ಕೊರೋನಾದಿಂದಾಗಿ ತಮ್ಮ ಸಿನಿಮಾ ಬಿಡುಗಡೆ ಮಾಡುವ ಯೋಜನೆಯನ್ನು ಮುಂದಕ್ಕೆ ಹಾಕಿದ್ದಾರೆ. ಇದೀಗ 2021 ಪೊಂಗಲ್ ದಿನದಂದು ಸಿನಿಮಾ ಬಿಡುಗಡೆಯಾಗಲಿದೆ. ರಜನಿ ಅಭಿಮಾನಿಗೆ ಈ ಸುದ್ದಿ ಹಬ್ಬದೂಟ ಸಿಕ್ಕಿಂದಂತಾಗಿದೆ.
ರಜನಿ ಕಾಂತ್ ನಟಿಸಿರುವ ‘ಪೆಟ್ಟಾ‘ ಸಿನಿಮಾ ಮತ್ತು 'ದರ್ಬಾರ್' ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಿದ್ದವು. ಇದೀಗ ‘ಅಣ್ಣಾತೆ‘ ಸಿನಿಮಾ ಕೂಡ ಜನವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಇನ್ನು ‘ಅಣ್ಣಾತೆ‘ ಸಿನಿಮಾದಲ್ಲಿ ಮೀನಾ, ಕೀರ್ತಿ ಸುರೇಶ್, ನಯನತಾರಾ, ಸುಷ್ಬೂ, ಪ್ರಕಾಶ್ ರೈ ಸೇರಿದಂತೆ ಬಹುತಾರಗಣವನ್ನು ಹೊಂದಿದೆ
Rana Daggubati: ಕೊನೆಗೂ ಪ್ರೀತಿಯಲ್ಲಿ ಬಿದ್ದ ರಾಣಾ ದಗ್ಗುಬಾಟಿ: ಪ್ರೇಯಸಿ ಫೋಟೋ ರಿವೀಲ್!
First published:
May 12, 2020, 8:39 PM IST