• Home
  • »
  • News
  • »
  • entertainment
  • »
  • Sumedh Shinde: ಈ ಕಲಾವಿದ ದೊಡ್ಡ ದೊಡ್ಡ ಸ್ಟಾರ್​ಗಳನ್ನ ಅದೆಷ್ಟು ಸಖತ್ತಾಗಿ ಅನುಕರಣೆ ಮಾಡ್ತಾರೆ ನೋಡಿ!

Sumedh Shinde: ಈ ಕಲಾವಿದ ದೊಡ್ಡ ದೊಡ್ಡ ಸ್ಟಾರ್​ಗಳನ್ನ ಅದೆಷ್ಟು ಸಖತ್ತಾಗಿ ಅನುಕರಣೆ ಮಾಡ್ತಾರೆ ನೋಡಿ!

ಸುಮೇಧ್ ಶಿಂಧೆ

ಸುಮೇಧ್ ಶಿಂಧೆ

ಜನಪ್ರಿಯ ಮಿಮಿಕ್ರಿ ಮತ್ತು ವಾಯ್ಸ್ ಓವರ್ ಕಲಾವಿದ ಸುಮೇಧ್ ಶಿಂಧೆ, ಅನೇಕ ಬಾಲಿವುಡ್ ನಟರು ಮತ್ತು ಗಾಯಕರ ಅದ್ಭುತ ಮತ್ತು ಒಂದೇ ರೀತಿಯ ಧ್ವನಿಗಾಗಿ ವೈರಲ್ ಆಗುತ್ತಿದ್ದಾರೆ. ತಮ್ಮ ಆಸಕ್ತಿಯ ಬಗ್ಗೆ ಮತ್ತು ತಮ್ಮ ಕ್ಷೇತ್ರದ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.

  • News18 Kannada
  • Last Updated :
  • Maharashtra, India
  • Share this:

ಒಬ್ಬ ನಟನ (Actor) ಹಾಗೆ ನಟಿಸಿ ತೋರಿಸುವುದು, ಅವರ ಸ್ಟೈಲ್ ಅನುಕರಿಸುವುದು ಸ್ವಲ್ಪ ಸುಲಭದ ಕೆಲಸವಾಗಿರಬಹುದು, ಆದರೆ ಅವರಂತೆ ಡಿಟ್ಟೊ ಮಾತಾಡುವುದು ಎಂದರೆ ಸುಲಭದ ಮಾತಲ್ಲ ಬಿಡಿ. ಅದಕ್ಕೆ ತುಂಬಾ ವರ್ಷಗಳ ಪ್ರಯತ್ನ ಬೇಕು. ನೀವು ವೈರಲ್ ಸನ್ಸೆಷನ್ ಆಗಿರುವ ಸುಮೇಧ್ ಶಿಂಧೆ (Sumedh Shinde) ಅವರ ಹೆಸರು ಕೇಳಿರಬೇಕಲ್ಲವೇ? ಕೇಳಿಲ್ಲ ಅಂತ ಹೇಳುವವರು ಯಾರಾದರೂ ಇದ್ದರೆ, ಅವರಿಗಾಗಿ ಇವರ ಬಗ್ಗೆ ಕೆಲವು ಮಾತುಗಳನ್ನು ಹೇಳಲೇಬೇಕು. ಬಾಲಿವುಡ್ ನಟರಾದ ಅಮೀರ್ ಖಾನ್, ಹೃತಿಕ್ ರೋಷನ್, ಅಜಯ್ ದೇವಗನ್ ಮತ್ತು ಇನ್ನಿತರೆ ಸ್ಟಾರ್ ನಟರ ಹಲವಾರು ಅನಿಸಿಕೆಗಳು ಮತ್ತು ಮಿಮಿಕ್ರಿಯನ್ನು ನೀವು ಈ ರೇಡಿಯೋಗಳಲ್ಲಿ (Radio) ಕೇಳಿರಬಹುದು.


ಹೀಗೆ ಅದ್ಬುತ ನಟರ ಮಾತುಗಳನ್ನು ಮತ್ತು ಸ್ಟೈಲ್ ಅನ್ನು ಕಾಪಿ ಮಾಡುವುದು ವೇದಿಕೆ ಅಥವಾ ಪರದೆಯ ಮೇಲೆ ನಿರಾಯಾಸವಾಗಿ ಕಾಣಬಹುದು, ಆದರೆ ಇದು ನಿಜವಾಗಿಯೂ ಸಾಕಷ್ಟು ಅಭ್ಯಾಸ ಮತ್ತು ಕಠಿಣ ಪರಿಶ್ರಮವನ್ನು ತೆಗೆದುಕೊಳ್ಳುತ್ತದೆ.


ಯಾರು ಈ ಕಲಾವಿದ ಸುಮೇಧ್ ಶಿಂಧೆ?
ಜನಪ್ರಿಯ ಮಿಮಿಕ್ರಿ ಮತ್ತು ವಾಯ್ಸ್ ಓವರ್ ಕಲಾವಿದ ಸುಮೇಧ್ ಶಿಂಧೆ, ಅನೇಕ ಬಾಲಿವುಡ್ ನಟರು ಮತ್ತು ಗಾಯಕರ ಅದ್ಭುತ ಮತ್ತು ಒಂದೇ ರೀತಿಯ ಧ್ವನಿಗಾಗಿ ವೈರಲ್ ಆಗುತ್ತಿದ್ದಾರೆ. ತಮ್ಮ ಆಸಕ್ತಿಯ ಬಗ್ಗೆ ಮತ್ತು ತಮ್ಮ ಕ್ಷೇತ್ರದ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.


ಟ್ವಿಟ್ಟರ್ ನಲ್ಲಿ 27,000 ಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಈ ವ್ಯಕ್ತಿ ಮೊದಲು ದಂತವೈದ್ಯರಾಗಿದ್ದರು. 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಹೇರಲಾಗಿದ್ದ ಲಾಕ್ಡೌನ್ ನಲ್ಲಿ ಅವರು ತಮ್ಮ ಕ್ಲಿನಿಕ್ ಅನ್ನು ಮುಚ್ಚಬೇಕಾಯಿತು ಮತ್ತು ಅದರ ನಂತರ ಅವರು ತಮ್ಮ ವೃತ್ತಿಯನ್ನು ತೊರೆದರು.


38 ವರ್ಷದ ಶಿಂಧೆ ಮಹಾರಾಷ್ಟ್ರದ ಉಪನಗರವಾದ ಅಂಬರನಾಥ್ ನಲ್ಲಿ ಬೆಳೆದರು ಮತ್ತು ಬಾಲ್ಯದಲ್ಲಿ ಧ್ವನಿ ಪ್ರಭಾವ ಬೀರಲು ಪ್ರಾರಂಭಿಸಿದರು. ಅವರ ಚಿಕ್ಕಪ್ಪ ಆರ್ಕೆಸ್ಟ್ರಾವನ್ನು ಹೊಂದಿದ್ದರು ಮತ್ತು ಇದು ಅವರಿಗೆ ಬಾಲ್ಯದಲ್ಲಿಯೇ ಒಂದು ವೇದಿಕೆಯ ಅವಕಾಶವನ್ನು ನೀಡಿತು. ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಸುಮೇಧ್ ಅವರು ತಾವು ಯಶಸ್ವಿಯಾಗಿ ಅನುಕರಣೆ ಮಾಡಿದ ಮೊದಲ ನಟ ಅಮೀರ್ ಖಾನ್ ಎಂದು ಹೇಳಿದರು. "ನಾನು 1995 ರ ರಂಗೀಲಾ ಚಿತ್ರದಲ್ಲಿ ಅವರ ಮುನ್ನಾ ಪಾತ್ರದ ಬಗ್ಗೆ ಒಂದು ಅನಿಸಿಕೆಯನ್ನು ಮಾಡಿದ್ದೆ ಮತ್ತು ಅದು ಎಲ್ಲರಿಗೂ ಇಷ್ಟವಾಯಿತು" ಎಂದು ಸುಮೇಧ್ ಅವರು ಹೇಳಿದರು.


‘ತ್ರೀ ಈಡಿಯಟ್ಸ್’ ಚಿತ್ರದಲ್ಲಿ ಅಮೀರ್ ಪಾತ್ರಕ್ಕೆ ಧ್ವನಿ ನೀಡಿದ್ದರಂತೆ ಸುಮೇಧ್
ಅವರು ಅಮೀರ್ ಖಾನ್ ಅವರಿಗೆ ಸಂಬಂಧಿಸಿದ ಬಹಳ ಆಸಕ್ತಿದಾಯಕ ಪ್ರಸಂಗವನ್ನು ಹಂಚಿಕೊಂಡರು, ಅವರು ತಮ್ಮ 2009 ರಲ್ಲಿ ತೆರೆಕಂಡ ಚಲನಚಿತ್ರ ‘ತ್ರೀ ಈಡಿಯಟ್ಸ್’ ನಲ್ಲಿ ನಟನಿಗೆ ಡಬ್ ಮಾಡಬೇಕಾಗಿ ಬಂದಿತ್ತು ಮತ್ತು ಆ ಚಿತ್ರ ದೊಡ್ಡ ಹಿಟ್ ಆಗಿದ್ದು ನನಗೆ ತುಂಬಾನೇ ಖುಷಿ ಕೊಟ್ಟಿತ್ತು. "ಪರೀಕ್ಷೆ ಫಲಿತಾಂಶ ಬಂದಾಗ ದೃಶ್ಯದಲ್ಲಿ ಅಮೀರ್ ಅವರ ಸಂಭಾಷಣೆಯ ಕೇವಲ ಎರಡು ಪದಗಳು ಮತ್ತು ತರಗತಿಯ ಫೋಟೋವನ್ನು ತೆಗೆದುಕೊಳ್ಳುವಾಗ ಅವರು ಬೊಮನ್ ಇರಾನಿ ಅವರೊಂದಿಗೆ ನಡೆಸುತ್ತಿರುವ ಸಂಭಾಷಣೆಯನ್ನು ಅಮೀರ್ ಲಭ್ಯವಿಲ್ಲದ ಕಾರಣ, ನಾನೇ ಡಬ್ ಮಾಡಿದ್ದೇನೆ” ಎಂದು ಹೇಳಿದರು.


ಇದನ್ನೂ ಓದಿ: Deepika Padukone: ವಿಶ್ವದ 10 ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ದೀಪಿಕಾ ಪಡುಕೋಣೆ


ತನಗಿರುವ ಕೌಶಲ್ಯಗಳನ್ನು ಇನ್ನಷ್ಟು ಕರಗತ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ಹೇಳಿದ ಸುಮೇಧ್ ಅವರು "ನಾನು ಒಂದು ನಿಮಿಷಕ್ಕೆ ಒಬ್ಬ ನಟ ಅಥವಾ ಗಾಯಕ ಎಷ್ಟು ಪದಗಳನ್ನು ಮಾತನಾಡುತ್ತಾರೆ ಅನ್ನೋದರ ಬಗ್ಗೆ ಗಮನ ಹರಿಸುತ್ತೇನೆ. ನಾನು ಸಂದರ್ಶನಗಳಲ್ಲಿ ಅವುಗಳನ್ನು ಗಮನಿಸುತ್ತೇನೆ ಮತ್ತು ಅದು ಅವರ ಆಲೋಚನೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡುತ್ತದೆ. ಧ್ವನಿಗಿಂತ ವ್ಯಕ್ತಿಯ ಮಾತನಾಡುವ ಶೈಲಿಯು ಹೆಚ್ಚು ಮುಖ್ಯ” ಎಂದು ಅವರು ಹೇಳಿದರು.


ಯಾವ ಯಾವ ನಟರ ಧ್ವನಿಯಲ್ಲಿ ಮಾತಾಡ್ತಾರೆ ಶಿಂಧೆ
ಸುಮೇಧ್ ಅವರು ಹೆಚ್ಚಾಗಿ ಮಧ್ಯಮ ಶ್ರೇಣಿಯಲ್ಲಿ ಹೆಚ್ಚಿನ ಪಿಚ್ ಧ್ವನಿಯನ್ನು ಹೊಂದಿರುವ ಸೆಲೆಬ್ರಿಟಿಗಳ ವಾಯ್ಸ್ ಓವರ್ ಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು. ಅವರು ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ಮಿಮಿಕ್ರಿ ಮಾಡುವುದಿಲ್ಲ, ಏಕೆಂದರೆ ಅದು ಭಾರವಾದ ತಳಪಾಯವನ್ನು ಹೊಂದಿರುವ ಕಡಿಮೆ ಪಿಚ್ ಆಗಿದೆಯಂತೆ ಅಂತ ಹೇಳುತ್ತಾರೆ.ಶಿಂಧೆ ಅವರು ಅಮೀರ್ ಖಾನ್, ಹೃತಿಕ್ ರೋಷನ್, ಫರ್ಹಾನ್ ಅಖ್ತರ್ ಮತ್ತು ಜಾವೇದ್ ಅಖ್ತರ್ ಅವರನ್ನು ಸಹ ಭೇಟಿಯಾಗಿದ್ದಾರೆ. ಅವರೆಲ್ಲರೂ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಅವರ ಅನುಕರಣೆಯನ್ನು ಇಷ್ಟಪಟ್ಟಿದ್ದಾರೆ ಎಂದು ಅವರು ಹೇಳಿದರು.ಗಾಯಕ ಸೋನು ನಿಗಮ್ ಅವರ ಸೋಗಿನಲ್ಲಿ ನಟಿಸಿದ್ದಕ್ಕಾಗಿ ಮತ್ತು ಅವರ ವೀಡಿಯೋಗಳನ್ನು ಸಹ ಹಂಚಿಕೊಂಡಿದ್ದಕ್ಕಾಗಿ ಅವರು ಸಾಕಷ್ಟು ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ಅಮೀರ್ ಖಾನ್ ಮತ್ತು ಹೃತಿಕ್ ರೋಷನ್ ಅವರಿಗಾಗಿ ಶಿಂಧೆ ಮರಾಠಿ, ತಮಿಳು, ತೆಲುಗು ಮುಂತಾದ ವಿವಿಧ ಭಾಷೆಗಳಲ್ಲಿ ಅನೇಕ ಜಾಹೀರಾತುಗಳಿಗೆ ಡಬ್ ಮಾಡಿದ್ದಾರೆ.


ಶಿಂಧೆ ವಾಯ್ಸ್ ಓವರ್ ಬಗ್ಗೆ ಏನ್ ಹೇಳ್ತಾರೆ?
ವಾಯ್ಸ್ ಓವರ್ ಮತ್ತು ಮಿಮಿಕ್ರಿ ಕ್ಷೇತ್ರದ ಬಗ್ಗೆ ಉತ್ಸುಕರಾಗಿರುವವರಿಗೆ ಒಂದು ಸಲಹೆಯನ್ನು ಹಂಚಿಕೊಂಡ ಅವರು, ಅನುಕರಣೆ ಮಾಡುವಾಗ ಯಾರೂ ಯಾರನ್ನೂ ಅಣಕಿಸಬಾರದು ಎಂದು ಹೇಳಿದರು. "ಎಂದಿಗೂ ವಿಷಯಗಳನ್ನು ಅತಿಯಾಗಿ ಮಾಡಬೇಡಿ ಮತ್ತು ನೀವು ಅನುಕರಿಸುತ್ತಿರುವ ವ್ಯಕ್ತಿಯ ಚಾರಿತ್ರ್ಯಕ್ಕೆ ಬದ್ಧರಾಗಿರಿ" ಎಂದು ಅವರು ಹೇಳಿದರು.


ಇದನ್ನೂ ಓದಿ:  Kantara-Actor Chetan: ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದ ನಟ ಚೇತನ್! ರಿಷಬ್ ಶೆಟ್ಟಿ ಹೇಳಿದ್ದೇನು?


"ಇಂದು, ನಾನು ಸಾಕಷ್ಟು ಖ್ಯಾತಿ ಗಳಿಸಿದ್ದೇನೆ ಮತ್ತು ನನ್ನ ಪ್ರತಿಭೆಯಿಂದಾಗಿ ವಿವಿಧ ದೇಶಗಳಿಗೆ ಪ್ರಯಾಣಿಸಿದ್ದೇನೆ. ನನಗೆ ಇದರ ಬಗ್ಗೆ ತುಂಬಾನೇ ಖುಷಿಯಿದೆ ಮತ್ತು ನನ್ನ ವೃತ್ತಿಯನ್ನು ತ್ಯಜಿಸಿದ್ದರ ಬಗ್ಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ" ಎಂದು ಶಿಂಧೆ ಕೊನೆಯಲ್ಲಿ ಹೇಳಿದರು.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು