Sumanth Akkineni: ನಾಗಾರ್ಜುನ ಫ್ಯಾಮಿಲಿಯ ಸುಮಂತ್​ಗೆ ಎರಡನೇ ಮದುವೆ; ಹುಡುಗಿ ಯಾರು? ಹೇಗಿದೆ ತಯಾರಿ?

ಈ ಮೊದಲು ಸುಮಂತ್​​ ಕೀರ್ತಿ ರೆಡ್ಡಿ ಎಂಬುವವರನ್ನು 2004ರಲ್ಲಿ ಮದುವೆಯಾಗಿದ್ದರು. ಬಳಿಕ 2006ರಲ್ಲಿ ಪರಸ್ಪರ ಬೇರೆ-ಬೇರೆಯಾಗುತ್ತಿರುವುದಾಗಿ ಘೋಷಿಸಿ, ವಿಚ್ಛೇದನ ಪಡೆದಿದ್ದರು. ಇದು ಅಕ್ಕಿನೇನಿ ಕುಟುಂಬಸ್ಥರಿಗೆ ಶಾಕಿಂಗ್ ವಿಷಯವಾಗಿತ್ತು.

ಸುಮಂತ್ ಕುಮಾರ್

ಸುಮಂತ್ ಕುಮಾರ್

  • Share this:
    ಅಕ್ಕಿನೇನಿ ಕುಟುಂಬದ ಸುಮಂತ್ ಕುಮಾರ್ ಯರ್ಲಗಡ್ಡ ತೆಲುಗಿನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್​ ಅವರ ಹಿರಿಯ ಮೊಮ್ಮಗ. ಸತ್ಯಂ, ಗೌರಿ, ಗೋದಾವರಿ, ಮಧುಮಾಸಂ, ಗೋಲ್ಕಂಡ ಹೈ ಸ್ಕೂಲ್​ ಮತ್ತು ಮಲ್ಲಿ ರಾವಾ ಇನ್ನೂ ಮೊದಲಾದ ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದಾರೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಸದ್ಯ ಸುಮಂತ್ ಕುಮಾರ್​ ಅವರದ್ದೇ ಚರ್ಚೆಯಾಗಿದೆ. ಇತ್ತೀಚಿಗೆ ಬಂದ ಅಪ್​​ಡೇಟ್ಸ್​ ಪ್ರಕಾರ, ಸುಮಂತ್ ಅವರು ಮತ್ತೊಮ್ಮೆ ಮದುವೆಯಾಗಲು ಮುಂದಾಗಿದ್ದಾರಂತೆ. ಹೌದು, ಇದು ಸುಮಂತ್ ಕುಮಾರ್ ಅವರ ಎರಡನೇ ಮದುವೆಯಾಗಿದೆ. ಈಗ ಟಾಲಿವುಡ್​ನಲ್ಲಿ ಇವರ ಮದುವೆಯದ್ದೇ ಬಿಸಿ-ಬಿಸಿ ಚರ್ಚೆಯಾಗಿದೆ.

    ಸುಮಂತ್​ ಪವಿತ್ರ ಎಂಬ ಹೆಸರಿನ ಹುಡುಗಿಯನ್ನು ಮದುವೆಯಾಗಲಿದ್ದಾರಂತೆ. ಸುಮಂತ್ ಹಾಗೂ ಮದುವೆಯಾಗುವ ಹುಡುಗಿ ಪವಿತ್ರ ಇಬ್ಬರೂ ಒಟ್ಟಿಗೆ ಮದುವೆ ಆಮಂತ್ರಣವನ್ನು ತಮ್ಮ ಗೆಳೆಯರಿಗೆ ಮತ್ತು ಆತ್ಮೀಯರಿಗೆ ಕಳುಹಿಸಿದ್ದಾರೆ. ವೆಡ್ಡಿಂಗ್ ಕಾರ್ಡ್​​ನಲ್ಲಿ ಎಸ್​ಪಿ ಎಂಬ ಅಕ್ಷರಗಳಿವೆ. ಎಸ್​ ಎಂದರೆ ಸುಮಂತ್, ಪಿ ಎಂದರೆ ಪವಿತ್ರ.

    ಇದನ್ನೂ ಓದಿ:ಜನಪರ ಆಡಳಿತ ನೀಡುವುದೇ ನಮ್ಮ ಗುರಿ, ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವೆ; ನೂತನ ಸಿಎಂ ಬಸವರಾಜ್ ಬೊಮ್ಮಾಯಿ

    ಈ ಮೊದಲು ಸುಮಂತ್​​ ಕೀರ್ತಿ ರೆಡ್ಡಿ ಎಂಬುವವರನ್ನು 2004ರಲ್ಲಿ ಮದುವೆಯಾಗಿದ್ದರು. ಬಳಿಕ 2006ರಲ್ಲಿ ಪರಸ್ಪರ ಬೇರೆ-ಬೇರೆಯಾಗುತ್ತಿರುವುದಾಗಿ ಘೋಷಿಸಿ, ವಿಚ್ಛೇದನ ಪಡೆದಿದ್ದರು. ಇದು ಅಕ್ಕಿನೇನಿ ಕುಟುಂಬಸ್ಥರಿಗೆ ಶಾಕಿಂಗ್ ವಿಷಯವಾಗಿತ್ತು. ಕಳೆದ ವರ್ಷ ಸಂದರ್ಶನವೊಂದರಲ್ಲಿ, ಮದುವೆಯಾದ 2 ವರ್ಷಗಳ ಬಳಿಕ ಕೀರ್ತಿ ರೆಡ್ಡಿ ನಾನು ಬೇರೆಯಾಗಿದ್ದೇವೆ. ಆಕೆ ಮತ್ತೊಂದು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವಳು ಈಗ ಖುಷಿಯಾಗಿದ್ದಾಳೆ. ಆಕೆ ನನ್ನ ಮಾಜಿ ಹೆಂಡತಿಯಾಗಿದ್ದರೂ, ನಾವು ಈಗಲೂ ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿಕೊಂಡಿದ್ದರು.

    ಕೀರ್ತಿ ರೆಡ್ಡಿ ಮತ್ತು ಸುಮಂತ್ ಯಾವ ಸಿನಿಮಾದಲ್ಲೂ ಒಟ್ಟಿಗೆ ನಟಿಸಿಲ್ಲ. ಇಬ್ಬರೂ ಹೇಗೆ ಪ್ರೀತಿಯಲ್ಲಿ ಬಿದ್ದರು ಎಂಬುದೂ ಸಹ ಯಾರಿಗೂ ಗೊತ್ತಿಲ್ಲ. ತುಂಬಾ ದಿನಗಳವರೆಗೂ ಇವರು ಪ್ರೀತಿ ಮಾಡಿರಲಿಲ್ಲ. ಈಗ ಸುಮಂತ್ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ.

    ಇದನ್ನೂ ಓದಿ:ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಬಿಎಸ್​ವೈ, ಕಿಚ್ಚ ಸುದೀಪ್

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Latha CG
    First published: