ವಯಸ್ಸಾದಷ್ಟು ಮಾಗುತ್ತಿದೆ ಸುಮಲತಾ-ಅಂಬಿಯ ಪ್ರೀತಿ: ಇಲ್ಲಿದೆ ಒಲವು ತುಂಬಿದ ಟ್ವೀಟ್​...!

news18
Updated:July 28, 2018, 12:41 PM IST
ವಯಸ್ಸಾದಷ್ಟು ಮಾಗುತ್ತಿದೆ ಸುಮಲತಾ-ಅಂಬಿಯ ಪ್ರೀತಿ: ಇಲ್ಲಿದೆ ಒಲವು ತುಂಬಿದ ಟ್ವೀಟ್​...!
news18
Updated: July 28, 2018, 12:41 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಅಂತಾರೆ. ಅದು ಆಗಾಗ ಕೆಲವೊಂದು ಘಟನೆಗಳಿಂದ ಸತ್ಯವೆನಿಸುತ್ತದೆ. ಹೌದು ಗಂಡ-ಹೆಂಡತಿ ನಡುವಿನ ಪ್ರೀತಿ ವಯಸ್ಸಾಗುತ್ತಿದ್ದಂತೆ ಮತ್ತಷ್ಟು ಮಾಗುತ್ತದೆ ಎನ್ನುತ್ತಾರೆ. ಅದು ಸುಮಲತಾ-ಅಂಬರೀಷ ದಂಪತಿ ವಿಷಯದಲ್ಲಂತೂ ಸತ್ಯ. ಈಗ ಏಕೆ ಸುಮಲತಾ-ಅಂಬಿಯ ಪ್ರೀತಿಯ ವಿಷಯ ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ಹೌದು ಸ್ಯಾಂಡಲ್​ವುಡ್​ನ ಒಂದು ಕಾಲದ ಹಿಟ್​ ಜೋಡಿ ಸುಮಲತಾ-ಅಂಬರೀಷ ವಿವಾಹವಾಗಿ ದಶಕಗಳೇ ಕಳೆದಿದೆ. ಆದರೂ ಈ ಜೋಡಿಯ ಲವ್​ ಸ್ಟೋರಿ ಇಂದಿನ ಪೀಳಿಗೆಗೂ ಕುತೂಹಲ ಮೂಡಿಸುತ್ತದೆ. ಸದ್ಯ ಅಂಬಿ ವಿಭಿನ್ನ ಲುಕ್​ ಹಾಗೂ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ತೆರೆಗಪ್ಪಳಿಸಲು ಸಿದ್ಧಗೊಳ್ಳುತ್ತಿದೆ.

ಸುದೀಪ್​ ಅವರ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಅಂಬಿಯ ಹೊಸ ಲುಕ್​ಗೆ ಸುಮಲತಾ ಫುಲ್​ ಫಿದಾ ಆಗಿದ್ದಾರೆ. ಹೌದು ಹಿಂದೆಂದೂ ಅಂಬಿಯನ್ನು ಹೀಗೆ ಯಾರೂ ನೋಡಿರಲಿಲ್ಲ. ಯಾರೋ ಏಕೆ ಖುದ್ದು ಸುಮಲತಾ ಅವರೇ ನೋಡಿರಲಿಲ್ಲ. ಅದಕ್ಕೆ ಸುಮಲತಾ ತನ್ನ ಗಂಡನಿಗೆ ಪ್ರೀತಿ ತುಂಬಿದ ಟ್ವೀಟ್​ ಮೂಲಕ ಮತ್ತೊಮ್ಮೆ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾರೆ.

'ಹಿಂದೆಂದೂ ನೋಡ ಅವತಾರದಲ್ಲಿ ನೋಡುತ್ತಿದ್ದೇನೆ. ಹೀಗೆ ನೋಡಲು ಬಹಳ ನಿರೀಕ್ಷಿಸಿದ್ದೆ' ಎಂದು ಸುಮಲತಾ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಅಂಬಿ ಲುಕ್​ಗೆ ಫಿದಾ ಆಗಿ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಈ ಸಿನಿಮಾದಲ್ಲಿ ಅಂಬಿಯ ಯೌವ್ವನದ ಪಾತ್ರದಲ್ಲಿ ಸುದೀಪ್​ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ನಿರ್ದೇಶಕ ಗುರುದತ್​ ಗಾಣಿಗ, ಕಿಚ್ಚ ಸುದೀಪ್​ ಹಾಗೂ ಸುಹಾಸಿನಿ ಅವರಿಗೆ ಸುಮಲತಾ ಶುಭ ಕೋರಿದ್ದಾರೆ.

 

First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626