Amar Movie: ಮಗನ ಚೊಚ್ಚಲ ಸಿನಿಮಾ ನೋಡಲು ಹೋಗಿ ಅಂಬಿ ಬಗ್ಗೆ ಭಾವುಕರಾಗಿ ಟ್ವೀಟ್​ ಮಾಡಿದ ಸುಮಲತಾ..!

Amar Movie: ಅಂಬಿ ಕಂಡಿದ್ದ ಕಡೆಯ ಕನಸು ಇಂದು ನನಸಾಗಿದೆ. ಮಗ ಅಭಿಷೇಕ್​ ಅಭಿನಯದ ಅಮರ್​ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮಗ ಸಿನಿಮಾದ ಫಸ್ಟ್​ ಶೋ ನೋಡುವುದರೊಂದಿಗೆ ಅದರ ಕುರಿತಾದ ಕ್ಷಣಕ್ಷಣದ ಮಾಹಿತಿಯನ್ನು ಸುಮಲತಾ ತಮ್ಮ ಟ್ವಿಟರ್​ನಲ್ಲಿ ಕೊಡುತ್ತಿದ್ದಾರೆ.

Anitha E | news18
Updated:May 31, 2019, 6:47 PM IST
Amar Movie: ಮಗನ ಚೊಚ್ಚಲ ಸಿನಿಮಾ ನೋಡಲು ಹೋಗಿ ಅಂಬಿ ಬಗ್ಗೆ ಭಾವುಕರಾಗಿ ಟ್ವೀಟ್​ ಮಾಡಿದ ಸುಮಲತಾ..!
ಅಮ್ಮ ಸುಮಲತಾ ಜತೆ ಅಭಿಷೇಕ್​
  • News18
  • Last Updated: May 31, 2019, 6:47 PM IST
  • Share this:
- ಅನಿತಾ ಈ, 

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ಸುಮಲತಾರ ಜೀವನದಲ್ಲಿ ಎಲ್ಲವೂ ಶುಭವಾಗುತ್ತಿದೆ. ಇಂದು ಅಭಿಷೇಕ್​ ಅಭಿನಯದ 'ಅಮರ್​' ಸಿನಿಮಾ ಎಲ್ಲೆಡೆ ಬಿಡುಗಡೆಯಾಗಿ ಉತ್ತಮ ಪ್ರತ್ರಿಕ್ರಿಯೆ ಪಡೆದುಕೊಳ್ಳುತ್ತಿದೆ.

ಮಗನ ಚೊಚ್ಚಲ ಸಿನಿಮಾವನ್ನು ಫಸ್ಟ್​ ಡೇ, ಫಸ್ಟ್​ ಶೋ ನೋಡುವ ಖುಷಿಯೇ ಬೇರೆ. ಸುಮಲತಾ ಸಹ ಅದನ್ನು ಮಿಸ್​ ಮಾಡಿಕೊಳ್ಳಲಿಲ್ಲ. ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 'ಅಮರ್​' ಚಿತ್ರದ ಮೊದಲ ಆಟವನ್ನು ನೋಡಿ ಆನಂದಿಸಿದ್ದಾರೆ.

ಮಗನನ್ನು ಸ್ಯಾಂಡಲ್​ವುಡ್​ನಲ್ಲಿ ನಾಯಕನಾಗಿ ನೋಡಬೇಕೆನ್ನುವುದು ಅಂಬಿಯ ಕನಸಾಗಿತ್ತು. ಆದರೆ ಅದು ಈಡೇರುವ ಮುನ್ನವೇ ಅವರು ಇಹ ಲೋಹ ತ್ಯಜಿಸಿದರು. ಮಗನ ಸಿನಿಮಾ ತೆರೆಕಂಡ ಸುಸಂದರ್ಭದಲ್ಲಿ ಸುಮಲತಾ ಅಂಬಿಯನ್ನೂ ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ: Amar Movie: ರಾಜ್ಯಾದ್ಯಂತ ಬಿಡುಗಡೆಯಾಗಿದೆ 'ಅಮರ್​': ಯಂಗ್​ ರೆಬೆಲ್​ ಸ್ಟಾರ್​ಗೆ ಶುಭಹಾರೈಕೆಯ ಸುರಿಮಳೆ

ಮಗನ ಸಿನಿಮಾ ನೋಡುತ್ತಾ ಅವರು ಅಂಬಿ ಅಭಿನಯದ ಸಿನಿಮಾ ಬಗ್ಗೆ ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ.



'ಇದೇ ಚಿತ್ರಮಂದಿರದಲ್ಲಿ ಲೆಂಜೆಡ್ ಸೃಷ್ಟಿಯಾಗಿದ್ದು...ಅಂಬರೀಷ್​ ಅಭಿನಯದ ನೂರನೇ ಸಿನಿಮಾ 'ಹಾಂಗ್​ಕಾಂಗ್​ನಲ್ಲಿ ಏಜೆಂಟ್​ ಅಮರ್​' ಸಿನಿಮಾ ಶತದಿನ ಪೂರ್ತಿ ಮಾಡಿತ್ತು. ಅಲ್ಲೇ ಮಗನ ಮೊದಲ ಸಿನಿಮಾದ ಮೊದಲ ಪ್ರದರ್ಶನ ನೋಡುತ್ತಿರುವುದು ಥ್ರಿಲ್​ ಎನಿಸುತ್ತಿದೆ'​ ಎಂದು ಸುಮಲತಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Amar Movie: ಅಮರ್​ ಸಿನಿಮಾ ಬಿಗುಡೆಗೂ ಮುನ್ನ ಲಕ್ಷ ರೂಪಾಯಿ ಕೊಟ್ಟು ಮೊದಲ ಶೋ ಟಿಕೆಟ್​ ಖರೀದಿಸಿದ ಅಭಿಮಾನಿ

ಮಂಡ್ಯದಲ್ಲೂ ಸುಮಲತಾ ಅವರು ಮನಗ ಸಿನಿಮಾ ನೋಡಲು ಹೋಗಿದ್ದಾರೆ. ಅಲ್ಲಿನ ಸಂಜಯ್​ ಚಿತ್ರಮಂದಿರದಲ್ಲಿ 'ಅಮರ್​' ಸಿನಿಮಾ ಪ್ರದರ್ಶನ ಚಿತ್ರವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 



ಮಗನ ಸಿನಿಮಾದ ಬಗ್ಗೆ ಮಾಹಿತಿ ಕೊಡುವುದರೊಂದಿಗೆ ಕಲಾವಿದೆಯಾಗಿ ಯುವ ಕಲಾವಿದನಿಗೆ ಸ್ವಾಗತಿಸಿದ್ದಾರೆ ಸುಮಕ್ಕ.



ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ನಾಗಶೇಖರ್ ನಿರ್ದೇಶನದ 'ಅಮರ್​' ಸಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಬಾಕ್ಸಾಫಿಸ್​ನಲ್ಲಿ 'ಅಮರ್​' ಯಾವ ರೀತಿಯ ಜಾದೂ ಮಾಡುತ್ತಾನೆ ಅಂತ ಕಾದುನೋಡಬೇಕಿದೆಯಷ್ಟೆ.

PHOTOS: ಗೌನ್​ನಲ್ಲಿ ಮಿಂಚುತ್ತಿರುವ ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ..!

First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...