• Home
  • »
  • News
  • »
  • entertainment
  • »
  • ಮಂಡ್ಯ ರಾಜಕಾರಣದಲ್ಲಿ ಇನ್ನೂ ನಂದದ ಬೆಂಕಿ: ಸುಮಲತಾ ಮಾತ್ರ ಕೂಲ್ ಕೂಲ್ !

ಮಂಡ್ಯ ರಾಜಕಾರಣದಲ್ಲಿ ಇನ್ನೂ ನಂದದ ಬೆಂಕಿ: ಸುಮಲತಾ ಮಾತ್ರ ಕೂಲ್ ಕೂಲ್ !

ನಟಿ ಸುಮಲತಾ

ನಟಿ ಸುಮಲತಾ

ಸುಮಲತಾ ಅಭಿನಯದ 'ಡಾಟರ್ ಆಫ್ ಪಾರ್ವತಮ್ಮ' ಮೇ 24ಕ್ಕೆ ಅಂದರೆ ಲೋಕಸಭಾ ಚುನಾವಣಾ ಫಲಿತಾಂಶ ಬಂದ ಮಾರನೇ ದಿನವೇ ರಿಲೀಸ್ ಆಗ್ತಿದೆ. ಆದರೆ ಜಿದ್ದಾಜಿದ್ದಿನ ಮಂಡ್ಯ ಫಲಿತಾಂಶದ ಟೆನ್ಶನ್ ಇಲ್ಲದಂತೆ ಸುಮಲತಾ ಕೂಲಾಗಿದ್ದಾರೆ.

  • News18
  • 4-MIN READ
  • Last Updated :
  • Share this:

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಇದೆ. ಬಹು ನಿರೀಕ್ಷಿತ ಮಂಡ್ಯ ಚುನಾವಣಾ ಕಣದಲ್ಲಿರೋ ಸುಮಲತಾ ಅಂಬರೀಷ್​ ಇವತ್ತು ತಮ್ಮ ಅಭಿನಯದ ಚಿತ್ರ 'ಡಾಟರ್ ಆಫ್ ಪಾರ್ವತಮ್ಮ' ಆಡಿಯೋ ಬಿಡುಗಡೆಗೆ ಬಂದಿದ್ದರು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಲತಾ ಅವರು, ದೇಶದ ಗಮನವನ್ನೇ ತನ್ನತ್ತ ಸೆಳೆದಿರೋ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಏನಂದ್ರು ಗೊತ್ತಾ..? ಇಲ್ಲಿದೆ ಮಂಡ್ಯ ಗೌಡ್ತಿಯ ಮಾತು ಮತ್ತು ಕಥೆ.


'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಸುಮಲತಾ ಪಾತ್ರ ಸಖತ್ ಪವರ್​ ಫುಲ್​ ಆಗಿದೆ. ಪಾರ್ವತಮ್ಮ ಪಾತ್ರದಲ್ಲಿ ನಟಿಸಿರೋ ಸುಮಲತಾ ಸಿನಿಮಾ ಮೇ 24ಕ್ಕೆ ಅಂದರೆ ಲೋಕಸಭಾ ಚುನಾವಣಾ ಫಲಿತಾಂಶ ಬಂದ ಮಾರನೇ ದಿನವೇ ರಿಲೀಸ್ ಆಗ್ತಿದೆ. ಆದರೆ ಜಿದ್ದಾಜಿದ್ದಿನ ಮಂಡ್ಯ ಫಲಿತಾಂಶದ ಟೆನ್ಶನ್ ಇಲ್ಲದಂತೆ ಸುಮಲತಾ ಕೂಲಾಗಿದ್ದರು.


ಇದನ್ನೂ ಓದಿ: KGF Chapter 2: ಹೊಸ ದಾಖಲೆಯತ್ತ 'ಕೆ.ಜಿ.ಎಫ್​ ಚಾಪ್ಟರ್​ 2': ಇದರ ಬಜೆಟ್​ ಕೇಳಿದ್ರೆ ದಂಗಾಗುತ್ತೀರಾ..!


'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಹರಿಪ್ರಿಯಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ನವನಟ ಸೂರಜ್ ಇಲ್ಲಿ ಹರಿಪ್ರಿಯಾಗೆ ಜೋಡಿಯಾಗಿದ್ದಾರೆ. ಚಿತ್ರತಂಡದವರೆಲ್ಲರೂ ಸುಮಲತಾ ಅವರಿಗೆ ಚುನಾವಣಾ ಫಲಿತಾಂಶಕ್ಕೆ ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲೇ ಶುಭಕೋರಿದ್ದು ವಿಶೇಷವಾಗಿತ್ತು.


ಇನ್ನು ನಟಿ ಸುಮಲತಾ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದಲ್ಲಿ ನಟಿಸೋಕೂ ಕಾರಣವಿದೆ. ಇದು ನಾಯಕಿ ಪ್ರಧಾನ ಸಿನಿಮಾ. ಹೆಣ್ಣನ್ನು ಸಮಾಜದಲ್ಲಿ ಅಬಲೆ, ದುರ್ಬಲ ಎಂದು  ಅಂತ ಕಡೆಗಣಿಸುತ್ತಾರೆ. ಆದರೆ ಹೆಣ್ಣಿನ ಶಕ್ತಿ ಏನು ಅಂತ ತೋರಿಸುವ ಈ ಸಿನಿಮಾದ ಕಥೆ ಇವತ್ತಿನ ರಾಜಕೀಯಕ್ಕೂ ಸರಿಹೊಂದುತ್ತದೆ ಎಂದರು. ಈ ಮಾತನ್ನು ಹೇಳುವ ಮೂಲಕ ಮಂಡ್ಯದಲ್ಲಿ ತಮ್ಮನ್ನು ಕಡಮೆ ಮಾಡಿ ನೋಡಲಾಗಿತ್ತು ಅಂತ ಪರೋಕ್ಷವಾಗಿ ತಿರುಗೇಟು ಕೊಟ್ಟರು.


'ಇದು ನನ್ನ ಸಿನಿಮಾ ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಯಾವ ರಾಜಕೀಯ ಒತ್ತಡಾನೂ ಇಲ್ಲ. ಚುನಾವಣಾ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿಲ್ಲ. ನಾನು ಅಷ್ಟೊಂದು ಚಿಂತೆ ನಾನು ಮಾಡಲ್ಲ. ಅಂಬರೀಷ್​ ಚುನಾವಣಾ ಫಲಿತಾಂಶ ಇದ್ದಾಗ ಬಿಂದಾಸ್ ಆಗಿ ಇರುತ್ತಿದ್ದರು. ಆದರೆ ನನಗೆ ಸ್ವಲ್ಪ ಕುತೂಹಲವಿದೆ. ದಿನಕ್ಕೊಂದು ಸಮೀಕ್ಷೆ ಬರುತ್ತಿದೆ. ಅದರ ಕುರಿತು ನಾನೇನು ಚಿಂತಿಸುತ್ತಿಲ್ಲ. ನರೇಂದ್ರ ಸ್ವಾಮಿ- ಅನ್ನದಾನಿ ನಡುವಿನ ಮನಸ್ತಾಪಕ್ಕೆ ನಾನು ಕಾರಣವಲ್ಲ. ಅದು ಅವರ ವೈಯಕ್ತಿಕ‌ ವಿಚಾರ‌ ಎಂದು ಸಮಾಧಾನದಿಂದಲೇ ಉತ್ತರಿಸಿದರು ಸುಮಲತಾ.


'ಅಮರ್' ಸಿನಿಮಾನಾ ಇನ್ನೂ ನಾನು ನೋಡಿಲ್ಲ. 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ನನ್ನ ಸಿನಿಮಾ ಅನ್ನೋಕಿಂತ ಹರಿಪ್ರಿಯಾ ಸಿನಿಮಾ. 'ಜೋಡೆತ್ತು' ಹಾಗೂ 'ನಿಖಿಲ್ ಎಲ್ಲಿದ್ದೀಯಪ್ಪಾ' ಸಿನಿಮಾಗಳಿಗೆ ಒಳ್ಳೆಯದಾಗಲಿ. ಎಂದರು ಅವರು.


ಇದನ್ನೂ ಓದಿ: KGF Chapter 2: ನಿನ್ನೆಯಿಂದ ಆರಂಭವಾಗಿದೆ 'ಕೆ.ಜಿ.ಎಫ್​ ಚಾಪ್ಟರ್​ 2' ಚಿತ್ರೀಕರಣ


ಮೇ 23 , 24 ಎರಡೂ ದಿನ ಸುಮಲತಾ ಅಮ್ಮ‌ ಅದ್ಭುತವಾಗಿ ಅಮ್ಮ‌ ಮಿಂಚಲಿ‌ ಅಂತ ನಟ ಡಾಲಿ ಧನಂಜಯ್ ಹೇಳಿದ್ದಾರೆ. ಡಾಲಿ ಈ ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆದಿರುವುದು ಈ ಸಿನಿಮಾದ ಮತ್ತೊಂದು ಹೈಲೈಟ್​.


ಮಂಡ್ಯ ಚುನಾವಣೆ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದರೆ, ಇತ್ತ ಸುಮಲತಾ ಕೂಲ್ ಆಗಿದ್ದಾರೆ. 23ಕ್ಕೆ ಮಂಡ್ಯ ಫಲಿತಾಂಶ ಬಂದರೆ 24ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಆದರೆ ಮಂಡ್ಯ ಗೌಡ್ತಿ ಮಾತ್ರ ಇದೆಲ್ಲವನ್ನೂ ಸಮಾಧಾನದಿಂದ ಸ್ವೀಕರಿಸುವಂತೆ ಕಾಣ್ತಿದೆ.

Published by:Anitha E
First published: