ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಹಾಗೂ ನಟಿ ಸುಮಲತಾ ಅಂಬರೀಶ್ (Sumalatha Ambareesh) ಅವರ ವಿವಾಹದ ದಿನ (Wedding Anniversary) ಇಂದು. ಸ್ಯಾಂಡಲ್ವುಡ್ನಲ್ಲಿ (Sandalwood) ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಂತಹ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. 1991ರಲ್ಲಿ ಡಿಸೆಂಬರ್ 8ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಸ್ಯಾಂಡಲ್ವುಡ್ ಜೋಡಿಗೆ ಒಬ್ಬ ಮಗನಿದ್ದಾನೆ. ಇದೀಗ ಅಂಬರೀಶ್ ಅವರು ಜೊತೆಗಿರದಿದ್ದರೂ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರು ಪತಿಗಾಗಿ ಭಾವುಕ ಬರಹವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಮದುವೆ, ಪತಿಯ ನೆನಪುಗಳು, ದಾಂಪತ್ಯ ಜೀವನವನ್ನು ನೆನಪಿಸಿಕೊಂಡಿದ್ದಾರೆ.
ಸುಮಲತಾ ಅವರು ಮೋಷನ್ ಪಿಕ್ಚರ್ ಒಂದನ್ನು ಶೇರ್ ಮಾಡಿದ್ದು ಇದಕ್ಕೆ ಮ್ಯೂಸಿಕ್ ಕೂಡಾ ಸೇರಿಸಿದ್ದಾರೆ. ಇದರಲ್ಲಿ ಸುಮಲತಾ ಹಾಗೂ ಅಂಬರೀಶ್ ಅವರ ಕ್ಯೂಟ್ ಆದ ಫೋಟೋ ಇದೆ.
ಪೋಸ್ಟ್ನಲ್ಲಿ ಬರೆದಿದ್ದೇನು?
ನಿಮ್ಮೊಂದಿಗೆ ಹೆಜ್ಜೆ ಹಾಕಿದ ಆ ದಿನ, ಆ ಕ್ಷಣ ನಿತ್ಯವೂ ಹೊಸ ಪುಳಕ. ತುಳಿದ ಸಪ್ತಪದಿಯಲ್ಲೂ ನಿಮ್ಮದೇ ಗುಣಗಾನ. ನನ್ನ ಬದುಕಿಗೆ ಬಾಳ ಸಂಗಾತಿಯಾಗಿ ನೀವು ಬಂದ ದಿನದಿಂದಲೂ ನನ್ನೊಳಗೆ ಹೊಸ ಸಂಭ್ರಮ. ಮದುವೆ ದಿನದ ಎಲ್ಲ ನೆನಪುಗಳ ಜೊತೆ ನೀವು ಇದ್ದೀರಿ, ಮತ್ತೆ ಮತ್ತೆ ಆ ದಿನವನ್ನು ನೆನಪಿಸುತ್ತೀರಿ. 31 ವರ್ಷಗಳಲ್ಲಿ ಜೀವಮಾನದ ನೆನಪುಗಳನ್ನು ಬಿತ್ತಿದ್ದೀರಿ. ನೀವು ನೀಡಿದ ಪ್ರೀತಿ ಮತ್ತು ಬಾಂಧವ್ಯದ ಕುರುಹುಗಳು ನನ್ನ ಜೀವಿತಾವಧಿಯ ಕೊಡುಗೆಗಳು ಎಂದು ಸುಮಲತಾ ಅವರು ಬರೆದಿದ್ದಾರೆ.
View this post on Instagram
ಇದನ್ನೂ ಓದಿ: Vaishnavi Gowda: ಮೊದಲ ಬಾರಿ ಮೌನ ಮುರಿದ ವೈಷ್ಣವಿ ಗೌಡ ತಾನು ಡಿಪ್ರೆಷನ್ಗೆ ಹೋಗಿಲ್ಲ ಅಂದ್ರು
ಅಂಬರೀಶ್ ಅವರು 1980 ರ ದಶಕದಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮಗಳಾದ್ಯಂತ ತಮ್ಮ ಸ್ನೇಹದಿಂದಲೇ ಗುರುತಿಸಲ್ಪಟ್ಟರು. ರಜನಿಕಾಂತ್, ಮಮ್ಮುಟ್ಟಿ, ಮೋಹನ್ ಲಾಲ್, ಸುಹಾಸಿನಿ ಮಣಿರತ್ನಂ, ಚಿರಂಜೀವಿ, ವೆಂಕಟೇಶ್ ದಗ್ಗುಬಾಟಿ, ಆರ್.ಶರತ್ಕುಮಾರ್, ರಾಧಿಕಾ, ಜಯರಾಮ್, ನರೇಶ್, ಅರ್ಜುನ್ ಸರ್ಜಾ, ರಮೇಶ್ ಅರವಿಂದ್ ಸೇರಿದಂತೆ ಬಹಳಷ್ಟು ನಟರು ಅಂಬರೀಷ್ ಅವರಿಗೆ ಆಪ್ತರು.
1972 ರಲ್ಲಿ ನಾಗರಹಾವು ಚಿತ್ರದ ಮೂಲಕ ತಮ್ಮ ಡಿಬಟ್ ಸಿನಿಮಾ ಮಾಡಿದಾಗಿನಿಂದ ವಿಷ್ಣುವರ್ಧನ್ ಜೊತೆ 2009 ರಲ್ಲಿ ಅವರ ಮರಣದವರೆಗೂ ನಿಕಟ ಸಂಬಂಧವನ್ನು ಉಳಿಸಿಕೊಂಡರು. ಇವರು ಸ್ಯಾಂಡಲ್ವುಡ್ನಲ್ಲಿ ಫೇಮಸ್ ಕುಚಿಕು ಗೆಳೆಯರು.
ಇತ್ತೀಚೆಗೆ ವಿಷ್ಣು ಮನೆಯ ಗೃಹ ಪ್ರವೇಶಕ್ಕೂ ಹೋಗಿದ್ದರು ಸುಮಲತಾ
ಅಂಬರೀಶ್ ಅವರ ಸ್ನೇಹ ಸಂಬಂಧಗಳನ್ನು ಹಾಗೆಯೇ ನಿಭಾಯಿಸುತ್ತಿರುವ ಸುಮಲತಾ ಅವರು ಇತ್ತೀಚೆಗೆ ವಿಷ್ಣುವರ್ಧನ್ ಅವರ ಮನೆಯ ಗೃಹಪ್ರವೇಶದಲ್ಲಿ ಭಾಗವಹಿಸಿ ಶುಭ ಹಾರೈಸಿದ್ದರು.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ