‘ಪೈಲ್ವಾನ್’ ಟೀಸರ್ ನೋಡಿದ ಪ್ರೇಕ್ಷಕರು ‘ಸುಲ್ತಾನ್’ ಚಿತ್ರದ ಬಗ್ಗೆ ಮಾತನಾಡ್ತಿರೋದೇಕೆ?

ಈಗಾಗಲೇ ಬಾಕ್ಸಿಂಗ್​ ಆಧರಿಸಿ ಅನೇಕ ಸಿನಿಮಾಗಳು ತೆರೆಕಂಡಿವೆ. ‘ಸುಲ್ತಾನ್​’ ಚಿತ್ರದಲ್ಲಿ ಕುಸ್ತಿಪಟುವಾಗಿ ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದರು. ಈಗ ನಿರ್ದೇಶಕ ಕೃಷ್ಣ ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕುಸ್ತಿಪಟುವಿನ ಕಥೆಯನ್ನು ಅವರು ಹೇಳ ಹೊರಟಿದ್ದಾರೆ.

Rajesh Duggumane | news18
Updated:January 21, 2019, 8:50 PM IST
‘ಪೈಲ್ವಾನ್’ ಟೀಸರ್ ನೋಡಿದ ಪ್ರೇಕ್ಷಕರು ‘ಸುಲ್ತಾನ್’ ಚಿತ್ರದ ಬಗ್ಗೆ ಮಾತನಾಡ್ತಿರೋದೇಕೆ?
ಸುದೀಪ್​-ಸಲ್ಮಾನ್​
Rajesh Duggumane | news18
Updated: January 21, 2019, 8:50 PM IST
‘ಕಿಚ್ಚ’ ಸುದೀಪ್​ ನಟನೆಯ ‘ಪೈಲ್ವಾನ್​’ ಪೋಸ್ಟರ್​ ಮೂಲಕವೇ ಸದ್ದು ಮಾಡಿರುವ ಸಿನಿಮಾ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್​ ಚಿತ್ರದ ಮೇಲಿನ ನಿರೀಕ್ಷೆಗೆ ಮೈಲೇಜ್​ ನೀಡಿದ್ದಂತೂ ಸುಳ್ಳಲ್ಳ. ಪೈಲ್ವಾನ್​ ಆಗಿ ಕಾಣಿಸಿಕೊಂಡ ಸುದೀಪ್​ ಅವರ ಕಟ್ಟುಮಸ್ತಾದ ದೇಹ, ಸಿಕ್ಸ್​​ ಪ್ಯಾಕ್​, ಎದುರಾಳಿಯನ್ನು ನೆಲಕ್ಕುರುಳಿಸುವ ಪರಿ ಪ್ರೇಕ್ಷಕನಿಗೆ ಇಷ್ಟವಾಗಿತ್ತು. ಈ ಮಧ್ಯೆ, ‘ಪೈಲ್ವಾನ್​’ ಟೀಸರ್​ ನೋಡಿದ ಅನೇಕರು ಇದನ್ನು ಸಲ್ಮಾನ್​ ಖಾನ್​ ನಟನೆಯ ‘ಸುಲ್ತಾನ್​’ ಚಿತ್ರದ ಟೀಸರ್​ಗೆ ಹೋಲಿಕೆ ಮಾಡುತ್ತಿದ್ದಾರೆ.

ಈಗಾಗಲೇ ಬಾಕ್ಸಿಂಗ್​ ಆಧರಿಸಿ ಅನೇಕ ಸಿನಿಮಾಗಳು ತೆರೆಕಂಡಿವೆ. ಅದರಲ್ಲಿ ಬಾಲಿವುಡ್ನ​ ‘ಸುಲ್ತಾನ್’​ ಹಾಗೂ ‘ದಂಗಲ್​’  ಕೂಡ ಸೇರಿದೆ. ‘ಸುಲ್ತಾನ್​’ ಚಿತ್ರದಲ್ಲಿ ಕುಸ್ತಿಪಟುವಾಗಿ ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ರೂ. ಗಳಿಕೆ ಮಾಡಿತ್ತು. ಈಗ ನಿರ್ದೇಶಕ ಕೃಷ್ಣ ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕುಸ್ತಿಪಟುವಿನ ಕಥೆಯನ್ನು ಅವರು ಹೇಳ ಹೊರಟಿದ್ದಾರೆ.

ಇದನ್ನೂ ಓದಿ: ಪೈಲ್ವಾನನ ಅವತಾರ ಮೆಚ್ಚಿದ ಸುಲ್ತಾನ: ಹೇಗಿದೆ ಗೊತ್ತಾ ಕಿಚ್ಚ-ಸಲ್ಲು ದೋಸ್ತಿ..?

‘ಪೈಲ್ವಾನ್​’ ಟೀಸರ್​ ನೋಡಿದರೆ ಒಮ್ಮೆ ‘ಸುಲ್ತಾನ್​’ ಟೀಸರ್​ ನೆನಪಾಗದೇ ಇರದು.  ಅದಕ್ಕೆ ಕಾರಣವೂ ಇದೆ. ‘ಪೈಲ್ವಾನ್​’ ಹಾಗೂ ‘ಸುಲ್ತಾನ್​’ ಎರಡರಲ್ಲೂ ಟೀಸರ್​ನಲ್ಲಿ ಹೆಸರು ತೋರಿಸುವಾಗ ಬಳಕೆ ಮಾಡಿಕೊಂಡ ಬ್ಯಾಗ್ರೌಂಡ್​ ಬಣ್ಣ ಒಂದೇ ತೆರನಾದದ್ದು. ಸುದೀಪ್​ ಸ್ಟೈಲ್​, ಎದುರಾಳಿಯನ್ನು ನೆಲಕ್ಕೆ ಬೀಳಿಸುವ ಶೈಲಿ, ಕುಸ್ತಿ ನಡೆವ ಅಖಾಡ ಹೀಗೆ ಎಲ್ಲವೂ ‘ಸುಲ್ತಾನ್​’ ಟೀಸರ್​​ಅನ್ನು ಒಮ್ಮೆ ನೆನಪಿಸುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗಾಗಿ ಸಲ್ಮಾನ್​ ಖಾನ್​ ಚಿತ್ರವನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕ ಕೃಷ್ಣ  ‘ಪೈಲ್ವಾನ್​’ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಅಂದಹಾಗೆ, ಕುಸ್ತಿಪಟುವಿನ ಮೇಲೆ ಸಿನಿಮಾ ಮಾಡುತ್ತಾರೆ ಎಂದಾದರೆ, ಅಲ್ಲಿ ಗರಡಿಮನೆ ತೋರಿಸಬೇಕು. ಮರಳು, ಕುಸ್ತಿಪಟುವಿನ ದೇಹ, ಕುಸ್ತಿ ನಡೆಯುವ ಅಖಾಡವನ್ನು ತೋರಿಸಲೇಬೇಕು. ಹಾಗಾಗಿ, ಸಲ್ಮಾನ್​ ಹಾಗೂ ಸುದೀಪ್​ ಚಿತ್ರಕ್ಕೆ ಸಾಮ್ಯತೆ ಕಂಡು ಬಂದಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಒತ್ತಾಯ ; ನ್ಯೂಸ್ 18 ಕನ್ನಡ ಅಭಿಯಾನಕ್ಕೆ 'ಕಿಚ್ಚ' ಸುದೀಪ್ ಬೆಂಬಲ

ಒಟ್ಟಿನಲ್ಲಿ, ‘ಪೈಲ್ವಾನ್​’ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೆ ಹೊಸ ಪ್ರಯೋಗ. ಈ ಸಿನಿಮಾಕ್ಕಾಗಿ ಸುದೀಪ್​ ಸಾಕಷ್ಟು ಶ್ರಮವಹಿಸಿದ್ದಾರೆ. ಅಷ್ಟಕ್ಕೂ ಸಿನಿಮಾ ಯಾವುದಾದರೂ ಚಿತ್ರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಮಾಡಿದ್ದಾರೋ ಅಥವಾ ಸ್ವಮೇಕೋ ಎಂಬ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಬೇಕು.
Loading...

First published:January 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ