Jacqueline Fernandez: ನಾನು ವಂಚಕನಲ್ಲ, ಜಾಕಲಿನ್​ ಜೊತೆ ಅಫೇರ್​ ಇದ್ದಿದ್ದು ನಿಜ ಎಂದ ಸುಕೇಶ್​!

ಇದೀಗ ವಿಚಾರಣೆಯಲ್ಲಿ ಮತ್ತೊಮ್ಮೆ ಜಾಕಲಿನ್​ ಬಗ್ಗೆ ಸುಕೇಶ್​ ಚಂದ್ರಶೇಖರ್​ ಹೇಳಿದ್ದಾರೆ. ನಾನು ವಂಚಕನಲ್ಲ(Not a conman), ಆಕೆ ಜೊತೆ ರಿಲೇಷನ್​ಶಿಪ್(Relationship)​ನಲ್ಲಿ ಇದ್ದಿದ್ದು ನಿಜ ದಯವಿಟ್ಟು ನನ್ನನ್ನು ನಂಬಿ. ಆಕೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾನಂತೆ.

ಜಾಕಲಿನ್​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​​

ಜಾಕಲಿನ್​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​​

  • Share this:
ಸುಕೇಶ್ ಚಂದ್ರಶೇಖರ್ (Sukesh Chandrasekhar) ಬಾಲಿವುಡ್ ನಟಿ ಜಾಕಲಿನ್​ ಫರ್ನಾಂಡಿಸ್ (Jacqueline Fernandez) ಜೊತೆ 500 ಕೋಟಿ ರೂಪಾಯಿ ಬಜೆಟ್‌ನ ದೊಡ್ಡ ಸರಣಿ ಚಿತ್ರಗಳನ್ನು ಮಾಡಲು ಬಯಸಿದ್ದರು ಎಂಬ ಮಾತುಗಳು ಬಲವಾಗಿ ಕೇಳಿ(Rumors) ಬಂದಿತ್ತು. ಇದಾದ ಬಳಿಕ ಒಟಿಟಿ ಮಾಧ್ಯಮದ ನಿರ್ಮಾಪಕರೊಬ್ಬರು ಅನಾಮಧೇಯತೆಯ ವಿನಂತಿಯ ಮೇರೆಗೆ, ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಕಥೆಯಲ್ಲಿ ಭಾರಿ ಆಸಕ್ತಿ ಇದೆ ಮತ್ತು ಅದರ ಕಾಲ್ಪನಿಕ ಕಥೆ ಮಾಡುವ ಯೋಜನೆ ಇದೆ ಎಂದು ಸುದ್ದಿ ಮಾಧ್ಯಮಕ್ಕೆ ಹೇಳಿದರು. "ಈ ಪ್ರಕರಣದ ವಿಷಯದ ಬಗ್ಗೆ ವೆಬ್ ಸೀರಿಸ್ ಅಥವಾ ಸಾಕ್ಷ್ಯಚಿತ್ರವನ್ನಾಗಿ ಮಾಡಬಹುದು” ಎಂದು ಹೇಳಿದ್ದರು. ಇದೀಗ ವಿಚಾರಣೆಯಲ್ಲಿ ಮತ್ತೊಮ್ಮೆ ಜಾಕಲಿನ್​ ಬಗ್ಗೆ ಸುಕೇಶ್​ ಚಂದ್ರಶೇಖರ್​ ಹೇಳಿದ್ದಾರೆ. ನಾನು ವಂಚಕನಲ್ಲ(Not a conman), ಆಕೆ ಜೊತೆ ರಿಲೇಷನ್​ಶಿಪ್(Relationship)​ನಲ್ಲಿ ಇದ್ದಿದ್ದು ನಿಜ ದಯವಿಟ್ಟು ನನ್ನನ್ನು ನಂಬಿ. ಆಕೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾನಂತೆ. ಇವನ ಮಾತುಗಳು ಕೇಳಿ ಅಧಿಕಾರಿಗಳೇ ಶಾಕ್​ ಆಗಿದ್ದರಂತೆ. ಜಾಕಲಿನ್​ ಸುಳ್ಳು ಹೇಳಿಬಹುದೆಂದು ಅಧಿಕಾರಿಗಳು ಹೇಳಿದ್ದಾರಂತೆ

ಜಾಕಲಿನ್​ ಜೊತೆ ಅಫೇರ್​ ಇದ್ದಿದ್ದು ನಿಜ ಎಂದ ಸುಕೇಶ್​!

ಇನ್ನೂ ಈ ಹಿಂದೆಯೆ ಜಾಕಲಿನ್​ ಜೊತೆ ಸಂಬಂಧ ಇರುವುದಾಗಿ ಸುಕೇಶ್​ ಹೇಳಿದ್ದ. ಈ ಬಗ್ಗೆ ಜಾಕಲಿನ್​ ಮಾತ್ರ ತುಟಿ ಬಿಚ್ಚಿರಲಿಲ್ಲ. ಆತ ನನಗೆ ಪರಿಚಯ ಅಷ್ಟೆ. ನಮ್ಮ ನಡುವೆ ಯಾವುದೇ ಅಫೇರ್​ ಇರಲಿಲ್ಲ. ಇದರಿಂದ ಆತ ವಂಚಕ ಎಂದು ನನಗೆ ಗೊತ್ತಾಗಿದೆ. ಆತನ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಮತ್ತೆ ಸುಕೇಶ್​ ಆಕೆ ನನ್ನ ಜೊತೆ ಸಂಬಂಧ ಹೊಂದಿದ್ದಳು. ಈಗ ಸುಳ್ಳು ಹೇಳುತ್ತಿದ್ದಾಳೆ. ನಾನು ಕಳ್ಳ ಅಲ್ಲ. ನನ್ನನ್ನು ನಂಬಿ ಎಂದು ಹೇಳಿದ್ದಾನಂತೆ. ಇತ್ತೀಚೆಗೆ ಜಾಕಲಿನ್​ಗೆ ಈತ ಕೊಟ್ಟಿದ್ದ ಗಿಫ್ಟ್​ ಬಗ್ಗೆಯೂ ಸುಕೇಶ್​ ಚಂದ್ರಶೇಖರ್​ ಮಾಹಿತಿ ನೀಡಿದ್ದ.

ಇದನ್ನು ಓದಿ : ಲಿಯೋನಾರ್ಡೋ ಡಿಕ್ಯಾಪ್ರಿಯೋ ಜೊತೆ ನಟಿಸುವ ಚಾನ್ಸ್ ಕೊಡಿಸ್ತೀನಿ ಅಂತ ಕಾಗೆ ಹಾರಿಸಿದ್ನಂತೆ ಸುಕೇಶ್​!

500 ಕೋಟಿ ಬಜೆಟ್​ನ ಸಿನಿಮಾದ ಪ್ರಾಮಿಸ್!
ಇತ್ತೀಚೆಗೆ ಸುದ್ದಿ ಮಾಧ್ಯಮವೊಂದು ಬಿತ್ತರಿಸಿದ ವರದಿಯು ಸುಕೇಶ್ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರ ಜೊತೆಗೆ, ಜಾಕ್ವೆಲಿನ್ ಅನ್ನು ಹಾಕಿಕೊಂಡು ಸರಣಿ ಚಲನಚಿತ್ರಗಳನ್ನು ಸಹ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 500 ಕೋಟಿ ರೂಪಾಯಿಗಳ 3 ಭಾಗಗಳನ್ನು ಹೊಂದಿರುವ ಮಹಿಳಾ ಸೂಪರ್ ಹೀರೋ ಸರಣಿ ಚಿತ್ರಗಳನ್ನು ಮಾಡುವ ಯೋಜನೆಯ ಬಗ್ಗೆ ಇವರು ನಟಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.


ಇದನ್ನು ಓದಿ : ಜಾಕಲಿನ್​ ಫರ್ನಾಂಡಿಸ್​ ಅಸಲಿ ಬಣ್ಣ ತೆರೆದಿಟ್ಟ ಸುಕೇಶ್​: ಏನೆಲ್ಲಾ ಗಿಫ್ಟ್​ ಕೊಟ್ಟಿದ್ದಾನಪ್ಪ..!

‘ಲಿಯೋನಾರ್ಡೋ  ಜೊತೆ ನಟಿಸುವ ಚಾನ್ಸ್​ ಕೊಡಿಸ್ತೀನಿ’
 ಇದನ್ನು ಕೇಳಿದ ನಿಮಗೆ ಶಾಕ್​ ಆಗಿರಬಹುದು. ಆದರೂ, ಇದು ನಿಜ ಜಾಕಲಿನ್​ ಫರ್ನಾಂಡಿಸ್‌ಗೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಆಫರ್ ಕೊಡಿಸುವೆ ಎಂದು ಆರೋಪಿ ಸುಖೇಶ್ ಚಂದ್ರಶೇಖರ್ ಪ್ರಾಮಿಸ್ ಮಾಡಿದ್ದರು. ‘’ನನಗೆ ಹಾಲಿವುಡ್ ತಾರೆಯರ ಜೊತೆಗೆ ನಂಟಿದೆ. ಹೀಗಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೊಡಿಸುತ್ತೇನೆ. ಅದರಲ್ಲೂ ಜನಪ್ರಿಯ ನಟ ಲಿಯೋನಾರ್ಡೋ ಡಿಕ್ಯಾಪ್ರಿಯೋ(Leonardo DiCaprio) ಜೊತೆ ನಟಿಸುವ ಚಾನ್ಸ್ ಕೊಡಿಸುವೆ’’ ಅಂತ ಜಾಕಲಿನ್ ಫರ್ನಾಂಡಿಸ್‌ಗೆ ಸುಖೇಶ್ ಚಂದ್ರಶೇಖರ್ ಆಶ್ವಾಸನೆ ನೀಡಿದ್ರಂತೆ. ಈತನ ಮಾತಿಗೆ ಮರುಳಾದ ಜಾಕಲಿನ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
Published by:Vasudeva M
First published: