ರಾಜಕಾರಣಿ ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ (Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು (Bengaluru) ಮೂಲದ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar) ಜತೆ ಶ್ರೀಲಂಕಾ (Sri Lanka) ಮೂಲದ ಬಾಲಿವುಡ್ (Bollywood) ನಟಿ ಜಾಕ್ವೆಲಿನ್ ಫರ್ನಾಂಡಿಸ್ ( Jacqueline fernandez) ಹೆಸರು ತಳುಕು ಹಾಕಿಕೊಂಡಿದ್ದು, ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ವಿಚಾರಣೆ ಎದುರಿಸಿರೋ ನಟಿ ಮಾತ್ರ ಈ ಬಗ್ಗೆ ನನಗೇನು ಗೊತ್ತಿಲ್ಲ ಆತ ನನಗೆ ಪರಿಚಯ ಅಷ್ಟೇ ಅಂತ ಕಲರ್ ಕಲರ್ ಕಾಗೆ ಹಾರಿಸಿದರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಇವರಿಬ್ಬರ ಕಿಸ್ಸಿಂಗ್(Kissing) ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆಕೆ ನನ್ನೊಂದಿಗೆ ಡೇಟಿಂಗ್(Dating) ಮಾಡುತ್ತಿದ್ದಳು ಅಂತ ವಂಚಕ ಸುಕೇಶ್ ಚಂದ್ರಶೇಖರ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಆದರೆ ಈ ಆರೋಪವನ್ನು ಜಾಕಲಿನ್ ಫರ್ನಾಂಡಿಸ್ ತಳ್ಳಿ ಹಾಕಿದ್ದರು. ಆ ರೀತಿಯ ಯಾವುದೇ ರಿಲೇಷನ್ಶಿಪ್(Relationship) ನಮ್ಮ ಮಧ್ಯೆ ಇರಲಿಲ್ಲ ಎಂದು ಹೇಳಿದ್ದರು. ಇದೀಗ ಸುಕೇಶ್ ಚಂದ್ರಶೇಖರ್ ಜಾಕಲಿನ್ ಫರ್ನಾಂಡಿಸ್ಗೆ ಕೊಟ್ಟಿದ್ದ ಗಿಫ್ಟ್(Gift)ಗಳ ಮಾಹಿತಿಯನ್ನು ವಿಚಾರಣೆಯಲ್ಲಿ ಹೇಳಿದ್ದಾನೆ. ಇದನ್ನು ಕೇಳಿದ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಅಬ್ಬಬ್ಬಾ ಏನೆಲ್ಲಾ ಗಿಫ್ಟ್ ಕೊಟ್ಟಿದ್ದಾನೆ ನೋಡಿ..!
ವಿಚಾರಣೆ ಆರಂಭದಿಂದಲೂ ಸುಕೇಶ್ ಚಂದ್ರಶೇಖರ್, ಜಾಕಲಿನ್ ಬಗ್ಗೆ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಆಕೆ ನನಗೆ ಚೆನ್ನಾಗಿ ಗೊತ್ತು. ಡೇಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದರು. ಇದೀಗ ‘ನಾನು 15 ಕಿವಿಯೋಲೆ ನೀಡಿದ್ದೇನೆ. ನೆಕ್ಲೆಸ್ ಉಡುಗೊರೆ ಮಾಡಿದ್ದೇನೆ. ದುಬಾರಿ ಬ್ಯಾಗ್ ನೀಡಿದ್ದೇನೆ. ಕಿವಿಯೋಲೆ ಹಾಗೂ ನೆಕ್ಲೆಸ್ ಬೆಲೆ 7 ಕೋಟಿಗೂ ಅಧಿಕವಾಗಿರಬಹುದು. ಜಾಕಲಿನ್ ಸಹೋದರಿಗೆ 1.50 ಲಕ್ಷ ಸಾಲ ನೀಡಿದ್ದಾಗಿ ಜಾಕ್ವೆಲಿನ್ ಹೇಳಿದ್ದಾರೆ. ಅದು ಸುಳ್ಳು. ನಾನು 1.80 ಲಕ್ಷ ಹಣ ಮತ್ತು ಬಿಎಂಡಬ್ಲ್ಯೂ ಎಕ್ಸ್5 ಉಡುಗೊರೆ ಕೊಟ್ಟಿದ್ದೇನೆ. ಇದರ ಜತೆ ಹಲವು ದುಬಾರಿ ಉಡುಗೊರೆ ಕೊಟ್ಟಿದ್ದೇನೆ’ ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾನೆ.
ಇದನ್ನು ಓದಿ : ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್ ಆಗ್ತಿತ್ತೋ..!
ಎಲ್ಲ ಸುಳ್ಳು ಅಂತ ಓಳ್ ಬಿಟ್ಟ ಜಾಕಲಿನ್ ಫರ್ನಾಂಡಿಸ್!
‘ನನಗೆ ಸುಕೇಶ್ ಯಾರು ಎಂಬುದು ಗೊತ್ತಿಲ್ಲ. ಏಕೆಂದರೆ ಈಗ ಬಂಧನಕ್ಕೆ ಒಳಗಾದ ವ್ಯಕ್ತಿ ನನ್ನ ಬಳಿ ಬಂದು ಶೇಖರ್ ರತ್ನ ವೇಲಾ ಎಂದು ಪರಿಚಯಿಸಿಕೊಂಡಿದ್ದ. ಸನ್ ಟಿವಿ ನೆಟ್ವರ್ಕ್ನ ಮಾಲೀಕ ನಾನು ಎಂದು ಆತ ಪರಿಚಯಿಸಿಕೊಂಡಿದ್ದ. ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಿತಾ ಅವರ ಸಂಬಂಧಿ ಎಂದೂ ಹೇಳಿದ್ದ. ಆತ ನನ್ನ ದೊಡ್ಡ ಫ್ಯಾನ್ ಎಂದು ಬಿಂಬಿಸಿಕೊಂಡಿದ್ದ. ಸನ್ ಟಿವಿ ದಕ್ಷಿಣದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲಿ ನೀವು ನಟಿಸಬೇಕು ಎಂದು ಆತ ಹೇಳಿಕೊಂಡಿದ್ದ’ ಎಂದಿದ್ದಾರೆ ನಟಿ.
ಇದನ್ನು ಓದಿ : ಅಯ್ಯಯ್ಯೋ ಏನಾಯ್ತು ಈ ನಟಿಗೆ.. ನೋರಾ ಫತೇಹಿಯನ್ನು ಸ್ಟ್ರೆಚರ್ನಲ್ಲಿ ಎತ್ತೊಯ್ದ ಸಿಬ್ಬಂದಿ!
ಸಿನಿಮಾ ಆಫರ್ ಮಾಡಿದ್ದನಂತೆ ಸುಕೇಶ್!
‘ನನಗೆ ಫೆಬ್ರವರಿ ತಿಂಗಳಲ್ಲಿ ಆತನ ಪರಿಚಯವಾಗಿತ್ತು. ಸಿನಿಮಾದಲ್ಲಿ ನಟಿಸುವು ಆಫರ್ ನೀಡಿದ್ದ. ಅವರನ್ನು ನಾನು ನಂಬಿದ್ದೆ. ಇದರ ಜೊತೆ ನನ್ನ ಕುಟುಂಬಸ್ಥರಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದ ಅಷ್ಟೆ’ ಎಂದು ಜಾಕಲಿನ್ ಫರ್ನಾಂಡಿಸ್ ಹೇಳಿಕೊಂಡಿದ್ದರು. ಪ್ರತಿ ದಿನ ಈ 200 ಕೋಟಿ ಹಗರಣದ ರೋಚಕ ಮಾಹಿತಿ ಹೊರಬರುತ್ತಲೇ ಇದೆ. ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿದ್ದಾಗ, ಈತನನ್ನು ನೋಡಲು 12 ಖ್ಯಾತ ನಟಿಯರಯ ಬರುತ್ತಿದ್ದರು ಎಂಬ ಶಾಕಿಂಗ್ ವಿಚಾರ ತಿಳಿದುಬಂದಿತ್ತು. ಅವರಲ್ಲಿ ಜಾಕಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಬಿಟ್ಟು ಉಳಿದವರ ಹೆಸರು ಬಹಿರಂಗವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ