ಜಾಕಲಿನ್​​, ನೋರಾ ಬಳಿಕ ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​​ಗೆ ಸಂಕಷ್ಟ​: ಇವ್ನು ಹೇಳ್ತಿರೋದೆಲ್ಲ ನಿಜನಾ...?

ಜಾಕಲಿನ್​ ಫರ್ನಾಂಡಿಸ್​ ನಾನು ಡೇಟಿಂಗ್​ ಮಾಡುತ್ತಿದ್ವಿ ಎಂದು ಹೇಳಿದ್ದ. ಈ ಹೇಳಿಕೆ ಬಾಲಿವುಡ್​ ಅಂಗಳದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಇದೀಗ ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​ ಅವರ ಹೆಸರನ್ನು ಹೇಳಿದ್ದಾನೆ. 2015ರಿಂದ ನಾನು ಶ್ರದ್ಧಾ ಕಪೂರ್​ ಜೊತೆ ನಂಟು ಹೊಂದಿದ್ದೇನೆ ಎಂದು ವಂಚಕ ಸುಕೇಶ್​ ಚಂದ್ರಶೇಖರ್​ ಹೇಳಿದ್ದಾನೆ

ಶಿಲ್ಪಾ ಶೆಟ್ಟಿ, ಶ್ರದ್ಧಾ, ಜಾಕಲಿನ್​, ಸುಕೇಶ್​

ಶಿಲ್ಪಾ ಶೆಟ್ಟಿ, ಶ್ರದ್ಧಾ, ಜಾಕಲಿನ್​, ಸುಕೇಶ್​

  • Share this:
200 ಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶ್​ ಚಂದ್ರಶೇಖರ್​ ಲಾಕ್​ ಆಗಿದ್ದಾರೆ. ರಾಜಕಾರಣಿ ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ (Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು (Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ (Sri Lanka) ಮೂಲದ ಬಾಲಿವುಡ್‌ (Bollywood) ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ( Jacqueline fernandez) ಹೆಸರು ತಳುಕು ಹಾಕಿಕೊಂಡಿದ್ದು, ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ವಿಚಾರಣೆ ಎದುರಿಸಿರೋ ನಟಿ ಮಾತ್ರ ಈ ಬಗ್ಗೆ ನನಗೇನು ಗೊತ್ತಿಲ್ಲ ಆತ ನನಗೆ ಪರಿಚಯ ಅಷ್ಟೇ ಅಂತ ಕಲರ್​ ಕಲರ್​ ಕಾಗೆ ಹಾರಿಸಿದರಾ ಎಂಬ ಪ್ರಶ್ನೆ ಮೂಡಿದೆ. ಸದ್ಯ ಈ ವಿಚಾರಣೆ ಬಿರುಸು ಪಡೆದುಕೊಂಡಿದೆ. ಜಾಕ್ವಲಿನ್​ ಫರ್ನಾಂಡಿಸ್​, ನೋರಾ ಫತೇಹಿ ಅವರ ಬಳಿಕ ಇನ್ನೂ ಇಬ್ಬರು ನಟಿಯರ ಹೆಸರನ್ನು ಸುಕೇಶ್​ ಚಂದ್ರಶೇಖರ್​ ಹೇಳಿದ್ದಾನೆ. ಇದನ್ನು ಕೇಳಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಒಬ್ಬ ವಂಚಕನಿಗೆ ಈ ನಟಿಯರ ಜೊತೆ ಹೇಗೆ ಸಂಪರ್ಕವಾಯಿತು ಅಂತ ಶಾಕ್​ ಆಗಿದ್ದಾರೆ. ಜಾಕಲಿನ್​, ನೋರಾ ಯಾಕಪ್ಪ ಇವನ ಸಹವಾಸ ಮಾಡಿದ್ವಿ ಎಂದು ಟೆನ್ಶನ್​ ಆಗಿದ್ದಾರೆ. ಇದರ ಜೊತೆ ಈತ ಬಾಯ್ಬಿಟ್ಟ ಮತ್ತಿಬ್ಬರು ನಟಿಯರಿಗೂ ನಡುಕ ಶುರುವಾಗಿದೆ. 

ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​​ಗೂ ಸಂಕಷ್ಟ!

ಹಲವಾರು ನಟಿಯರ ಜೊತೆ ವಂಚಕ ಸುಕೇಶ್​ ಚಂದ್ರಶೇಖರ್​ ನಂಟು ಹೊಂದಿದ್ದ. ಈ ಬಗ್ಗೆ ಅಧಿಕಾರಿಗಳ ಮುಂದೆ ಆತ ಹೇಳಿರುವ ಹೇಳಿಕೆಗಳೂ ನಿಜಕ್ಕೂ ಶಾಕ್​ ನೀಡಲಿದೆ. ಜಾಕಲಿನ್​ ಫರ್ನಾಂಡಿಸ್​ ನಾನು ಡೇಟಿಂಗ್​ ಮಾಡುತ್ತಿದ್ವಿ ಎಂದು ಹೇಳಿದ್ದ. ಈ ಹೇಳಿಕೆ ಬಾಲಿವುಡ್​ ಅಂಗಳದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಇದೀಗ ಶಿಲ್ಪಾ ಶೆಟ್ಟಿ, ಶ್ರದ್ಧಾ ಕಪೂರ್​ ಅವರ ಹೆಸರನ್ನು ಹೇಳಿದ್ದಾನೆ. 2015ರಿಂದ ನಾನು ಶ್ರದ್ಧಾ ಕಪೂರ್​ ಜೊತೆ ನಂಟು ಹೊಂದಿದ್ದೇನೆ ಎಂದು ವಂಚಕ ಸುಕೇಶ್​ ಚಂದ್ರಶೇಖರ್​ ಹೇಳಿದ್ದಾನೆ. ನಾರ್ಕೋಟಿಕ್ಸ್​  ಕಂಟ್ರೋಲ್​ ಬ್ಯೂರೋ ಕೇಸ್​ನಲ್ಲಿ ಶ್ರದ್ಧಾ ಕಪೂರ್​ಗೆ ಸಹಾಯ ಮಾಡಿದ್ದೇ ನಾನು ಎಂದು ಹೇಳಿದ್ದಾನೆ.

ಇದನ್ನು ಓದಿ: ಜಾಕಲಿನ್​ ಫರ್ನಾಂಡಿಸ್​ ಅಸಲಿ ಬಣ್ಣ ತೆರೆದಿಟ್ಟ ಸುಕೇಶ್​: ಏನೆಲ್ಲಾ ಗಿಫ್ಟ್​ ಕೊಟ್ಟಿದ್ದಾನಪ್ಪ..! 

ರಾಜ್​ ಕುಂದ್ರಾ ರಿಲೀಸ್ ಆಗುವಂತೆ ಸಹಾಯ ಕೇಳಿದ್ರಂತೆ ಈ ನಟಿ!

ಶ್ರದ್ಧಾ ಕಪೂರ್​ ಬಗ್ಗೆ ಹೇಳಿದ್ದನ್ನು ಕೇಳಿ ಅಧಿಕಾರಿಗಳು ಸುಮ್ಮನಿದ್ದರು. ಆದರೆ ಶಿಲ್ಪಾ ಶೆಟ್ಟಿ ನಂಟಿನ ಜೊತೆ ಆತ ಹೇಳಿದ್ದನ್ನು ಕೇಳಿ ಪೊಲೀಸರೇ ಒಂದು ನಿಮಿಷ ಶಾಕ್ ಆಗಿದ್ದರಂತೆ. ಸೆಕ್ಸ್​ ರಾಕೆಟ್​ ಕೇಸ್​ನಲ್ಲಿ ಜೈಲು ಸೇರಿದ್ದ ರಾಜ್​ಕುಂದ್ರಾ ಬಿಡುಗಡೆ ಮಾಡಲು, ಶಿಲ್ಪಾ ಶೆಟ್ಟಿ ಈತನ ಸಹಾಯ ಕೇಳಿದ್ದರು ಎಂದು ಹೇಳಿದ್ದಾನೆ. ಹೀಗೆ  ಇಡಿ ಅಧಿಕಾರಿಗಳ ಮುಂದೆ ದಿನಕ್ಕೊಂಬರಂತೆ ಒಬ್ಬೊಬ್ಬರ ಹೆಸರನ್ನು ಸುಕೇಶ್​ ಚಂದ್ರಶೇಖರ್​ ಹೇಳುತ್ತಿದ್ದಾನೆ.  ಸದ್ಯಕ್ಕೆ ಶಿಲ್ಪಾ ಶೆಟ್ಟಿ ಹಾಗೂ ಶ್ರದ್ಧಾ ಕಪೂರ್​ ಹೆಸರು ತಳುಕು ಹಾಕಿಕೊಂಡಿದೆ. ಈ ವಿಚಾರ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಇದನ್ನು ಓದಿ :ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ಜಾಕಲಿನ್ ಅಸಲಿ ಮುಖ ತೆರೆದಿಟ್ಟ ಸುಕೇಶ್​!!

ವಿಚಾರಣೆ ಆರಂಭದಿಂದಲೂ ಸುಕೇಶ್​ ಚಂದ್ರಶೇಖರ್​, ಜಾಕಲಿನ್​ ಬಗ್ಗೆ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಆಕೆ ನನಗೆ ಚೆನ್ನಾಗಿ ಗೊತ್ತು. ಡೇಟಿಂಗ್​ ಮಾಡುತ್ತಿದ್ದೆ ಎಂದು ಹೇಳಿದ್ದರು. ಇದೀಗ ‘ನಾನು 15 ಕಿವಿಯೋಲೆ ನೀಡಿದ್ದೇನೆ. ನೆಕ್ಲೆಸ್ ಉಡುಗೊರೆ ಮಾಡಿದ್ದೇನೆ. ದುಬಾರಿ ಬ್ಯಾಗ್ ನೀಡಿದ್ದೇನೆ. ಕಿವಿಯೋಲೆ ಹಾಗೂ ನೆಕ್ಲೆಸ್​ ಬೆಲೆ 7 ಕೋಟಿಗೂ ಅಧಿಕವಾಗಿರಬಹುದು. ಜಾಕಲಿನ್​​ ಸಹೋದರಿಗೆ 1.50 ಲಕ್ಷ ಸಾಲ ನೀಡಿದ್ದಾಗಿ ಜಾಕ್ವೆಲಿನ್​ ಹೇಳಿದ್ದಾರೆ. ಅದು ಸುಳ್ಳು. ನಾನು 1.80 ಲಕ್ಷ ಹಣ ಮತ್ತು ಬಿಎಂಡಬ್ಲ್ಯೂ ಎಕ್ಸ್​5 ಉಡುಗೊರೆ ಕೊಟ್ಟಿದ್ದೇನೆ. ಇದರ ಜತೆ ಹಲವು ದುಬಾರಿ ಉಡುಗೊರೆ ಕೊಟ್ಟಿದ್ದೇನೆ’ ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾನೆ.
Published by:Vasudeva M
First published: