ಬಾಲಿವುಡ್​ ನಟಿ Jacqueline & ಸುಕೇಶ್ ಚಂದ್ರಶೇಖರ್ ಪ್ರಕರಣ ಸಿನಿಮಾ ಆಗಲಿದೆಯೇ?

Jacqueline Fernandez: ಒಟಿಟಿ ಮಾಧ್ಯಮದ ನಿರ್ಮಾಪಕರೊಬ್ಬರು ಅನಾಮಧೇಯತೆಯ ವಿನಂತಿಯ ಮೇರೆಗೆ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಕಥೆಯಲ್ಲಿ ಭಾರಿ ಆಸಕ್ತಿ ಇದೆ ಮತ್ತು ಅದರ ಕಾಲ್ಪನಿಕ ಕಥೆ ಮಾಡುವ ಯೋಜನೆ ಇದೆ ಎಂದು ಹೇಳಿದ್ದಾರೆ

 ನಟಿ ಜಾಕ್ವೆಲಿನ್ ಫರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್

  • Share this:
ನಿನ್ನೆ ಅಷ್ಟೇ ಸುಕೇಶ್ ಚಂದ್ರಶೇಖರ್ (Sukesh Chandrasekhar) ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಜೊತೆ 500 ಕೋಟಿ ರೂಪಾಯಿ ಬಜೆಟ್‌ನ ದೊಡ್ಡ ಸರಣಿ ಚಿತ್ರಗಳನ್ನು ಮಾಡಲು ಬಯಸಿದ್ದರು ಎಂಬ ಮಾತುಗಳು ಬಲವಾಗಿ ಕೇಳಿ(Rumors) ಬಂದ ಬೆನ್ನಲ್ಲೇ ಇಂದು ಈ ಪ್ರಕರಣದಲ್ಲಿ ಮತ್ತೊಂದು ಮಾಹಿತಿ ಹೊರ ಬಿದ್ದಿದೆ. ಸುಕೇಶ್ ಚಂದ್ರಶೇಖರ್‌ರೊಂದಿಗಿನ ಈ ನಟಿಯ ಒಡನಾಟವು ಕೆಲವು ಸಮಯದಿಂದ ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಚಂದ್ರಶೇಖರ್ ವಿರುದ್ಧ ದಾಖಲಾದ 200 ಕೋಟಿ ರೂಪಾಯಿಗಳ ಪಿಎಂಎಲ್‌ಎ ಪ್ರಕರಣದಲ್ಲಿ(PMLA case) ನಟಿಯನ್ನು ಜಾರಿ ನಿರ್ದೇಶನಾಲಯವು (Enforcement Directorate)ಹಲವಾರು ಬಾರಿ ಪ್ರಶ್ನಿಸಿದೆ.

ಜಾಕ್ವೆಲಿನ್ ಸಹೋದರಿ ಗೂ ಐಷಾರಾಮಿ ಉಡುಗೊರೆ
ಚಂದ್ರಶೇಖರ್ ನಟಿ ಜಾಕ್ವೆಲಿನ್‌ಗೆ ಸಾಕಷ್ಟು ಐಷಾರಾಮಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿತ್ತು, ಇದರಲ್ಲಿ ಜಿಮ್ ಉಡುಗೆಗಳು, ಬೂಟುಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, ಬಳೆಗಳು ಸೇರಿವೆ. ಜತೆಗೆ ಜಾಕ್ವೆಲಿನ್‌ಗೆ ಮಿನಿ ಚಾಪರ್ ಅನ್ನು ನೀಡಿದರು, ಅದನ್ನು ಜಾಕ್ವೆಲಿನ್‌ ಹಿಂತಿರುಗಿಸಿದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಕಲಿನ್​ ಫರ್ನಾಂಡಿಸ್​ ಅಸಲಿ ಬಣ್ಣ ತೆರೆದಿಟ್ಟ ಸುಕೇಶ್​: ಏನೆಲ್ಲಾ ಗಿಫ್ಟ್​ ಕೊಟ್ಟಿದ್ದಾನಪ್ಪ..!

ಈ ಪ್ರಕರಣದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್ ಪ್ರಕಾರ ಅಮೆರಿಕದಲ್ಲಿ ವಾಸಿಸುತ್ತಿರುವ ಜಾಕ್ವೆಲಿನ್ ಸಹೋದರಿ ಜೆರಾಲ್ಡಿನ್ ಫರ್ನಾಂಡಿಸ್‌ಗೆ ಸುಕೇಶ್‌ ಬಿಎಂಡಬ್ಲ್ಯು ಕಾರನ್ನು ಸಹ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಲಾಗಿದೆ.

ನಟಿ ನೋರಾ ಫತೇಹಿಗೂ ಉಡುಗೊರೆ
ಈ ಉಡುಗೊರೆಗಳು ಮತ್ತು ಐಷಾರಾಮಿ ವಸ್ತುಗಳನ್ನು ಕೇವಲ ಜಾಕ್ವೆಲಿನ್‌ಗೆ ನೀಡಿಲ್ಲ, ಚಂದ್ರಶೇಖರ್ ಇನ್ನೊಬ್ಬ ನಟಿ ನೋರಾ ಫತೇಹಿಗೆ ಕೂಡ ಹೀಗೆ ಉಡುಗೊರೆಗಳನ್ನು ನೀಡಿದ್ದಾರೆ. ಸುದ್ದಿ ಮಾಧ್ಯಮದ ಬಳಿ ಲಭ್ಯವಿರುವ ಚಾಟ್‌ಗಳ ಪ್ರಕಾರ, ಚಂದ್ರಶೇಖರ್ ನಟಿ ನೋರಾರನ್ನು ರೇಂಜ್ ರೋವರ್ ಕಾರು ಇಷ್ಟವೇ ಎಂದು ಕೇಳಿದ್ದರಂತೆ. ಇದಕ್ಕೆ ನೋರಾ "ಹೌದು, ಇದು ಒಳ್ಳೆಯ ಕಾರು, ಇದು ಕ್ಯೂಟಾಗಿದೆ, ಇದು ಸ್ಟೇಟ್‌ಮೆಂಟ್‌ ಕಾರ್" ಅಂತ ಹೇಳಿದ್ದಳಂತೆ.

ಮತ್ತೊಂದು ಸಂಭಾಷಣೆಯಲ್ಲಿ, ಸುಕೇಶ್ ನಟಿ ನೋರಾಗೆ "ನೀವು ಎಲ್ಲವನ್ನೂ ಸ್ಪಷ್ಟಪಡಿಸಲು ಒಂದು ನಿಮಿಷ ಸಮಯ ತೆಗೆದುಕೊಂಡು ಮಾತನಾಡಲು ಸಾಧ್ಯವಾದರೆ ನಾನು ಅದನ್ನು ತುಂಬಾ ಪ್ರಶಂಸಿಸುತ್ತೇನೆ. ಈ ಉಡುಗೊರೆ ಏಕೆ ಎಂದು ನೀವು ಆಶ್ಚರ್ಯ ಪಡುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಯಾವುದೇ ರೀತಿಯ ಉದ್ದೇಶದಿಂದ ನೀಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೆ ನೀವು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟಾಗ, ನೀವು ಅವರಿಗೆ ಉಡುಗೊರೆಗಳನ್ನು ನೀಡುತ್ತೀರಿ. ಆ ಕಾರಣಕ್ಕಾಗಿ ಮಾತ್ರ ಅದನ್ನು ಮಾಡುವುದು, ಬೇರೇನೂ ಅಲ್ಲ" ಎಂದು ಬರೆದಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದಂತೆ ನೋರಾ ಮತ್ತು ಜಾಕ್ವೆಲಿನ್ ಇಬ್ಬರನ್ನೂ ಇಡಿ ಅನೇಕ ಬಾರಿ ಪ್ರಶ್ನಿಸಿದೆ. ಚಂದ್ರಶೇಖರ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.

ಈ ಪ್ರಕರಣವನ್ನು ವೆಬ್ ಸೀರಿಸ್ ಅಥವಾ ಚಿತ್ರ ಮಾಡಲಿದ್ದಾರೆಯೇ?
ಈ ಎಲ್ಲಾ ಸುದ್ದಿಯ ಮಧ್ಯೆ, ಒಟಿಟಿ ಮಾಧ್ಯಮದ ನಿರ್ಮಾಪಕರೊಬ್ಬರು ಅನಾಮಧೇಯತೆಯ ವಿನಂತಿಯ ಮೇರೆಗೆ, ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಕಥೆಯಲ್ಲಿ ಭಾರಿ ಆಸಕ್ತಿ ಇದೆ ಮತ್ತು ಅದರ ಕಾಲ್ಪನಿಕ ಕಥೆ ಮಾಡುವ ಯೋಜನೆ ಇದೆ ಎಂದು ಸುದ್ದಿ ಮಾಧ್ಯಮಕ್ಕೆ ಹೇಳಿದರು. "ಈ ಪ್ರಕರಣದ ವಿಷಯದ ಬಗ್ಗೆ ವೆಬ್ ಸೀರಿಸ್ ಅಥವಾ ಸಾಕ್ಷ್ಯಚಿತ್ರವನ್ನಾಗಿ ಮಾಡಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ಆದ್ದರಿಂದ, ಇದನ್ನು ಹೇಗೆ ಒಂದು ಚಲನಚಿತ್ರ ಅಥವಾ ವೆಬ್ ಸೀರಿಸ್ ಆಗಿ ಪರಿವರ್ತಿಸುವುದು ಎಂದು ಚರ್ಚಿಸುತ್ತಿರುವ ನಿರ್ಮಾಪಕರ ದೊಡ್ಡ ಸಾಲು ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಯೋಜನೆಯಲ್ಲಿ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಪಾತ್ರದಲ್ಲಿ ಯಾರು ನಟಿಸಿದರೆ ಸೂಕ್ತ ಎಂಬುದರ ಬಗ್ಗೆ ಕೆಲವು ಹೆಸರುಗಳನ್ನು ಸಹ ಚರ್ಚಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: